ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ: ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಎಫ್‌ಐಸಿ ಕಾಲುವೆ ನಿರ್ಮಾಣಕ್ಕೆ ಅವಶ್ಯವಿರುವ ₹ ೨೦೦ ಕೋಟಿ ಅನುದಾನವನ್ನು ಸರ್ಕಾರದಿಂದ ಒದಗಿಸುವದರೊಂದಿಗೆ ಸಂಪೂರ್ಣ ಕೆಲಸ ಮುಗಿಸಿಕೊಡುತ್ತೇನೆ ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ: ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಎಫ್‌ಐಸಿ ಕಾಲುವೆ ನಿರ್ಮಾಣಕ್ಕೆ ಅವಶ್ಯವಿರುವ ₹ ೨೦೦ ಕೋಟಿ ಅನುದಾನವನ್ನು ಸರ್ಕಾರದಿಂದ ಒದಗಿಸುವದರೊಂದಿಗೆ ಸಂಪೂರ್ಣ ಕೆಲಸ ಮುಗಿಸಿಕೊಡುತ್ತೇನೆ ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.
ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಎಫ್‌ಐಸಿ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ರೈತರು ಹಾಗೂ ೩೮ ಗ್ರಾಮಸ್ಥರರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬೂದಿಹಾಳ-ಫೀರಾಪೂರ ₹ ೨೦೦ ಕೋಟಿ ದೊಡ್ಡ ಅಮೌಂಟ್ ಅಲ್ಲ. ನಾನು ಇಲ್ಲಿಗೆ ಬಂದು ಹೋಗಿದ್ದೇನೆ ಎಂದ ಮೇಲೆ ಕೆಲಸ ಆಯಿತೆಂದು ತಿಳಕೊಳ್ಳಿ ಎಂದರು. ಅಲ್ಲದೇ, ಸ್ಥಳದಲ್ಲಿಯೇ ಕೆಬಿಜೆಎನ್‌ಎಲ್ ಎಂಡಿ ಮೋಹನ್‌ರಾಜ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಟೆಂಡರ್ ಕರೆಯಲು ಎಷ್ಟು ದಿನ ಆಗುತ್ತದೆ. ಇದಕ್ಕೆ ತಗಲುವ ವೆಚ್ಚದ ಬಗ್ಗೆ ಮಾಹಿತಿ ಪಡೆದುಕೊಂಡರು. ೩ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಇನ್ನು ೩ ತಿಂಗಳಲ್ಲಿ ಕೆಲಸ ಮುಗಿಯುತ್ತದೆ ಎಂಬ ಮಾಹಿತಿಯನ್ನು ಹೋರಾಟಗಾರರಿಗೆ ನಿಡಿದರು. ಮುಂದಿನ ೬ ತಿಂಗಳಲ್ಲಿ ಸಂಪೂರ್ಣ ಕೆಲಸ ಮುಗಿಸಿಕೊಡುತ್ತೇನೆಂದು ಭರವಸೆ ನೀಡಿದರು.ರೈತರು ಔಟಲೈಟ್ ಬಾಕ್ಸ್ ಕಡಿಮೆ ಇವೆ ಹೆಚ್ಚಿಗೆ ಆಗಬೇಕೆಂದು ಮನವಿ ಮಾಡಿದಾಗ ಅಧಿಕಾರಿಗಳಿಗೆ ಮಾಹಿತಿ ಕೇಳಿದಾಗ ಸರ್ವೇ ನಂಬರ್‌ಗೆ ಒಂದರಂತೆ ಔಟಲೈಟ್‌ನ್ನು ಕೊಡಲಿದ್ದಾರೆ. ನಿಮಗೆ ಯಾವ ರೀತಿ ನೀರು ಬಳೆಕೆ ಮಾಡಿಕೊಳ್ಳಬೇಕು ಮಾಡಿಕೊಳ್ಳಿ. ವಿಜಯಪುರ-ಬಾಗಲಕೋಟೆ ಜಿಲ್ಲೆ ಬರಗಾಲದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಆದರೂ ಆಲಮಟ್ಟಿ ಡ್ಯಾಂ ಕಟ್ಟಲಾಗಿದೆ. ಪಂಚನದಿಗಳ ನಾಡು ಎಂಬ ಹೆಸರನ್ನು ಕೂಡಾ ಪಡೆದುಕೊಂಡಿದೆ. ಕೃಷ್ಣಾ, ಭೀಮ, ಮಲಪ್ರಭಾ, ಡೋಣಿ, ಘಟಪ್ರಭಾ ಐದು ನದಿಗಳು ಹರಿದರೂ ವಿಜಯಪುರ ಬರಗಾಲದ ಜಿಲ್ಲೆ ಎಂದು ಬ್ರೀಟಿಷರೇ ಘೋಷಣೆ ಮಾಡಿದ್ದಾರೆ.
ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಮಾತನಾಡಿ, ಔಟ್‌ಲೈಟ್ ಬಾಕ್ಸ್ ಹತ್ತಿರ ಕೃಷಿ ಹೊಂಡದ ರೀತಿ ನಿರ್ಮಿಸಿದರೆ ಆ ಬಾಕ್ಸ್ ಸಂಬಂಧಿಸಿದ ರೈತರು ಅದರಲ್ಲಿಯ ನೀರನ್ನು ತೆಗೆದುಕೊಳ್ಳಲು ಅನುಕೂಲವಾಗಲಿ. ಬಾಕ್ಸ್‌ನಿಂದ ಬರುವ ನೀರು ಆ ಜಮೀನಿನವರು ಮೊದಲು ನೀರು ತೆಗೆದುಕೊಳ್ಳುತ್ತಾರೆ. ತಮ್ಮ ತಮ್ಮ ಜಮೀನಿನಲ್ಲಿ ಪೈಪ್‌ಗಳನ್ನು ಕತ್ತರಿಸಿ ನೀರು ತೆಗೆದುಕೊಳ್ಳುವ ಕೆಲಸ ರೈತರು ಮಾಡುತ್ತಾರೆ. ಇದು ದೊಡ್ಡ ಸಮಸ್ಯೆಯಾಗಲಿದೆ. ಹೀಗಾಗಿ ಇದೊಂದು ಸಿಸ್ಟಮ್ ಸ್ಕೀಮ್‌ನಲ್ಲಿ ಸೇರಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರಿಗೆ ಶಾಸಕ ರಾಜುಗೌಡ ಪಾಟೀಲ ಮಾಹಿತಿ ನೀಡಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬರದಂತೆ ಯೋಜನೆ ಕಾರ್ಯಗತ ಮಾಡೋಣ ಎಂದು ತಿಳಿಸಿದರು.ಈ ವೇಳೆ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಎಫ್‌ಐಸಿ ಕಾಲುವೆ ನಿರ್ಮಾಣ ಮಾಡಬೇಕು ಮತ್ತು ಔಟಲೈಟ್ ಬಾಕ್ಸ್ ಹೆಚ್ಚಿಗೆ ಕೂಡಿಸಬೇಕೆಂಬ ಬೇಡಿಕೆಗೆ ಹೋರಾಟ ನಡೆಸಲಾಗಿತ್ತು. ಇದಕ್ಕೆ ಸಚಿವ ಎಂ.ಬಿ.ಪಾಟೀಲರು ಧರಣಿ ಸ್ಥಳಕ್ಕೆ ಬಂದು ಯೋಜನೆಯನ್ನು ಮುಗಿಸಿಕೊಡುತ್ತೇವೆಂದು ಭರವಸೆ ನೀಡಿದ್ದಾರೆ. ೯ ದಿನಗಳ ಹೋರಾಟ ಅಂತ್ಯ ಗೊಳಿಸುತ್ತಿದ್ದೇವೆ. ೬ ತಿಂಗಳಲ್ಲಿ ಕೆಲಸ ಆಗದಿದ್ದರೆ ಎಂ.ಬಿ.ಪಾಟೀಲರ ಮನೆ ಮುಂದೆ ಹೋರಾಟ ನಡೆಯುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದರು.ಈ ವೇಳೆ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ, ಸುಭಾಸ ಛಾಯಾಗೋಳ, ಶರಣಪ್ಪ ಸುಣಗಾರ, ಸಂತೋಷ ದೊಡಮನಿ, ಸುರೇಶಬಾಬುಗೌಡ ಬಿರಾದಾರ, ಸುರೇಶ ನಾಡಗೌಡ, ರೈತ ಮುಖಂಡರಾದ ಸುರೇಶಕುಮಾರ ಇಂಗಳಗೇರಿ, ಪ್ರಭುಗೌಡ ಬಿರಾದಾರ(ಅಸ್ಕಿ), ಗುರುರಾಜ ಪಡಶೆಟ್ಟಿ, ರಾಯಪ್ಪಗೌಡ ಪಾಟೀಲ, ಸಾಹೇಬಗೌಡ ಯಾಳಗಿ, ಬಸನಗೌಡ ಯಾಳವಾರ, ಬಸನಗೌಡ ಚೌದ್ರಿ, ನಾನಾಗೌಡ ಬಿರಾದಾರ, ಎಚ್.ಎನ್.ಬಿರಾದಾರ, ಮಹಾದೇವ ಅಸ್ಕಿ, ಬಸವರಾಜ ಗೊರ್ಜಿ, ಆನಂದಗೌಡ ಪಾಟೀಲ, ಬಸನಗೌಡ ಹಳ್ಳಿಪಾಟೀಲ, ಗೌಡಪ್ಪಗೌಡ ಹಡಲಗೇರಿ, ಪರಶುರಾಮ ತಳವಾರ, ಪರಶುರಾಮ ನಾಲತವಾಡ, ಬಾಬುಗೌಡ ಬಿರಾದಾರ, ಚಿದುಗೌಡ ಬಿರಾದಾರ, ಶಂಕ್ರಗೌಡ ದೇಸಾಯಿ, ಬಸವರಾಜ ಹೊಸಳ್ಳಿ, ಸೋಮನಗೌಡ ಆನೇಸೂರ, ಒಳಗೊಂಡು ಕಲಕೇರಿ, ಜಲಪೂರ, ನಾವದಗಿ, ನೀರಲಗಿ, ಗೊಟಗುಣಕಿ, ಗುಂಡಕನಾಳ, ಫೀರಾಪೂರ, ಕಾರನೂರ, ಕೊಡಗಾನೂರ, ಅಸ್ಕಿ ಸೇರಿ ರೈತರು ಇದ್ದರು.------ಸಿದ್ದೇಶ್ವರ ಶ್ರೀ ಆಸೆ ಇಡೇರಿಸಿದ್ದೇನೆಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದಂತೆ ಈ ಭೂಮಿಗೊಂದು ಬೊಗಸೆ ನೀರು ಕೊಡಿ ಅಮೇರಿಕಾದ ಕ್ಯಾಲಿಪೋರ್ನಿಯಾ ಆಗುತ್ತದೆ ಎಂದಿದ್ದರು. ನಾನು ನೀರಾವರಿ ಸಚಿವನಿದ್ದಾಗ ಅವರು ಹೇಳಿದಂತೆ ಮಾಡಿದ್ದೇನೆ. ಹೀಗಾಗಿ ಸಿದ್ದೇಶ್ವರ ಸ್ವಾಮಿಜಿಗಳು ನನಗೆ ಆಧುನಿಕ ಭಗೀರಥ ಎಂದು ಬಿರುದು ನೀಡಿದ್ದಾರೆ. ಡಿಪಿಆರ್ ಎಲ್ಲರನ್ನು ಸಹಮತಕ್ಕೆ ತೆಗೆದುಕೊಂಡು ಶಾಸಕ ರಾಜುಗೌಡರನ್ನು ಒಮ್ಮತಕ್ಕೆ ತೆಗೆದುಕೊಂಡು ೬ ತಿಂಗಳಲ್ಲಿ ಸಂಪೂರ್ಣ ಕೆಲಸ ಮುಗಿಸುವುದಾಗಿ ತಿಳಿಸಿದರು. ಅಲ್ಲದೇ, ಸಪ್ಟಂಬರ್‌ನಲ್ಲಿ ವಿಜಯಪುರದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು, ಜಿಲ್ಲೆಗೆ ಹೊಸ ಕೊಡುಗೆಗಳು ಸಿಗಲಿವೆ. ಆ ಕ್ಯಾಬಿನೆಟ್‌ನಲ್ಲಿಯೇ ಬೂದಿಹಾಳ-ಫೀರಾಪೂರ ಯೋಜನೆಗೆ ಅಲೌಕೇಶನ್ ಮಾಡಿಸುತ್ತೇನೆ ಎಂದರು.ಕೋಟ್
ಈ ಬೂದಿಹಾಳ-ಫೀರಾಪೂರ ಯೋಜನೆ ನನ್ನಿಂದಾಗಿದೆ ಹುಟ್ಟಿರುವ ಕೂಸು. ಬಿಜೆಪಿಯವರು ೪ ವರ್ಷ ರಾಜ್ಯದಲ್ಲಿದ್ದಾಗ ಸುಮಾರು ₹ ೧ ಲಕ್ಷ ಕೋಟಿ ಪೈನಸೇಲ್ ಅಲೌಕೇಶನ್ ಇಲ್ಲದೇ ಟೆಂಡರ್ ಮಾಡಿದ್ದಾರೆ. ಪಿಡಬ್ಲುಡಿ ₹ ೨೫ ಸಾವಿರ ಕೋಟಿ, ನೀರಾವರಿಗೆ ₹ ೩೫ ರಿಂದ ೪೦ ಸಾವಿರ ಕೋಟಿ ಟೆಂಡರ್ ಮಾಡಿದ್ದಾರೆ. ದುಡ್ಡು ಇಲ್ಲಾ ಕೆಲಸ ಪ್ರಾರಂಭ ಮಾಡಿದ್ದಾರೆ. ಹೀಗಾಗಿ ನಾವು ಅನಿವಾರ್ಯವಾಗಿ ಕೆಲಸಗಳನ್ನು ಬಂದ್ ಇಡಬೇಕಾಯಿತು.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))