ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಗುರುವಾರದ ಪಂದ್ಯಗಳಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು ಪುದಿಯೋಕ್ಕಡ ಮತ್ತು ಬಲ್ಲಚಂಡ ತಂಡಗಳ ನಡುವೆ ಬಿರುಸಿನ ಹೋರಾಟ ನಡೆಯಿತು. ಪಂದ್ಯದಲ್ಲಿ ಎರಡು ತಂಡಗಳು 1-1ಅಂತರದ ಸಮಬಲದ ಪ್ರದರ್ಶನ ನಡೆಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಪುದಿಯೋಕ್ಕಡ ತಂಡ 5 ಗೋಲು ಗಳಿಸಿದರೆ ಬಲ್ಲಚಂಡ ತಂಡ ಆಟಗಾರರು 6 ಗೋಲು ಹೊಡೆಯುವುದರ ಮೂಲಕ ಜಯ ಸಾಧಿಸಿದರು.
ದುಗ್ಗಳ ಸದಾನಂದ
ಕನ್ನಡಪ್ರಭವಾರ್ತೆ ನಾಪೋಕ್ಲುಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಗುರುವಾರದ ಪಂದ್ಯಗಳಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು ಪುದಿಯೋಕ್ಕಡ ಮತ್ತು ಬಲ್ಲಚಂಡ ತಂಡಗಳ ನಡುವೆ ಬಿರುಸಿನ ಹೋರಾಟ ನಡೆಯಿತು. ಪಂದ್ಯದಲ್ಲಿ ಎರಡು ತಂಡಗಳು 1-1ಅಂತರದ ಸಮಬಲದ ಪ್ರದರ್ಶನ ನಡೆಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಪುದಿಯೋಕ್ಕಡ ತಂಡ 5 ಗೋಲು ಗಳಿಸಿದರೆ ಬಲ್ಲಚಂಡ ತಂಡ ಆಟಗಾರರು 6 ಗೋಲು ಹೊಡೆಯುವುದರ ಮೂಲಕ ಜಯ ಸಾಧಿಸಿದರು.ಅಂಜಪರವಂಡ ಮತ್ತು ಅರಮಣಮಾಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಪಂದ್ಯದಲ್ಲಿ ಎರಡು ತಂಡಗಳು ಗೋಲು ಗಳಿಸಲಿಲ್ಲ. ಬಳಿಕ ಟೈ ಬ್ರೇಕರ್ ನಲ್ಲಿ ಆರಮಣಮಾಡ 4-2ರಿಂದ ಅಂಜಪರವಂಡ ವಿರುದ್ಧ ಗೆಲುವು ಸಾಧಿಸಿತು. ಮುಕ್ಕಾಟಿರ ಮತ್ತು ಸೋಮೆಯಂಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಎರಡು ತಂಡಗಳು ತಲಾ ಎರಡು ಗೋಲು ಗಳಿಸಿದವು. ಬಳಿಕ ನಡೆದ ಟೈ ಬ್ರೇಕರ್ ನಲ್ಲಿ ಸೋಮೆಯಂಡ 4-3 ರಿಂದ ಮುಕ್ಕಾಟಿರ ವಿರುದ್ಧ ಗೆಲುವು ಸಾಧಿಸಿತು.ಉಳಿದಂತೆ ಕೋಳೆರ ಕರೋಟಿರ ವಿರುದ್ಧ 4-1 ರಿಂದ ,ಕೊಲ್ಲೀರ ನಂದೇಟಿರ ವಿರುದ್ಧ 2-1ರಿಂದ ,ನೆಲ್ಲಮಕ್ಕಡ ಮುಕ್ಕಾಟಿರ ವಿರುದ್ಧ 4-0 ಯಿಂದ, ಕುಪ್ಪಂಡ ಚಂದುರ ವಿರುದ್ಧ 3-0ಯಿಂದ ,ಚೆಪ್ಪುಡಿರ ನಾಗಂಡ ವಿರುದ್ಧ 4-0ಯಿಂದ, ಕಂಬೀರಂಡ ಮಣವಟ್ಟಿರ ವಿರುದ್ಧ 2-0 ಯಿಂದ, ಮುಕ್ಕಾಟಿರ (ಹರಿಹರ)ನಾಪಂಡ ವಿರುದ್ಧ 1-0ಯಿಂದ, ಮೂಕೊಂಡ ಮಂಡೇಟಿರ ವಿರುದ್ಧ 4-0ಯಿಂದ ಗೆಲುವು ಸಾಧಿಸಿದವು.
ಇಂದಿನ ಪಂದ್ಯಗಳು:ಮೈದಾನ 1
9ಕ್ಕೆ ಮೇಚಿಯಂಡ /s ಬಿದ್ದಾಟಂಡ 10ಕ್ಕೆ ಪಳಂಗಂಡ v/s ಕಾಂಡಂಡ 11ಕ್ಕೆ ಪರದಂಡ v/s ಐಚೆಟ್ಟೀರ 12ಕ್ಕೆ ಚೇಂದೀರ v/s ಕೊಂಗಂಡ 1 ಕ್ಕೆ ಬೊವೇರಿಯಂಡ v/s ಸಣ್ಣುವಂಡಮೈದಾನ 29 ಕ್ಕೆ ಇಟ್ಟೀರ v/s ಮೇರಿಯಂಡ 10 ಕ್ಕೆ ಬೊಳ್ಳೇಪಂಡ v/s ಮಚ್ಚಾರಂಡ 11ಕ್ಕೆ ಮುರುವಂಡ /s ಪೆಮ್ಮಂಡ 12ಕ್ಕೆ ಕಾಡ್ಯಮಾಡ v/s ಮೇಕೇರಿರ1 ಕ್ಕೆ ಚೇನಂಡ v/s ಕುಲ್ಲೇಟಿರ
2ಕ್ಕೆ ಪಟ್ಟಚೆರುವಾಂಡ v/s ಮಂಡೇಪಂಡ