ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರ, ಧಾರ್ಮಿಕ ಕ್ಷೇತ್ರಗಳ, ಮಠಗಳು ಸೇರಿದಂತೆ ಜನಸಾಮಾನ್ಯರ ಆಸ್ತಿಗಳನ್ನು ಕಬಳಿಸುತ್ತಿರುವುದರ ವಿರುದ್ಧ ಬಿಜೆಪಿಯಿಂದ ನಮ್ಮ ಭೂಮಿ, ನಮ್ಮ ಹಕ್ಕು ಹೆಸರಿನಲ್ಲಿ ಶುಕ್ರವಾರ ಹೋರಾಟ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಮಾನ್ವಿ/ಸಿರವಾರ
ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರ, ಧಾರ್ಮಿಕ ಕ್ಷೇತ್ರಗಳ, ಮಠಗಳು ಸೇರಿದಂತೆ ಜನಸಾಮಾನ್ಯರ ಆಸ್ತಿಗಳನ್ನು ಕಬಳಿಸುತ್ತಿರುವುದರ ವಿರುದ್ಧ ಬಿಜೆಪಿಯಿಂದ ನಮ್ಮ ಭೂಮಿ, ನಮ್ಮ ಹಕ್ಕು ಹೆಸರಿನಲ್ಲಿ ಶುಕ್ರವಾರ ಹೋರಾಟ ನಡೆಸಲಾಯಿತು.ಮಾನ್ವಿ ಮತ್ತು ಸಿರವಾರ ಪಟ್ಟಣದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾನ್ವಿ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಪಕ್ಷದ ನಿಯೋಗವು ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಒಂದು ಕಡೆ ವಕ್ಫ್ ಹೆಸರಿನಲ್ಲಿ ರೈತರಿಗೆ, ಜನರಿಗೆ ಅನ್ಯಾಯಕ್ಕೆ ಆಸ್ಪದ ನೀಡಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ಮತ್ತೊಂದು ಕಡೆ ಬಡವರ ಪಡಿತರ ಕಾರ್ಡ್‌ಗಳನ್ನು ರದ್ದು ಪಡಿಸುತ್ತಿರುವುದು ಖಂಡನೀಯ ಸಂಗತಿಯಾಗಿದೆ. ಉಚಿತ ಯೋಜನೆಗಳನ್ನು ಘೋಷಿಸಿದ ಸರ್ಕಾರವು ಅದನ್ನು ಸರಿಯಾಗಿ ಅನುಷ್ಠಾನ ಮಾಡದೇ ಈ ರೀತಿಯ ಪಡಿತರ ಕಾರ್ಡ್‌ಗಳನ್ನು ಕಡಿತಗೊಳಿಸುತ್ತಿದ್ದು, ವಕ್ಫ್ ವಿಚಾರದಲ್ಲಿಯೂ ಸಹ ಸರ್ಕಾರವು ಒಂದು ಸಮುದಾಯದ ಓಲೈಕೆಯ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.ಪಕ್ಷದ ಮಾನ್ವಿ ಮಂಡಲ ಅಧ್ಯಕ್ಷ ಜೆ.ಸುಧಾಕರ, ಪ್ರಧಾನ ಕಾರ್ಯದರ್ಶಿ ಜಗದೀಶ ಹೋತ್ತೂರ್, ಮುಖಂಡರಾದ ಎಂ.ಎಚ್.ಕುಮಾರಸ್ವಾಮಿ,ಶಿವಕುಮಾರ , ರುದ್ರಗೌಡ ಮದ್ಲಾಪುರ್, ಸೇರಿ ಕಾರ್ಯಕರ್ತರು ಇದ್ದರು. ----22-ಮಾನ್ವಿ-3:ಮಾನ್ವಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬಿಜೆಪಿಗರು ಗ್ರೇಡ್-2 ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.