6ರಂದು ಶಾ ಹೇಳಿಕೆ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಟ ನಡೆಸಿ: ಅಲ್ಲಮಪ್ರಭು ಬೆಟ್ಟದೂರು

| Published : Jan 04 2025, 12:30 AM IST

6ರಂದು ಶಾ ಹೇಳಿಕೆ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಟ ನಡೆಸಿ: ಅಲ್ಲಮಪ್ರಭು ಬೆಟ್ಟದೂರು
Share this Article
  • FB
  • TW
  • Linkdin
  • Email

ಸಾರಾಂಶ

ಅಹಿಂಸಾತ್ಮಕ ರೀತಿಯಲ್ಲೇ ನಮ್ಮ ವಿಚಾರಗಳನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡೋಣ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ಕೊಪ್ಪಳ: ಜ. 6ರ ಮುಷ್ಕರ ಅಹಿಂಸಾತ್ಮಕವಾಗಿ ನಡೆಯಬೇಕು ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಜನವರಿ 6ರಂದು ನಡೆಯಲಿರುವ ಬೃಹತ್ ಮುಷ್ಕರದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಹಿಂಸಾತ್ಮಕ ರೀತಿಯಲ್ಲೇ ನಮ್ಮ ವಿಚಾರಗಳನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಲು ಖಂಡಿತ ಸಾಧ್ಯವಿದೆ. 11ಗಂಟೆ ಒಳಗೆ ಎಲ್ಲರೂ ಸೇರಿ ಪ್ರತಿಭಟನೆ ಪ್ರಾರಂಭಿಸೋಣ. ಅಣುಸ್ಥಾವರ, ಎಂಎಸ್‌ಪಿಎಲ್ ವಿಸ್ತರಣೆ ವಿರುದ್ಧವೂ ಪ್ರತಿಸ್ಪಂದನೆ ಕೊಡಬೇಕು ಎಂದು ಕೋರಿದರು.

ಮುಖಂಡ ಹನುಮೇಶ ಕಡೆಮನಿ ಮಾತನಾಡಿ, ಹತ್ತು ಸಾವಿರ ಜನಕ್ಕೆ ಆಗುವಸ್ಟು ಪಲಾವ್ ಪೌಚ್ ಮಾಡಿಸುತ್ತಿದ್ದು, ಎಂಟು ಆಟೋಗಳ ಮೂಲಕ ಬೆಳಗ್ಗೆ 11:30 ರಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಮತ್ತಿತರ ಕಡೆಗಳಲ್ಲಿ ಹಂಚಿಕೆ ಮಾಡಲಾಗುತ್ತದೆ. ನಾಲ್ಕೈದು ನೀರಿನ ಟ್ಯಾಂಕ್‌ಗಳನ್ನು ಹಾಗೂ ಇಪ್ಪತ್ತು ಸಾವಿರ ನೀರಿನ ಪೌಚ್ ವ್ಯವಸ್ಥೆ ಮಾಡಲಾಗಿದೆ. ನೂರಾ ಐವತ್ತಕ್ಕೂ ಹೆಚ್ಚು ಬೈಕ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಯಲಬುರ್ಗಾ ಕುಕುನೂರ ಸೇರಿ 140ಕ್ಕೂ ಹೆಚ್ಚು ಗಾಡಿ ವ್ಯವಸ್ಥೆ ಮಾಡಲಾಗುತ್ತಿದೆ. ಆಟೋದವರು, ವರ್ತಕರು ತಮ್ಮ ಅಂಗಡಿಗಳನ್ನು ಬಂದ್‌ ಮಾಡಿಕೊಂಡು ಸ್ವಯಂ ಪ್ರೇರಣೆಯಿಂದ ನಮ್ಮ ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ.

ಕುಕನೂರು ಯಲಬುರ್ಗಾದಿಂದ ಅಲ್ಪಸಂಖ್ಯಾತರು ಸ್ವತಃ ಗಾಡಿ ಮಾಡಿಕೊಂಡು ಬರುತ್ತಿದ್ದಾರೆ. ನ್ಯಾಯವಾದಿಗಳು ಬೆಂಬಲಿಸಬೇಕು, ಡಿಡಿಪಿಐ ಅವರಿಗೂ ಮನವಿ ಮಾಡಲಾಗಿದೆ. ಜನವರಿ 6ರಂದು ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೇರಿ ವಾಹನಗಳನ್ನು ಅಲ್ಲೇ ನಿಲ್ಲಿಸಿ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಲಾಗುತ್ತದೆ. ತಾಲೂಕು ಪಂಚಾಯತ್, ಸಾಲಾರ್ ಜಂಗ್ ರಸ್ತೆಯಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಶಾರದಾ ಟಾಕೀಸ್ ತಿರುವಿನಿಂದ ಗಡಿಯಾರ ಕಂಭ ಬಳಸಿಕೊಂಡು ಜವಾಹರ ರಸ್ತೆ ಮೂಲಕ ಅಶೋಕ ವೃತ್ತಕ್ಕೆ ತಲುಪಿ ಸಭೆಯಾಗಿ ಮಾರ್ಪಾಡುತ್ತದೆ ಎಂದು ವಿವರಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ,ವಿ. ಕಣವಿ ಮಾತನಾಡಿ, ನಮ್ಮ ವಕೀಲರ ಸಂಘದಿಂದ ಯಾವುದೇ ಜನಪರ ಚಳವಳಿಗಳಿರಲಿ ಅದರಲ್ಲಿ ನಾವು ಭಾಗವಹಿಸುತ್ತಿವೆ. ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತ್ನಾಡಿರುವುದನ್ನು ಖಂಡಿಸಿ ನಡೆಯುವ ಪ್ರತಿಭಟನೆಗೆ ಜನವರಿ 6ರಂದು ನಾವೆಲ್ಲ ಬಂದು ನಿಮ್ಮ ಜೊತೆಗಿರುತ್ತೇವೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ, ರಾಮಣ್ಣ ಚೌಡಕಿ, ಚನ್ನಬಸಪ್ಪ, ಪರಶುರಾಮ ಕೆರೆಹಳ್ಳಿ, ಗವಿಸಿದ್ದಪ್ಪ ಬೆಲ್ಲದ, ಸಿದ್ದರಾಮ ಹೊಸಮನಿ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ಗಾಳೆಪ್ಪ ಮುಂಗೊಲಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ತುಕಾರಾಮ್ ಬಿ. ಪಾತ್ರೋಟಿ, ಕೆ.ಬಿ. ಗೋನಾಳ, ಟಿ. ರತ್ನಾಕರ್, ನಿಂಗಪ್ಪ, ಜಿ,ಎಸ್. ಬೆಣಕಲ್ಲ, ಸಾವಿತ್ರಿ ಮುಜಂದಾರ್, ಹೊಸಳ್ಳಿ ಗ್ರಾಪಂ ಸದಸ್ಯ ಮೊಹಮ್ಮದ್ ಅಜೀಮ್, ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ ಮಠ, ಶರಣಪ್ಪ ಓಜನಹಳ್ಳಿ, ಬಾಷು ಸಾಬ್ ಖತೀಬ್, ಮಾನವಿ ಪಾಷಾ, ಶಿವಪ್ಪ ಹಡಪದ, ಮುದುಕಪ್ಪ ಹೊಸಮನಿ, ಸೈಯ್ಯದ್ ಹಯಾತ್ ಪೀರ್ ಹುಸೇನಿ, ಯಲ್ಲಪ್ಪ ಬಳಗಾನೂರ ಇತರರಿದ್ದರು.