ದಲಿತ ಸಂಘರ್ಷ ಸಮಿತಿ ಸ್ಥಾಪಿಸುವ ಮೂಲಕ ದಲಿತರ ಮತ್ತು ಸಮಾಜದಲ್ಲಿ ಹಿಂದುಳಿದವರ ಮೇಲೆ ಆಗುತ್ತಿರುವ ಶೋಷಣೆ, ದಬ್ಬಾಳಿಕೆ ತಡೆಯುವಲ್ಲಿ ಹೋರಾಟ ಮಾಡಿ ಕರ್ನಾಟಕದ ಅಂಬೇಡ್ಕರ್ ಎಂದು ಎನಿಸಿಕೊಂಡಿದ್ದಾರೆ.

ನರಗುಂದ: ಪ್ರೊ. ಬಿ. ಕೃಷ್ಣಪ್ಪವರು ದಲಿತ ಸಂಘಟನೆ ಕಟ್ಟುವುದರ ಮೂಲಕ ಹಿಂದುಳಿದ ಸಮಾಜದ ಏಳಿಗೆಗಾಗಿ ಹೋರಾಟ ಮಾಡಿದ ನಾಯಕರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಮಾದಿಗ ಸೇನೆಯ ರಾಜ್ಯಾಧ್ಯಕ್ಷ ಡಾ. ಮುತ್ತು ಸುರಕೋಡ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಸಂಘಟನೆಯ ಒಕ್ಕೂಟದಿಂದ ಪ್ರೊ. ಬಿ. ಕೃಷ್ಣಪ್ಪನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದಲಿತ ಸಂಘರ್ಷ ಸಮಿತಿ ಸ್ಥಾಪಿಸುವ ಮೂಲಕ ದಲಿತರ ಮತ್ತು ಸಮಾಜದಲ್ಲಿ ಹಿಂದುಳಿದವರ ಮೇಲೆ ಆಗುತ್ತಿರುವ ಶೋಷಣೆ, ದಬ್ಬಾಳಿಕೆ ತಡೆಯುವಲ್ಲಿ ಹೋರಾಟ ಮಾಡಿ ಕರ್ನಾಟಕದ ಅಂಬೇಡ್ಕರ್ ಎಂದು ಎನಿಸಿಕೊಂಡಿದ್ದಾರೆ ಎಂದರು.

ಒಕ್ಕೂಟ ಸಂಚಾಲಕ ದತ್ತಾತ್ರೆಯ ಜೋಗಣ್ಣವರ ಮಾತನಾಡಿ, ಜೂ. 13ರಂದು ಗದಗ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಎಲ್ಲ ಜಾತಿ ವರ್ಗದ ಎಸ್ಎಸ್‌ಎಲ್‌ಸಿ, ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ. 70ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯಲ್ಲಿ ಹೆಸರು ದಾಖಲಿಸಬೇಕು ಎಂದು ಮನವಿ ಮಾಡಿದರು.

ಅಂಗನವಾಡಿ ಕಾರ್ಯಕರ್ತೆ ಶಾರದಾ ಹಳೇಮನಿ ದಲಿತ ಸಂಘಟನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನವೀನ ಜೋಗಣ್ಣವರ, ಬಸು ದಂಡಾಪುರ, ನೀಲಗಂಗಾ ಮಾದರ, ಬಸಮ್ಮ ಗುರಿಕಾರ, ಸುಶೀಲಾ ನಾಗರಳ್ಳಿ, ಅನಸೂಯಾ ಮಾದರ, ಫಕೀರವ್ವ ಜೋಗಣ್ಣವರ, ಸುಮಿತ್ರಾ ತಳವಾರ, ಭಾರತಿ ಮಾದರ, ಮಹಾಂತೇಶ ಪೂಜಾರ, ವಿಕ್ರಮ ಹೊನಕೇರಿ, ವೆಂಕಟೇಶ ಖಾನಪೇಠ, ಕಿರಣ ಜೋಗಣ್ಣವರ, ಸಂಜು ಜೋಗಣ್ಣವರ, ಕಾಶಿನಾಥ ಹನುಮಂತ ಶಿರಹಟ್ಟಿ, ರಾಹುಲ್ ಲಮಾಣಿ, ಬಸು ಜೋಗಣ್ಣವರ, ಗುರುನಾಥ ಕೆಂಗಾರಕರ ಸೇರದಂತೆ ಮುಂತಾದವರು ಇದ್ದರು. 14ರಂದು ಗುರುವಂದನಾ, ಸ್ನೇಹ ಸಮ್ಮಿಲನ

ನರೇಗಲ್ಲ: ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ1988- 89ರಿಂದ 1995- 96ನೇ ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಅಧ್ಯಯನ ಮಾಡಿದ ಹಳೆಯ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜೂ. 14ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಳೆಯ ವಿದ್ಯಾರ್ಥಿ ಶಿವಾನಂದ ಮುಳಗುಂದ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಉದ್ಘಾಟಿಸಲಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಚಂದ್ರಾಮ ಗ್ರಾಮಪುರೋಹಿತ ಅಧ್ಯಕ್ಷತೆ ವಹಿಸಲಿದ್ದಾರೆ. ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ಫಣಿಬಂದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಜ್ಞಾನ ದೀಪಗಳು ಕಾರ್ಯಕ್ರಮದಡಿ ಧಾರವಾಡದ ನಿವೃತ್ತ ಉಪನಿರ್ದೇಶಕ ಸಂಜೀವ ಬಿಂಗೇರಿ, ರೋಣ ಅಕ್ಷರ ದಾಸೋಹದ ನಿವೃತ್ತ ಸಹಾಯಕ ನಿರ್ದೇಶಕ ವೀರಪ್ಪ ಬಸಪ್ಪ ಸಂಗನಾಳ, ನಿವೃತ್ತ ಶಿಕ್ಷಕಿ ಕುಸುಮವ್ವ ಭೀಮನಗೌಡ್ರ, ನಿವೃತ್ತ ಶಿಕ್ಷಕರಾದ ಶರಣಬಸಪ್ಪ ಬೂದಿಹಾಳ, ಅಂದಾನಪ್ಪ ಅಣಗೌಡರ, ಎಂ.ಎಸ್. ಧಡೇಸೂರಮಠ, ನಿಂಗನಗೌಡ ಚಿಕ್ಕನಗೌಡ್ರ, ಬಸವನಗೌಡ ಗೌಡರ, ಸಿ.ಬಿ. ಹಿರೇಮಠ, ನಿವೃತ್ತ ಶಿಕ್ಷಕಿ ಎಂ.ಪಿ. ಬಸರೀಗಿಡದ, ಮುಖ್ಯ ಶಿಕ್ಷಕಿ ಗೀತಾ ಗುಜ್ಜಲ ಹಾಗೂ ಶಿಕ್ಷಕಿ ಮಲ್ಲವ್ವ ಸಕ್ರೋಜಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಕರ್ತ ಅರುಣ ಕುಲಕರ್ಣಿ ಮಾತನಾಡಿದರು. ಮೈಲಾರಪ್ಪ ಗೋಡಿ, ಶಿವಾನಂದ ಪದ್ಮಸಾಲಿ, ಉಮೇಶ್ ಪಾದಗಟ್ಟಿ, ಶಿವಪ್ಪ ತಳವಾರ, ವಿರೂಪಾಕ್ಷಪ್ಪ ಸಂಗನಾಳ, ಪ್ರಸನ್ನಕುಮಾರ ಗಚ್ಚಿನಮಠ, ಬಸವರಾಜ ಕುಷ್ಟಗಿ ಹಾಗೂ ಮಾಬುಸಾಬ ಎಂ. ಇದ್ದರು.