ಕುಡಿಯುವ ನೀರಿಗಾಗಿ ಜಗಳ: ಚಾಕುವಿನಿಂದ ಇರಿದು ಯುವಕನ ಕೊಲೆ

| Published : Mar 29 2024, 12:53 AM IST

ಸಾರಾಂಶ

ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಘಟನೆ ವಿಕೋಪಕ್ಕೆ ತಿರುಗಿ ನಂದಕುಮಾರ ಕಟ್ಟಿಮನಿ ಎಂಬಾತನಿಗೆ ಚಾಕು ಇರಿತ

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೋರ್ವರನ್ನು ಕೊಲೆ ಮಾಡಿರುವ ಘಟನೆ ರಾತ್ರಿ ನಡೆದಿದೆ.

ನಂದಕುಮಾರ ಕಟ್ಟಿಮನಿ (216) ಕೊಲೆಯಾದ ಯುವಕ. ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಘಟನೆ ವಿಕೋಪಕ್ಕೆ ತಿರುಗಿ ನಂದಕುಮಾರ ಕಟ್ಟಿಮನಿ ಎಂಬ ಯುವಕನನ್ನು ಹಣುಮಂತ ಎಂಬಾತ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ, ತೀವ್ರ ಗಾಯಗೊಂಡ ನಂದಕುಮಾರನನ್ನು ಚಿಕಿತ್ಸೆಗೆ ಲಿಂಗಸ್ಗೂರಿನ ಆಸ್ಪತ್ರೆಗೆ ತಲುಪವಷ್ಟರಲ್ಲಿಯೇ ಬುಧವಾರ ರಾತ್ರಿ 9.30 ಗಂಟೆಗೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ನಳದ ನೀರು ವಿಚಾರಕ್ಕೆ ನೆರೆ ಸಂಬಂಧಿಕರು ಕೊಲೆಯಾದ ಯುವಕನ ಅಜ್ಜಿ ಜತೆಗೆ ಗಲಾಟೆ ಮಾಡಿಕೊಂಡಿದ್ದರು. ಇಬ್ಬರು ಮನೆಯ ನಡುವೆ ಇದ್ದ, ನಲ್ಲಿಯ ನೀರು ತುಂಬಿಕೊಳ್ಳಲು ಹೋದಾಗ ಅಜ್ಜಿಯೊಂದಿಗೆ ಜಗಳ ಮಾಡಿಕೊಂಡಿದ್ದರು. ಅಜ್ಜಿಯೊಂದಿಗೆ ಜಗಳ ಮಾಡುತ್ತಿದ್ದನ್ನು ಕಂಡ ಮೊಮ್ಮಗ ನಂದಕುಮಾರ​ ಪ್ರಶ್ನಿಸಲು ಮುಂದಾದಗ ಈ ವೇಳೆ ಹನುಮಂತ ಚಾಕುವಿನಿಂದ ಇರಿದ್ದಾನೆ ಎಂದು ಶರಣಮ್ಮ ಯಮನಪ್ಪ ಕಟ್ಟಿಮನಿ ಅವರು ನೀಡಿದ ದೂರಿನನ್ವಯ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಸುದ್ದಿ ತಿಳಿದ ನಂತರ ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಭೇಟಿ ನೀಡಿ ಪರಿಶೀಲಿಸಿ ವರದಿ ಪಡೆದುಕೊಂಡರು. ಈ ವೇಳೆ ಡಿವೈಎಸ್‌ಪಿ ಜಾವಿದ್ ಇನಾಮದಾರ, ಸಿಪಿಐ ಸಚಿನ್ ಚಲವಾದಿ ಹಾಗೂ ಪಿಎಸ್‌ಐ ಸಂಗೀತಾ ಶಿಂಧೆ ಇದ್ದರು.