ಸಾರಾಂಶ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ (ಕೋಡಿಹಳ್ಳಿ ಬಣ) ಕನಕಗಿರಿ ತಹಶೀಲ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕನಕಗಿರಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ (ಕೋಡಿಹಳ್ಳಿ ಬಣ) ಇಲ್ಲಿನ ತಹಶೀಲ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ತಾಲೂಕಿನ 13 ಕೆರೆಗಳನ್ನು ತಿಂಗಳೊಳಗಾಗಿ ಸಂಪೂರ್ಣ ಭರ್ತಿ ಮಾಡಬೇಕು. ಮೆಕ್ಕಜೋಳ. ತೊಗರಿ ಸೇರಿ ಬೆಂಬಲ ಘೋಷಿತ ಬೆಳಗಳ ಖರೀದಿ ಕೇಂದ್ರವನ್ನು ತ್ವರಿತಗತಿಯಲ್ಲಿ ಆರಂಭಿಸಬೇಕು. ತಾಲೂಕು ವ್ಯಾಪ್ತಿಯ ರಸ್ತೆ ಅಭಿವೃದ್ಧಿಪಡಿಸಬೇಕು. ಜೆಸ್ಕಾಂ ಇಲಾಖೆಯಿಂದ ರೈತರ ತೋಟದ ಮನೆಗಳಿಗೆ ನಿರಂತರ ವಿದ್ಯುತ್ ಸರಬರಾಜು, ಅತಿವೃಷ್ಟಿ, ಅನಾವೃಷ್ಟಿಯಿಂದ ತೊಗರಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಕಲ್ಪಿಸುವುದು, ಕರಡಿಗಳ ಹಾವಳಿಯಿಂದ ತೋಟಗಾರಿಕೆ ಬೆಳೆ ಬೆಳೆದ ರೈತರಿಗೆ ಪರಿಹಾರ ಒದಗಸಿ ವನ್ಯಜೀವಿಗಳ ಸಂರಕ್ಷಣೆಗೆ ಕ್ರಮ ವಹಿಸುವುದು, ವಿಳಂಬವಾದ ದನದ ಶೆಡ್ ಬಿಲ್ ಪಾವತಿ ಮಾಡುವುದು, ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್, ಜೂಜಾಟ, ಮಟ್ಕಾಂ ಅನೈತಿಕ ಚಟುವಟಿಕೆ ತಡೆಯಬೇಕು. ಪರವಾನಗಿ ಇಲ್ಲದ ಮದ್ಯದಂಗಡಿಗಳನ್ನು ತೆರವು ಮಾಡಬೇಕು. ಅಲ್ಲದೇ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುವ ಕೇಂದ್ರ ಸ್ಥಾನದಲ್ಲಿಯೇ ವಾಸಿಸಲು ಆದೇಶವಿದ್ದರೂ ಬೇರೆ ತಾಲೂಕು, ಊರುಗಳಿಂದ ಬರುವುದರಿಂದ ರೈತರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಆಗ್ರಹಿಸಿದರು.ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಮನವಿ ಸ್ವೀಕರಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆ ಸಹಾಯಕಿ ನಿರ್ದೇಶಕಿ ಅಭಿಲಾಷಾ, ಸಣ್ಣ ನೀರಾವರಿ ಇಲಾಖೆ, ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ, ಜೆಸ್ಕಾಂ, ಲೋಕೋಪಯೋಗಿ ಇಲಾಖೆ ಸೇರಿ ನಾನಾ ಇಲಾಖೆಗಳ ಅಧಿಕಾರಿಗಳು ರೈತರ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಭೋವಿ, ಪ್ರಮುಖರಾದ ಮರಿಸ್ವಾಮಿ ಹಿರೇಖೇಡ, ಹನುಮಂತಪ್ಪ ಬಂಡ್ರಾಳ, ಭೀಮನಗೌಡ ಜೀರಾಳ, ವೆಂಕಟೇಶ ಮಲ್ಲಿಗೆವಾಡ, ಬಾಲಪ್ಪ ನಾಡಿಗೇರ, ನಿಂಗಪ್ಪ ಹುಡೇಜಾಲಿ, ಹನುಮೇಶ ಪೂಜಾರಿ, ಯಮನೂರಪ್ಪ ಬಂಗಾರಿ, ಶೇಖರಪ್ಪ ಗದ್ದಿ, ರಾಮಲಿಂಗಪ್ಪ ಗದ್ದಿ, ಹನುಮಂತ ಹೊಸ್ಕೇರಾ, ಶಿವಕುಮಾರ ಬಡಿಗೇರ, ಸೋಮನಾಥ ಇತರರು ಇದ್ದರು.;Resize=(128,128))
;Resize=(128,128))
;Resize=(128,128))