ಸಾರಾಂಶ
ಯುಜಿಡಿ ಕೊಳಚೆ ನೀರಿನಿಂದ ಈಚನೂರು ಕೆರೆ ಕಲುಷಿತವಾಗಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ನಗರದ ಅಂತರ್ಜಲದ ಮೂಲವಾಗಿದ್ದ ತಿಪಟೂರು ಅಮಾನಿಕೆರೆಗೆ ನೀರು ತುಂಬಿಸದ ಕಾರಣ ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆ ಉಂಟಾಗಲಿದೆ.
ಕನ್ನಡಪ್ರಭ ವಾರ್ತೆ ತಿಪಟೂರು
ನಗರದಲ್ಲಿರುವ ಯುಜಿಡಿ ಅವ್ಯವಸ್ಥೆ ಸರಿಪಡಿಸಿ ತಿಪಟೂರು ಹಾಗೂ ಈಚನೂರು ಕೆರೆಗಳಿಗೆ ಹೇಮಾವತಿ ನೀರು ತುಂಬಿಸಲು ಆಗ್ರಹಿಸಿ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ತಿಪಟೂರು ಅಮಾನಿಕೆರೆ ಕೋಡಿ ವೃತ್ತದಿಂದ ನಗರಸಭೆ ವೃತ್ತದವರೆಗೂ ಸೋಮವಾರ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.ನಗರದ ಸಿಂಗ್ರಿ ನಂಜಪ್ಪ ವೃತ್ತದ ಬಳಿ ನಡೆದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಯುಜಿಡಿ ಕೊಳಚೆ ನೀರಿನಿಂದ ಈಚನೂರು ಕೆರೆ ಕಲುಷಿತವಾಗಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ನಗರದ ಅಂತರ್ಜಲದ ಮೂಲವಾಗಿದ್ದ ತಿಪಟೂರು ಅಮಾನಿಕೆರೆಗೆ ನೀರು ತುಂಬಿಸದ ಕಾರಣ ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆ ಉಂಟಾಗಲಿದೆ. ಗ್ಯಾರಂಟಿ ನೆಪದಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಯಾವುದೇ ಜನಪರ, ಅಭಿವೃದ್ಧಿಪರ ಕೆಲಸಗಳು ಆಗುತ್ತಿಲ್ಲ. ಕಲ್ಪತರು ನಾಡು ಕೊಬ್ಬರಿ ಬೀಡು ಎಂದು ಪ್ರಖ್ಯಾತವಾಗಿದ್ದು, ತಿಪಟೂರು ಯುಜಿಡಿ ಕೊಳಚೆ ನೀರು ಹೇಮಾವತಿ ಚಾನೆಲ್‌ಗೆ ಹರಿಯುತ್ತಿದೆ. ನಗರದ ಜನತೆಯ ಅನಾರೋಗ್ಯಕ್ಕೆ ಹಾಗೂ ಈ ಘಟನೆ ಅಪಖ್ಯಾತಿ ಪಡೆಯುತ್ತಿದೆ.ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈಡೇನಹಳ್ಳಿ ಹಾಗೂ ಗೊಡಗೊಂಡನಹಳ್ಳಿ ವೆಟ್‌ವೆಲ್‌ಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಕಾರಣ ಕೋಡಿ ಸರ್ಕಲ್ ಬಳಿ ಯುಜಿಡಿ ನೀರು ಉಕ್ಕಿಹರಿಯುತ್ತಿದ್ದು, ಜನಸಾಮಾನ್ಯರು ಓಡಾಡುವುದು ಕಷ್ಟವಾಗಿದೆ. ಕೊಳಚೆ ನೀರು ಹಳ್ಳಗಳ ಮೂಲಕ ಹಿಂಡಿಸ್ಕೆರೆ ನಂತರ ಈಚನೂರು ಕೆರೆ ಸೇರುತ್ತಿದೆ. ನಗರದ ಜನ ಮತ್ತೆ ಅದೇ ಕೊಳಚೆ ನೀರನ್ನೇ ಕುಡಿಯುವ ದುಸ್ತಿತಿಗೆ ತಂದಿದ್ದಾರೆ. ಕೊಳಚೆ ನೀರಿನ ಅವ್ಯವಸ್ಥೆಯಿಂದ ತಿಪಟೂರು ಮಾನ ಹರಾಜಾಗುತ್ತಿದೆ.
ಹೇಮಾವತಿ ನಾಲೆಯಲ್ಲಿ ನೀರು ಹರಿಯುವಾಗ ಈಚನೂರು ಮತ್ತು ತಿಪಟೂರು ಕೆರೆಯನ್ನು ತುಂಬಿಸದೆ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗುವ ಸನ್ನಿವೇಶವನ್ನು ಶಾಸಕರು ಸೃಷ್ಟಿಸಿದ್ದು, ಜನತೆಯ ಹಿತದೃಷ್ಟಿಯಿಂದ ಈಗಲಾದರೂ ಕೆರೆಗಳಿಗೆ ನೀರು ಹರಿಸಿ ರೈತರಿಗೆ ಹಾಗೂ ನಗರವಾಸಿಗಳಿಗೆ ಮುಂದಾಗುವ ಹಾಹಾಕಾರವನ್ನು ತಪ್ಪಿಸಬೇಕಿದೆ. ಶಾಸಕರು ಯುಜಿಡಿ ಸಮಸ್ಯೆಗೆ ಪರಿಹಾರ ನೀಡಬೇಕು. ನಗರಸಭೆ ಪೌರಾಯುಕ್ತರು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ಕಚೇರಿಯಲ್ಲಿ ಸಿಗುತ್ತಲೂ ಇಲ್ಲ. ಹಾಗಾಗಿ ಶಾಸಕರು ಬೇಜವಾಬ್ದಾರಿ ಪೌರಾಯುಕ್ತರನ್ನು ವರ್ಗಾವಣೆ ಮಾಡಿಸದಿದ್ದರೆ ನಗರಸಭೆ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಖರ್ಚು ಮಾಡಿ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದೆ ಖಜಾನೆ ಖಾಲಿಯಾಗಿದೆ. ಯುಜಿಡಿ ಕೇವಲ ಹಣ ನುಂಗಲು ದಾರಿ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳೇ ನಗರದ ಯುಜಿಡಿ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಗೊರಗೊಂಡನಹಳ್ಳಿ ಸುದರ್ಶನ್, ಷಡಕ್ಷರಿ, ರಾಜು ಕಂಚಾಘಟ್ಟ, ಎಸ್.ಸಿ ಘಟಕದ ಅಧ್ಯಕ್ಷ ಧನಂಜಯ್ ಪೆದ್ದಿಹಳ್ಳಿ, ನಟರಾಜ್, ಷಡಕ್ಷರಿ, ರಾಜಶೇಖರ್ ಕರವೇ ಅಧ್ಯಕ್ಷ ಸತೀಶ್ ಮಾರನಗೆರೆ, ಜಕ್ಕನಹಳ್ಳಿ ಮೋಹನ್, ಕವಿತಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ನಗರವಾಸಿಗಳು ಭಾಗವಹಿಸಿದ್ದರು. ನಂತರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.ಫೋಟೋ 27-ಟಿಪಿಟಿ2ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ನಗರದ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಹಾಗೂ ಕಾರ್ಯಕರ್ತರು.)
)
;Resize=(128,128))
;Resize=(128,128))
;Resize=(128,128))