ಸಾರಾಂಶ
ಸಂಗೀತ ಕಾರ್ಯಕ್ರಮ ನಡೆಸುವ ಮೂಲಕ ಹಣ ಸಂಗ್ರಹಿಸಿ ಕ್ಯಾನ್ಸರ್ ರೋಗಿಯ ಕುಟುಂಬಕ್ಕೆ ಸಹಾಯ ಹಸ್ತ ನೀಡಲಾಗುತ್ತಿದೆ ಎಂದು ಭರವಸೆ ಬೆಳಕು ಜನಸೇವಾ ಟ್ರಸ್ಟ್ ಹಾಗೂ ಸಾನ್ವಿ ಮೆಲೋಡಿಸ್ ಆರ್ಕೆಸ್ಟ್ರಾ ಮಾಲೀಕ ರೇವಣಸಿದ್ದಯ್ಯ ಹಿರೇಮಠ ತಿಳಿಸಿದರು.
ಹುಮನಾಬಾದ್: ಸಂಗೀತ ಕಾರ್ಯಕ್ರಮ ನಡೆಸುವ ಮೂಲಕ ಹಣ ಸಂಗ್ರಹಿಸಿ ಕ್ಯಾನ್ಸರ್ ರೋಗಿಯ ಕುಟುಂಬಕ್ಕೆ ಸಹಾಯ ಹಸ್ತ ನೀಡಲಾಗುತ್ತಿದೆ ಎಂದು ಭರವಸೆ ಬೆಳಕು ಜನಸೇವಾ ಟ್ರಸ್ಟ್ ಹಾಗೂ ಸಾನ್ವಿ ಮೆಲೋಡಿಸ್ ಆರ್ಕೆಸ್ಟ್ರಾ ಮಾಲೀಕ ರೇವಣಸಿದ್ದಯ್ಯ ಹಿರೇಮಠ ತಿಳಿಸಿದರು.
ಚಿಟಗುಪ್ಪ ಪಟ್ಟಣದ ಅನಾಥ ಯುವತಿ ಜ್ಯೋತಿ ಕಳೆದ ಅನೇಕ ತಿಂಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಈ ಕುರಿತು ಮಾಹಿತಿ ತಿಳಿದು, ಬೀದರ್ ಅಮರ್ ಟೆಂಟ್ ಹೌಸ್, ಸರಸ್ವತಿ ಸೌಂಡ್ ನೌಬಾದ್, ರಘುಪ್ರೀಯ ಸಹಾಯದೊಂದಿಗೆ ಬೀದರ್‌ನ ಸಾಯಿ ಸ್ಕೂಲ್ ಪ್ರಾಂಗಣದಲ್ಲಿ ಭರವಸೆ ಬೆಳಕು ಜನಸೇವಾ (ಟ್ರಸ್ಟ್) ಹಾಗೂ ಸಾನ್ವಿ ಮೆಲೋಡಿಸ್ ಆರ್ಕೆಸ್ಟ್ರಾ ಹುಮನಾಬಾದ್ ದಂಪತಿ ಕಲಾವಿದರಾದ ಸಾಕ್ಷಿ ರೇವಣಸಿದ್ದಯ್ಯ ಹಿರೇಮಠ ಇವರಿಗೆ ಸಂಗೀತ ಕಾರ್ಯಕ್ರಮ ಮೂಲಕ ಬಂದಿರುವ 20 ಸಾವಿರ ರು.ಗಳನ್ನು ಕ್ಯಾನ್ಸರ್ ರೋಗಿಗೆ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಸಾಮಾನ್ಯ ಕುಟುಂಬದವರು ಈ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಅಂತಹ ಕುಟುಂಬಗಳಿಗೆ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚ, ಔಷಧೋಪಚಾರ ಚಿಕಿತ್ಸೆಗಾಗಿ ಅಗತ್ಯವಿರುವ ಹಣವನ್ನು ಸಂಗ್ರಹಿಸಿ ಸಹಾಯ ನೀಡುವ ಮೂಲಕ, ರೋಗಿಯ ಜೀವನದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ಭರವಸೆ ಬೆಳಕು ಜನಸೇವಾ (ಟ್ರಸ್ಟ್) ಹಾಗೂ ಸಾನ್ವಿ ಮೆಲೋಡಿಸ್ ಆರ್ಕೆಸ್ಟ್ರಾ ಮಾಡುತ್ತಿದೆ ಎಂದು ತಿಳಿಸಿದರು.
ಕನ್ನಡ ಸೇನೆಯ ರಾಜ್ಯಾಧ್ಯಕ್ಷರಾದ ರವಿಸ್ವಾಮಿ ನಿರ್ಣಾ, ಪರಿಸರವಾದಿ ಶೈಲೇಂದ್ರ ಕಾವಡಿ, ಕಾಶಿನಾಥ ರಾಂಪೂರೆ, ಪವನ ಪೂಜಾರಿ, ಉಮೇಶ ಧೂಮಾಳೆ, ಸಮಾಜ ಕಾರ್ಯಕರ್ತ ಅಸ್ಲಮ್ ಮಿಯಾ ಸೇರಿದಂತೆ ಅನೇಕರಿದ್ದರು.