ಸಾರಾಂಶ
ಸರ್ಕಾರ ಕಾನೂನು ಮಾಡುವುದರಿಂದ ಮೈಕ್ರೋ ಫೈನಾನ್ಸ್ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಬಡ, ಮಧ್ಯಮ ವರ್ಗದವರಿಗೆ ಸುಲಭವಾಗಿ ಸಾಲ ಸಿಗುವ ವ್ಯವಸ್ಥೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಮೂಲಕ ಜಾರಿಗೊಳಿಸಬೇಕು.
ಹುಬ್ಬಳ್ಳಿ:
ಸರ್ಕಾರ ಹತ್ತು ಸುಗ್ರೀವಾಜ್ಞೆ ಜಾರಿಗೆ ತಂದರೂ ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸಾಧ್ಯವಿಲ್ಲ. ಪೊಲೀಸ್ ವ್ಯವಸ್ಥೆ ಹಾಗೂ ಖಾಸಗಿ ಲೇವಾದೇವಿದಾರರ ನಡುವೆ ಒಳ ಒಪ್ಪಂದವಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ ಖಡಕ್ ಹೇಳಿಕೆಗೆ ಮಾತ್ರ ಸೀಮಿತವಾಗಿದ್ದಾರೆ. ಖಾಸಗಿ ಫೈನಾನ್ಸ್ ಮೇಲೆ ಕ್ರಮವಾಗುತ್ತಿಲ್ಲ. ಈ ವರೆಗೂ ಒಬ್ಬೇ ಒಬ್ಬ ಅಧಿಕಾರಿಯನ್ನೂ ಅಮಾನತು ಕೂಡ ಮಾಡಿಲ್ಲ ಎಂದರು.
ಲಾಡ್ ವಿರುದ್ಧ ಕಿಡಿ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಬದಲಾಯಿಸುವ ಚರ್ಚೆ ನಡೆದಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿಕೆಗೆ ಕಿಡಿಕಾರಿರುವ ಶೆಟ್ಟರ್, ಲಾಡ್ ಅವರೇ ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ನಂತರ ಮೋದಿ ಅವರ ಬಗ್ಗೆ ಮಾತನಾಡಿ ಎಂದು ತೀರುಗೇಟು ನೀಡಿದರು.
ಮೋದಿ ಬದಲಾವಣೆ ಬಗ್ಗೆ ಯಾರು ಮಾತನಾಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ. ನರೇಂದ್ರ ಮೋದಿ ಬದಲಿಸುವ ಮಾತು ಬಿಟ್ಟು, ರಾಹುಲ್ ಗಾಂಧಿ ಅವರನ್ನು ಬದಲಾಯಿಸಿ ನಿಮ್ಮ ಕಾಂಗ್ರೆಸ್ ಸುಧಾರಿಸುತ್ತದೆ ಎಂದು ಟಾಂಗ್ ಕೊಟ್ಟರು. ಲಾಡ್ ವಿರುದ್ಧ ಕಿಡಿ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಬದಲಾಯಿಸುವ ಚರ್ಚೆ ನಡೆದಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿಕೆಗೆ ಕಿಡಿಕಾರಿರುವ ಶೆಟ್ಟರ್, ಲಾಡ್ ಅವರೇ ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ನಂತರ ಮೋದಿ ಅವರ ಬಗ್ಗೆ ಮಾತನಾಡಿ ಎಂದು ತೀರುಗೇಟು ನೀಡಿದರು.ಮೋದಿ ಬದಲಾವಣೆ ಬಗ್ಗೆ ಯಾರು ಮಾತನಾಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ. ನರೇಂದ್ರ ಮೋದಿ ಬದಲಿಸುವ ಮಾತು ಬಿಟ್ಟು, ರಾಹುಲ್ ಗಾಂಧಿ ಅವರನ್ನು ಬದಲಾಯಿಸಿ ನಿಮ್ಮ ಕಾಂಗ್ರೆಸ್ ಸುಧಾರಿಸುತ್ತದೆ ಎಂದು ಟಾಂಗ್ ಕೊಟ್ಟರು.