ಹಿರಿಯ ಕಲಾವಿದನ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು

| Published : Oct 24 2025, 01:00 AM IST

ಸಾರಾಂಶ

ಹೊಸಕೋಟೆ: ಹಿರಿಯ ಕಲಾವಿದ ವಳಗೆರೆಪುರ ರಾಮಾಂಜಿನಪ್ಪನವರ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ನಟರಾಜ್ ಎಂಎನ್‌ಆರ್ ತಿಳಿಸಿದರು.

ಹೊಸಕೋಟೆ: ಹಿರಿಯ ಕಲಾವಿದ ವಳಗೆರೆಪುರ ರಾಮಾಂಜಿನಪ್ಪನವರ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ನಟರಾಜ್ ಎಂಎನ್‌ಆರ್ ತಿಳಿಸಿದರು.

63 ವರ್ಷದ ರಾಮಾಂಜಿನಪ್ಪ ಬಾಲ್ಯದಲ್ಲಿಯೇ ಯಕ್ಷಗಾನ ರಂಗಕಲೆಯಿಂದ ಆಕರ್ಷಿತರಾಗಿ 50 ವರ್ಷ ಸೇವೆ ಸಲ್ಲಿಸಿ ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದು, ಹೃದಯ ಸಂಬಂಧಿ ಹಾಗೂ ಅಲ್ಸರ್ ಕಾಯಿಲೆಯಿಂದಾಗಿ ಶಸ್ತ್ರ ಚಿಕಿತ್ಸೆಗೊಳಗಾದ ಇವರಿಗೆ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದಿಂದ ಧನಸಹಾಯ ಮಾಡಿ ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಲಾಗಿದೆ ಎಂದರು.

ಹಿರಿಯ ಕಲಾವಿದ ರಾಮಾಂಜಿನಪ್ಪ ಮಾತನಾಡಿ, ಕಲಾವಿದರಿಗೆ ರಾತ್ರಿ ಸಮಯದಲ್ಲೆ ಹೆಚ್ಚು ಕಾರ್ಯಕ್ರಮಗಳಿರುವ ಕಾರಣ ನಿದ್ರೆಯಿಲ್ಲದೆ ಬಳಲಿ ಹಲವು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಕಲಾ ಪ್ರದರ್ಶನ ವೆಚ್ಚಗಳೂ ದುಬಾರಿಯಾಗಿವೆ. ಹಣವೂ ಸಾಕಷ್ಟು ವ್ಯಯವಾಗುತ್ತದೆ. ವೃದ್ಧಾಪ್ಯದಲ್ಲಿ ಯಾವುದೇ ಆದಾಯವಿಲ್ಲದೆ ಸರ್ಕಾರದಿಂದ ನೀಡುವ ೨.೫ ಸಾವಿರ ಮಾಶಾಸನ ಔಷಧಿ ಮಾತ್ರೆಗೂ ಸಾಕಾಗುವುದಿಲ್ಲ. ಆದ್ದರಿಂದ ಸರ್ಕಾರ ಕಲಾವಿದರಿಗೆ ಪ್ರತ್ಯೇಕವಾಗಿ ಆರೋಗ್ಯ ನಿಧಿ ಸ್ಥಾಪಿಸಿ ನಮ್ಮಂತಹ ಪ್ರಾಮಾಣಿಕ ಬಡ ಕಲಾವಿದರನ್ನು ಗುರುತಿಸಿ ನೇರವಾಗಿ ಸಲ್ಲುವಂತೆ ಮಾಡಬೇಕು ಎಂದರು.

ಈ ಸಂಘದ ಮುಖ್ಯ ಸಲಹೆಗಾರ ಮುನಿರಾಜು ಭಾಗವತರು, ಖಜಾಂಚಿ ಈಶ್ವರ್ ರಾವ್, ನಿರ್ದೇಶಕರಾದ ಶಂಭುಲಿಂಗಪ್ಪ, ರವಿಕುಮಾರ್, ಮಂಜುನಾಥ್ ಇತರರಿದ್ದರು.

ಫೋಟೋ: 23 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕಿನ ವಳಗೆರೆಪುರದ ಹಿರಿಯ ಕಲಾವಿದ ವಳಗೆರೆಪುರ ರಾಮಾಂಜಿನಪ್ಪನವರಿಗೆ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದಿಂದ ಆರ್ಥಿಕ ನೆರವು ನೀಡಲಾಯಿತು. ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಿ.ಕೆ.ಶ್ರೀನಿವಾಸಮೂರ್ತಿ ಇತರರಿದ್ದರು.