ಧರ್ಮಸ್ಥಳ ಯೋಜನೆಯಿಂದ ಬಡ ಕುಟುಂಬಗಳ ಆರ್ಥಿಕ ಸ್ವಾವಲಂಬನೆ: ಸ್ವಾಮೀಜಿ

| Published : Feb 22 2024, 01:48 AM IST

ಧರ್ಮಸ್ಥಳ ಯೋಜನೆಯಿಂದ ಬಡ ಕುಟುಂಬಗಳ ಆರ್ಥಿಕ ಸ್ವಾವಲಂಬನೆ: ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಆರ್ಥಿಕ ಸ್ವಾವಲಂಬನೆಗೆ ಭದ್ರ ಬುನಾದಿ ಹಾಕಿದೆ ಎಂದು ಪೂಜಾರಾಮದ್ದನಹಳ್ಳಿ ಸಿದ್ದಾರೂಢ ಶಿವಾನಂದ ಮಂದಿರದ ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಶ್ರದ್ಧೆ, ನಿಷ್ಕಲ್ಮಶ ಮನಸ್ಸಿನಿಂದ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಯಿಂದ ಆರಾಧಿಸಿದರೆ ತಮ್ಮ ಇಷ್ಟಾರ್ಥಸಿದ್ಧಿಗೊಳ್ಳಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಆರ್ಥಿಕ ಸ್ವಾವಲಂಬನೆಗೆ ಭದ್ರ ಬುನಾದಿ ಹಾಕಿದೆ ಎಂದು ಪೂಜಾರಾಮದ್ದನಹಳ್ಳಿ ಸಿದ್ದಾರೂಢ ಶಿವಾನಂದ ಮಂದಿರದ ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.

ತಾಲೂಕಿನ ಯಲಿಯೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಶಿರಾ-೨ ತಾಲೂಕು ಹಾಗೂ ಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು, ಎಲ್ಲರೂ ನಮ್ಮವರೇ ಎಂಬ ಭಾವನೆಯೊಂದಿಗೆ ಜೀವನ ಕಟ್ಟಿಕೊಂಡಾಗ ಭಗವಂತ ನಿಮ್ಮ ಹೃದಯ ಮಂದಿರದಲ್ಲಿ ನೆಲೆಸಲಿದ್ದಾನೆ ಎಂದರು.

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಸೀನಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದಲ್ಲಿ ೬೮ ಲಕ್ಷ ಸಂಘಗಳನ್ನು ಸ್ಥಾಪನೆ ಮಾಡಿ ೫೮ ಲಕ್ಷ ಕುಟುಂಬಗಳ ಆರ್ಥಿಕ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ. ಶೈಕ್ಷಣಿಕ, ಧಾರ್ಮಿಕ ಪ್ರಗತಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಹಲವಾರು ರೀತಿಯ ಕೊಡುಗೆ ನೀಡಿದೆ ಎಂದರು.

ಯಲಿಯೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ ರಂಗನಾಥ್, ಉಪಾಧ್ಯಕ್ಷ ಚಂದ್ರಣ್ಣ, ಸದಸ್ಯರಾದ ನವೀನ್ ವೈ.ಟಿ., ಸತೀಶ್‌ಕುಮಾರ್‌, ಆಶಾ ಲೋಹಿತ್, ಲಕ್ಕಮ್ಮ ಗಂಗಣ್ಣ, ರಾಮಣ್ಣ, ನಾಗವೇಣಿ ವೆಂಕಟರಾಮು, ಪುನೀತ್ ಕುಮಾರ್‌, ಸುಷ್ಮಾ ಮೋಹನ್, ಸಿದ್ದಗಂಗಮ್ಮ ಶ್ರೀನಿವಾಸ್, ಶಿವಮ್ಮ ರಾಜಣ್ಣ, ಗಂಗಮ್ಮ ಹನುಮಂತರಾಜು, ಪಿಡಿಒ ತುಳಸಿರಾಮು, ಕಾರ್ಯದರ್ಶಿ ನಾಗರಾಜು, ಜಿಲ್ಲಾ ನಿರ್ದೇಶಕ ದಿನೇಶ್, ಯೋಜನಾ ಅಧಿಕಾರಿ ರಮೇಶ್, ಶಿರಾ ವಲಯ ಮೇಲ್ವಿಚಾರಕಿ ನಗ್ಮ, ಸಮನ್ವಯ ಅಧಿಕಾರಿ ಆಶಾ, ಸೇವಾ ಪ್ರತಿನಿಧಿಗಳಾದ ರಾಧಾ, ಮಂಜುಳಾ, ಭಾಗ್ಯ, ವೆಂಕಟಲಕ್ಷ್ಮಿ, ವಿನುತಾ, ತೇಜಶ್ವಿನಿ, ರೂಫಾ, ಹರ್ಷಯ, ಯಲಿಯೂರು ಒಕ್ಕೂಟದ ಅಧ್ಯಕ್ಷೆ ನಾಗರತ್ನಮ್ಮ, ಈರಮ್ಮ, ಶಿವಮ್ಮ, ಸೇವಾ ಪ್ರತಿನಿಧಿ ಗಿರಿಜಾ , ಜ್ಯೋತಿ ಸೇರಿದಂತೆ ಹಲವರು ಹಾಜರಿದ್ದರು.