ಸಂಸದ ಸುಧಾಕರ್ ವಿರುದ್ಧ ಎಫ್‌ಐಆರ್‌: ಆಕ್ಷೇಪ

| Published : Aug 10 2025, 01:30 AM IST

ಸಂಸದ ಸುಧಾಕರ್ ವಿರುದ್ಧ ಎಫ್‌ಐಆರ್‌: ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅನೇಕ ಮಂತ್ರಿಗಳ ಹೆಸರುಗಳನ್ನು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆಗಳು ಸಾಕಷ್ಟು ನಡೆದಿದೆ. ಆದರೆ ಅವರ ಮೇಲೆ ಇಲ್ಲಿಯವರೆಗೂ ಎಫ್.ಐ.ಆರ್ ಆಗಿಲ್ಲ. ಆದರೆ ಆತ್ಮಹತ್ಯೆ ಮಾಡಿಕೊಂಡ ಒಂದೇ ದಿನದಲ್ಲಿ ಸಂಸದರ ಹೆಸರನ್ನು ಎಫ್.ಐ.ಆರ್ ನಲ್ಲಿ ಎ1 ಆರೋಪಿಯನ್ನಾಗಿ ಮಾಡಿರುವುದು ರಾಜಕೀಯ ದುರುದ್ದೇಶ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ ಆವಣದಲ್ಲಿ ಗುತ್ತಿಗೆ ಚಾಲಕ ಬಾಬು ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರ ಹೆಸರನ್ನು ಎಫ್.ಐ.ಆರ್ ನಲ್ಲಿ ಉಲ್ಲೇಖಿಸಿದ್ದಾರೆ. ಇದು ರಾಜಕೀಯ ದುರುದ್ದೇಶವೇ ಹೊರತು ಬೇರೆ ಏನೂ ಅಲ್ಲ, ಕೂಡಲೇ ಅವರ ಹೆಸರನ್ನು ತೆಗೆಯಬೇಕೆಂದು ಬಿಜೆಪಿ-ಜೆಡಿಎಸ್ ಮೈತ್ರಿ ಮುಖಂಡ ಮಂಜುನಾಥರೆಡ್ಡಿ ಆಗ್ರಹಿಸಿದರು.

ಈ ಸಂಬಂಧ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಕೆ.ಸುಧಾಕರ್ ಯುವಸೇನೆ ಹಾಗೂ ಸುಧಾಕರ್ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಕುತಂತ್ರದಿಂದ ಎಫ್‌ಐಆರ್‌

ಸಂಸದರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅದನ್ನು ಸಹಿಸದೇ ಕಾಂಗ್ರೆಸ್ ನಾಯಕರುಗಳು ಅವರ ವಿರುದ್ದ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಕುತಂತ್ರದಿಂದ ಅವರ ಮೇಲೆ ಎಫ್.ಐ.ಆರ್ ದಾಖಲು ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಬೈರಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಅನೇಕ ಮಂತ್ರಿಗಳ ಹೆಸರುಗಳನ್ನು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆಗಳು ಸಾಕಷ್ಟು ನಡೆದಿದೆ. ಆದರೆ ಅವರ ಮೇಲೆ ಇಲ್ಲಿಯವರೆಗೂ ಎಫ್.ಐ.ಆರ್ ಆಗಿಲ್ಲ. ಆದರೆ ಆತ್ಮಹತ್ಯೆ ಮಾಡಿಕೊಂಡ ಒಂದೇ ದಿನದಲ್ಲಿ ಸಂಸದರ ಹೆಸರನ್ನು ಎಫ್.ಐ.ಆರ್ ನಲ್ಲಿ ಎ1 ಆರೋಪಿಯನ್ನಾಗಿ ಮಾಡಿರುವುದು ರಾಜಕೀಯ ದುರುದ್ದೇಶ ಎಂದರು.

ಸಂಸದರನ್ನು ಸಿಲುಕಿಸುವ ಹುನ್ನಾರ

ನಂತರ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಅಶ್ವತ್ಥರೆಡ್ಡಿ ಮಾತನಾಡಿ, ಸಂಸದ ಡಾ.ಕೆ.ಸುಧಾಕರ್ ರವರು ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ಮೃತ ಬಾಬು ಹಣ ನೀಡಿದ್ದ ಎಂದು ಹೇಳಲಾಗಿದೆ. ಆ ಸಮಯದಲ್ಲಿ ಬಾರದ ಈ ವಿಚಾರ ಈಗ ಏಕೆ ಬಂತು, ಡಾ.ಸುಧಾಕರ್ ರವರನ್ನು ಬೇಕೆಂತಲೇ ಈ ಪ್ರಕರಣದಲ್ಲಿ ಸಿಲುಕಿಸಿಸುವ ಹುನ್ನಾರ ನಡೆದಿದೆ ಎಂದರು.

ಈ ಹಿಂದೆ ಆಂಧ್ರ ಪ್ರದೇಶದ ಸರ್ಕಾರದಲ್ಲಿ ಈ ರೀತಿಯಾಗಿ ಮಾಡುತ್ತಿದ್ದರು. ಇದೀಗ ಕರ್ನಾಟಕದಲ್ಲೂ ದ್ವೇಷ ರಾಜಕಾರಣ ಶುರುವಾಗಿದೆ.ಕೂಡಲೇ ಎಫ್.ಐ.ಆರ್ ನಲ್ಲಿ ಡಾ.ಸುಧಾಕರ್ ರವರ ಹೆಸರನ್ನು ತೆಗೆದುಹಾಕಬೇಕು ಇಲ್ಲವಾದಲ್ಲಿ ಕ್ಷೇತ್ರದಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಮಯದಲ್ಲಿ ಡಾ.ಕೆ.ಸುಧಾಕರ್ ಯುವಸೇನೆಯ ಅಧ್ಯಕ್ಷರು ಲೋಕೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥರೆಡ್ಡಿ, ಮುಖಂಡರಾದ ಶಿವಣ್ಣ, ಚಲಪತಿ, ವೆಂಕಟೇಶ್, ಮಹೇಂದ್ರ, ಕೃಷ್ಣಾರೆಡ್ಡಿ, ನರಸಿಂಹಪ್ಪ, ನಾಗೇಶ್,