ಸಾರಾಂಶ
ದಾಬಸ್‌ಪೇಟೆ: ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆಯ, ಇ ಪರಿಸರ ಕಾರ್ಖಾನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕೋಟ್ಯಂತರ ಮೌಲ್ಯದ ಇ-ತ್ಯಾಜ್ಯ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಮೇ 21 ಮಂಗಳವಾರ ರಾತ್ರಿ ಮಳೆಯ ಪರಿಣಾಮ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಾರ್ಖಾನೆಯಲ್ಲಿ ಬೆಂಕಿ ದುರಂತ ಸಂಭವಿಸಿದೆ. ರಾತ್ರಿ 8.30ಕ್ಕೆ ನೆಲಮಂಗಲ-ತುಮಕೂರು ಭಾಗದ ಅಗ್ನಿಶಾಮಕ ತಂಡ ಆಗಮಿಸಿ, ಬೆಂಕಿ ತಹಬದಿಗೆ ತರಲು ಕಾರ್ಯಾಚರಣೆ ಪ್ರಾರಂಭಿಸಿದವರು, ಬುಧವಾರ ಸಂಜೆ 5 ಗಂಟೆವರೆಗೂ ಬೆಂಕಿ ನಂದಿಸಿದರೂ, ಸಂಪೂರ್ಣ ನಂದಿಸಲಾಗಿಲ್ಲ.ಬೆಂಕಿಯ ಕೆನ್ನಾಲಿಗೆ: ಕಾರ್ಖಾನೆಯಲ್ಲಿ ಬೇಡವಾದ ಎಲೆಕ್ಟ್ರಾನಿಕ್ ತ್ಯಾಜ್ಯಗಳಾದ ತಾಮ್ರ, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಬಿಡಿಭಾಗಗಳು, ಕಂಪ್ಯೂಟರ್-ಟಿವಿಯಂತಹ ಇ ತ್ಯಾಜ್ಯ, 180 ಸಿಲಿಂಡರ್‌ಗಳು, ಹೆಚ್ಚಿರುವ ಕಾರಣ ಬೆಂಕಿ ಗಂಟೆ-ಗಂಟೆಗೂ ಹೆಚ್ಚಾಗುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ತಾಮ್ರದ ಕೇಬಲ್ ತಂತಿಯಲ್ಲಿ ಬೆಂಕಿ ಪ್ರಮಾಣ ಹೆಚ್ಚಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರು.
ಪ್ರತ್ಯೇಕ ಅಗ್ನಿಶಾಮಕ ಠಾಣೆ ಕೂಗು:ಸುಮಾರು ೫೦೦೦ ಎಕರೆ ವಿಸ್ತೀರ್ಣವುಳ್ಳ, ೫೦೦ ಕ್ಕೂ ಅಧಿಕ ಕಾರ್ಖಾನೆಯ ಏಷ್ಯಾಖಂಡದ ಅತೀ ದೊಡ್ಡ ಕೈಗಾರಿಕಾ ವಲಯಕ್ಕೆ ಪ್ರತ್ಯೇಕ ಅಗ್ನಿಶಾಮಕ ಠಾಣೆ ಇಲ್ಲ, ಗೃಹ ಇಲಾಖೆ ಕೂಡಲೇ ಅನುಮತಿ ನೀಡಿ, ಠಾಣೆ ನೀಡಬೇಕಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಟ್ಟದ ಅಗ್ನಿಶಾಮಕಾಧಿಕಾರಿಗಳು, ಡಿವೈಎಸ್‌ಪಿ ಜಗದೀಶ್, ದಾಬಸ್‌ಪೇಟೆ ಪೊಲೀಸ್ ಠಾಣೆಯ ಪಿಐ ರಾಜು, ಪಿಎಸ್‌ಐಗಳಾದ ವಿಜಯಕುಮಾರಿ, ಸಿದ್ದಪ್ಪ ಮತ್ತು ಸಿಬ್ಬಂದಿ, ಕಾರ್ಖಾನೆಯ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿದ್ದರು. ೪ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿದ್ದವು.ಕೋಟ್ ..........
ಕಾರ್ಖಾನೆಯಲ್ಲಿ 120 ಮಂದಿ ಕೆಲಸ ನಿರ್ವಹಿಸುತ್ತಿದ್ದು, 60ಕ್ಕೂ ಅಧಿಕ ಮಹಿಳೆಯರಿದ್ದೇವೆ. ಬುಧವಾರ ಕಾರ್ಖಾನೆ ಬಳಿ ಬೆಂಕಿ ಜ್ವಾಲೆ ನೋಡಿ ಮನಸ್ಸಿಗೆ ತುಂಬಾ ನೋವಾಯಿತು. ಸಂಬಂಧಪಟ್ಟವರು ನೊಂದ ಕಾರ್ಮಿಕರ ನೋವನ್ನು ಆಲಿಸಬೇಕು.-ಅನುಸೂಯ, ಮಹಿಳಾ ಕಾರ್ಮಿಕರು.
ಕೋಟ್............ಬುಧವಾರ ಸಂಜೆ 5 ಗಂಟೆ ವೇಳೆಗೆ ಬೆಂಕಿ ಶೇ.95ರಷ್ಟು ತಹಬದಿಗೆ ಬಂದಿದೆ. 7 ಅಗ್ನಿಶಾಮಕ ವಾಹನ ಸುಮಾರು 15 ಸಿಬ್ಬಂದಿ ಹಗಲಿರುಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
-ಹೊನ್ನಸಿದ್ದಪ್ಪ, ಅಗ್ನಿಶಾಮಕ ಠಾಣಾಧಿಕಾರಿ, ನೆಲಮಂಗಲಫೋಟೋ 5 * 6 :
ಸೋಂಪುರ ಹೋಬಳಿಯ ಕೈಗಾರಿಕಾ ಪ್ರದೇಶದ ಇ-ಪರಿಸರ ಕಾರ್ಖಾನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡಕ್ಕೆ ಒಳಗಾಗಿರುವುದು.ಫೋಟೋ 7 :ಸೋಂಪುರ ಕೈಗಾರಿಕಾ ಪ್ರದೇಶದ ಇ ಪರಿಸರ ಕಾರ್ಖಾನೆ.ಪೋಟೋ 8 :.
ಜೆಸಿಬಿಯಿಂದ ಕಾರ್ಯಾಚರಣೆ ಮಾಡುತ್ತಿರುವುದು.