ಸಾರಾಂಶ
ಏಕಕಾಲಕ್ಕೆ ಮೂರು ಘಟನೆಗಳು ನಡೆದಿದ್ದರಿಂದ ಅಗ್ನಿಶಾಮಕ ವಾಹನವೂ ಒಂದು ಇರುವುದರಿಂದ ಇನ್ನೆರೆಡು ಕಡೆ ಸಾರ್ವಜನಿಕರು ನಂದಿಸಿದ್ದಾರೆ.ಕಳೆದ ಫೆಬ್ರವರಿ ತಿಂಗಳಲ್ಲಿ 40 ಅಗ್ನಿ ಅವಘಡಗಳು ವರದಿಯಾಗಿದ್ದು ಕೇವಲ 20 ಅವಘಡಗಳ ಸ್ಥಳಗಳಿಗೆ ಹೋಗಲು ಸಾಧ್ಯವಾಗಿದೆ.
ಹೊಸದುರ್ಗ: ತಾಲೂಕಿನ ಶ್ರೀರಾಂಪುರದಲ್ಲಿನ ಹೊಸದುರ್ಗ ಮುಖ್ಯ ರಸ್ತೆಯಲ್ಲಿರುವ ಗ್ಯಾಸ್ ಸಿಲಿಂಡರ್ ಗೋಡೌನ್, ಕಂಚೀಪುರ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡು 2 ಗುಡಿಸಲು ಭಸ್ಮ ಹಾಗೂ ಪೆಟ್ರೋಲ್ ಬಂಕ್ ಬಳಿಯ ತೆಂಗಿನ ತೋಟದಲ್ಲಿ ಬೆಂಕಿ ತಗುಲಿ ಶನಿವಾರ ಮಧ್ಯಾಹ್ನ ಏಕಕಾಲದಲ್ಲಿ ಮೂರು ದುರ್ಘಟನೆ ಸಂಭವಿಸಿದೆ.
ಏಕಕಾಲಕ್ಕೆ ಮೂರು ಘಟನೆಗಳು ನಡೆದಿದ್ದರಿಂದ ಅಗ್ನಿಶಾಮಕ ವಾಹನವೂ ಒಂದು ಇರುವುದರಿಂದ ಇನ್ನೆರೆಡು ಕಡೆ ಸಾರ್ವಜನಿಕರು ನಂದಿಸಿದ್ದಾರೆ.ಕಳೆದ ಫೆಬ್ರವರಿ ತಿಂಗಳಲ್ಲಿ 40 ಅಗ್ನಿ ಅವಘಡಗಳು ವರದಿಯಾಗಿದ್ದು ಕೇವಲ 20 ಅವಘಡಗಳ ಸ್ಥಳಗಳಿಗೆ ಹೋಗಲು ಸಾಧ್ಯವಾಗಿದೆ. ಈ ತಿಂಗಳ 2 ದಿನದಲ್ಲಿಯೇ 8 ಅವಘಡಗಳು ಸಂಭವಿಸಿದ್ದು ಕೇವಲ 3 ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗಿದೆ. ಕಚೇರಿಯಲ್ಲಿ ಸಿಬ್ಬಂದಿಗಳಿದ್ದರೂ ವಾಹನವಿಲ್ಲ ಏನು ಮಾಡಲಿ ಎನ್ನುತ್ತಾರೆ ಹೊಸದುರ್ಗ ಅಗ್ನಿಶಾಮದ ಠಾಣೆಯ ಪ್ರಭಾರ ಠಾಣಾಧಿಕಾರಿ ಗುಡುಗನಹಟ್ಟಿ.
ಈ ಮೊದಲು ಹೊಸದುರ್ಗದಲ್ಲಿ 2 ವಾಹನಗಳಿದ್ದವು ಆದರೆ ಸರ್ಕಾರದ ನಿರ್ದೇಶನದಂತೆ ಹಳೆಯ ವಾಹನ ಸ್ಕ್ರಾಪ್ ಎಂದು ನಿಲ್ಲಿಸಲಾಗಿದೆ. ಹಾಗಾಗಿ ಈಗಿರುವುದು ಒಂದೇ ವಾಹನವಾದ್ದರಿಂದ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ವಾಹನ ಠಾಣೆಗೆ ನೀಡಿದರೆ ಸಾರ್ವಜನಿಕರ ಕೋರಿಕೆಗೆ ತಕ್ಕಂತೆ ಸ್ಪಂದಿಸಲು ಸಾಧ್ಯ ಎನ್ನುತ್ತಾರೆ ಸಿಬ್ಬಂದಿ.