ಸಾರಾಂಶ
ಗದ್ದೆಯ ಹುಲ್ಲಿನ ರಾಶಿಗೆ ಬೆಂಕಿ ತಗುಲಿ ಬೆಂಕಿ ಉದ್ದಕ್ಕೂ ವ್ಯಾಪಿಸಿದೆ. 50 ಕಾಫಿ ಗಿಡಗಳು ಸುಟ್ಟು ಹೋಗಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಬೇತು ಗ್ರಾಮದ ಕೊಂಡೀರ ಪೂವಣ್ಣ (ಗಿರಿ) ಎಂಬವರ ತೋಟಕ್ಕೆ ಬುಧವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು ನಷ್ಟ ಸಂಭವಿಸಿದೆ.ಬುಧವಾರ ಮಧ್ಯಾಹ್ನ ಪೂವಣ್ಣ ಅವರ ಗದ್ದೆಯ ಹುಲ್ಲಿನ ರಾಶಿಗೆ ಬೆಂಕಿ ತಗಲಿದ್ದು ಗದ್ದೆ ಉದ್ದಕ್ಕೂ ವ್ಯಾಪಿಸಿದ ಬೆಂಕಿ ಕಾಫಿ ತೋಟಕ್ಕೂ ಹಬ್ಬಿದ್ದು ಸುಮಾರು 50 ಕಾಫಿ ಗಿಡಗಳಷ್ಟು ಸುಟ್ಟು ಹೋಗಿದೆ. ಈ ಸಂದರ್ಭ ಗ್ರಾಮಸ್ಥರು ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಗ್ನಿಶಾಮಕ ದಳದ ವಾಹನ ಗ್ರಾಮಕ್ಕೆ ಆಗಮಿಸಿದ್ದರೂ ಸ್ಥಳಕ್ಕೆ ತೆರಳಲಾಗದೆ ಮಕ್ಕಿ ಶ್ರೀ ಶಾಸ್ತವು ದೇವಾಲಯದ ಸಮೀಪ ಸ್ಥಗಿತಗೊಳಿಸಲಾಯಿತು. ಬಳಿಕ ಸಿಬ್ಬಂದಿ ಮಾತ್ರ ಘಟನಾ ಸ್ಥಳಕ್ಕೆ ತೆರಳಿ ಬಾಕಿ ಉಳಿದ ಅಲ್ಪ ಸ್ವಲ್ಪ ಬೆಂಕಿಯನ್ನು ನಂದಿಸಿ ಸಹಕರಿಸಿ ಹಿಂತಿರುಗಿದರು.------------------------------------
ಹರಿಹರ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ!ಪೊನ್ನಂಪೇಟೆ: ತಾಲೂಕಿನ ಹರಿಹರ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಈ ಭಾಗದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದ ಮಂಡೇಮುಡಿ ಕೆರೆಯಲ್ಲಿ ಬುಧವಾರ ಬೆಳಗ್ಗೆ ಹುಲಿ ಕೆರೆಯಲ್ಲಿ ನೀರು ಕುಡಿದು ಸಮೀಪದ ಕಾಡಿಗೆ ಹೋಗಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.ಪೊನ್ನಂಪೇಟೆ ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಆಗಾಗ್ಗೆ ಹುಲಿ ಕಾಣಿಸಿಕೊಂಡು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ.