ಸಾರಾಂಶ
ಮಠದ ಪಕ್ಕದ ಜಮೀನಿನ ಮಾಲೀಕ ಸುನಿಲ್ ಬಿರಾದಾರ್ ಪಾಟೀಲ್ ಎಂಬುವವರು ಶನಿಮಠದ ವಿರೋದಿಗಳಾಗಿದ್ದು, ಶನಿ ದೇಗುಲದ ಅಭಿವೃದ್ಧಿ ಸಹಿಸದೆ ನಮ್ಮ ಮಠಕ್ಕೆ ಹಾನಿ ಮಾಡುವ ಉದ್ದೇಶದಿಂದ ಸುಮಾರು 15 ಸಾವಿರ ಮೌಲ್ಯದ ಹುಲ್ಲಿನ ಮೆದೆಗೆ ಬೆಂಕಿ ಹಾಕಿರಬಹುದು ಎಂದು ಶನಿಮಠದ ವ್ಯವಸ್ಥಾಪಕಿ ಚಂದ್ರಕಲಾ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶ್ರೀರಂಗಪಟ್ಟಣ: ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಗೋವುಗಳಿಗೆ ಸಂಗ್ರಹಿಸಿದ್ದ ಒಣಹುಲ್ಲು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಹೊಸ ಉಂಡವಾಡಿ ಗ್ರಾಮದ ರೈಲ್ವೆ ನಿಲ್ದಾಣದ ಸಮೀಪದಲ್ಲಿನ ಶನಿಮಠದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಸ್ಥಳೀಯರು ಆಗಮಿಸಿ ಮಠದ ಗೋಶಾಲೆಯಲಿದ್ದ ಗೋವುಗಳನ್ನು ರಕ್ಷಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ದೂರು ದಾಖಲು :ಮಠದ ಪಕ್ಕದ ಜಮೀನಿನ ಮಾಲೀಕ ಸುನಿಲ್ ಬಿರಾದಾರ್ ಪಾಟೀಲ್ ಎಂಬುವವರು ಶನಿಮಠದ ವಿರೋದಿಗಳಾಗಿದ್ದು, ಶನಿ ದೇಗುಲದ ಅಭಿವೃದ್ಧಿ ಸಹಿಸದೆ ನಮ್ಮ ಮಠಕ್ಕೆ ಹಾನಿ ಮಾಡುವ ಉದ್ದೇಶದಿಂದ ಸುಮಾರು 15 ಸಾವಿರ ಮೌಲ್ಯದ ಹುಲ್ಲಿನ ಮೆದೆಗೆ ಬೆಂಕಿ ಹಾಕಿರಬಹುದು ಎಂದು ಶನಿಮಠದ ವ್ಯವಸ್ಥಾಪಕಿ ಚಂದ್ರಕಲಾ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.