ಸಾರಾಂಶ
ಅಗ್ನಿ ಅನಾಹುತ ತಡೆ ಬಗ್ಗೆ ಪ್ರತಿಯೊಬ್ಬ ಸಿಬ್ಬಂದಿಗೂ ಪ್ರಾಥಮಿಕ ತಿಳಿವಳಿಕೆ ಅಗತ್ಯ ಎಂದು ಚಾಮರಾಜನಗರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರಅಗ್ನಿ ಅನಾಹುತ ತಡೆ ಬಗ್ಗೆ ಪ್ರತಿಯೊಬ್ಬ ಸಿಬ್ಬಂದಿಗೂ ಪ್ರಾಥಮಿಕ ತಿಳಿವಳಿಕೆ ಅಗತ್ಯ ಎಂದು ಚಾಮರಾಜನಗರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ತಿಳಿಸಿದರು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಅಗ್ನಿ ಅನಾಹುತ ತಡೆ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.ಕೆಎಸ್ಆರ್‌ಟಿಸಿ ಸಿಬ್ಬಂದಿಗಳು ಡಿಸೇಲ್, ಪೆಟ್ರೋಲ್ ಬಳಕೆಯನ್ನು ಮಾಡುವುದರಿಂದ ಬೆಂಕಿಯ ಅವಘಡ ಸಂಭವಿಸಿದಾಗ ತಕ್ಷಣ ನಿಯಂತ್ರಣ ಮಾಡುವ ವಿಧಾನ ತಿಳಿದುಕೊಂಡಿರಬೇಕು. ಇದರಿಂದ ಆಕಸ್ಮಿಕವಾಗಿ ಘಟನೆ ಸಂಭವಿಸಿದಾಗ ತಕ್ಷಣ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಶಿವಾಜಿರಾವ್ ಪವಾರ್ ಮಾತನಾಡಿ, ಅಗ್ನಿ ಅನಾಹುತ ವೇಳೆ ರಕ್ಷಣೆಗೆ ಪ್ರಾಥಮಿಕ ತಿಳಿವಳಿಕೆ ಅಗತ್ಯ. ಈ ದಿಸೆಯಲ್ಲಿ ಇಲಾಖೆಯು ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ ಎಂದು ತಿಳಿಸಿದರು.‘ಅಗ್ನಿ ಅವಘಡಗಳಿಂದ ಸಾರ್ವಜನಿಕರ ಜೀವ ಹಾಗೂ ಆಸ್ತಿಗೆ ಹಾನಿಯಾಗುತ್ತದೆ. ಇದರಿಂದ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. ಬಿಸಿಲು ಹೆಚ್ಚಿರುವುದರಿಂದ ಬೆಂಕಿ ಅನಾಹುತಗಳು ಸಂಭವಿಸುತ್ತಿವೆ. ಅಗ್ನಿ ದುರಂತದ ಸಂದರ್ಭದಲ್ಲಿ ಶೀಘ್ರವೇ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಅಗ್ನಿ ಅನಾಹುತದ ಅಣಕು ಪ್ರದರ್ಶನ ನಡೆಸಲಾಗುತ್ತಿದೆ. ಎಂದು ಹೇಳಿದರು. ವಿಭಾಗೀಯ ತಾಂತ್ರಿಕ ಶಿಲ್ಪಿ ಸೂರ್ಯಕಾಂತ್, ಆಡಳಿತಾಧಿಕಾರಿ ವಸಂತ್, ಲೆಕ್ಕಾಧಿಕಾರಿ ರುದ್ರಮುನಿ, ಕಾರ್ಮಿಕ ಅಧಿಕಾರಿ ರಶ್ಮಿ, ಡಿಪೋ ವ್ಯವಸ್ಥಾಪಕ ಕುಮಾರ್ ನಾಯಕ್, ಅಗ್ನಿಶಾಮಕ ಸಿಬ್ಬಂದಿ ಮನೋಹರ್, ಹುಲಿರಾಜ್, ಸಂತೋಷ್, ಚಂದ್ರಶೇಖರ್ ಇದ್ದರು.