ಚನ್ನಪಟ್ಟಣ: ತಾಲೂಕಿನ ಅಬ್ಬರುಗುಡ್ಡೆ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು ೨೫ರಿಂದ ೩೦ ಎಕರೆ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿದೆ. ಅಬ್ಬೂರುಗುಡ್ಡೆ ಅರಣ್ಯ ಪ್ರದೇಶದ ಸೆಕ್ಷನ್-೪ರಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಮೂರೂ ಕಡೆಯೂ ಆವರಿಸಿಕೊಂಡಿದೆ.

ಅಬ್ಬೂರುಗುಡ್ಡೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹೊತ್ತಿಕೊಂಡ ವಿಚಾರ ತಿಳಿದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ನೇತೃತ್ವದಲ್ಲಿ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ೩ ತಂಡಗಳಾಗಿ ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದರು. ಅಬ್ಬೂರು ಗುಡ್ಡೆಯ ಪಟ್ಲು ಹಾಗೂ ಕೋಮನಹಳ್ಳಿ ಭಾಗದಲ್ಲಿ ಬೆಂಕಿ ಮೇಲ್ಭಾಗಕ್ಕೆ ಆವರಿಸಿಕೊಂಡಿದ್ದು ಭಾನುವಾರ ತಡರಾತ್ರಿ ಸುಮಾರು ೧೨ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಅಗ್ನಿ ಅವಘಡದಲ್ಲಿ ಸುಮಾರು ೨೫ರಿಂದ ೩೦ ಎಕರೆಯಲ್ಲಿ ಬೆಳೆದಿದ್ದ ಹುಲ್ಲು ಸುಟ್ಟುಹೋಗಿದ್ದು, ಯಾವುದೇ ಪ್ರಾಣಿ ಹಾಗೂ ಮರಗಿಡಗಳಿಗೆ ಹಾನಿಯಾಗಿಲ್ಲ ಎಂದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ಮಾಹಿತಿ ನೀಡಿದ್ದಾರೆ.

ಕಿಡಿಗೇಡಿಗಳ ಕೃತ್ಯ: ಅಬ್ಬೂರುಗುಡ್ಡೆ ಹಾಗೂ ಕಣ್ಣ ಅರಣ್ಯ ಪ್ರದೇಶ ಹೊಂದಿಕೊಂಡಂತಿದ್ದು, ಕಿಡಿಗೇಡಿಗಳು ಬೆಂಕಿ ಹಾಕಿರುವ ಸಾಧ್ಯತೆಯಿದೆ. ಅಮಾವಾಸ್ಯೆ ದಿನದಂದು ಅರಣ್ಯದಲ್ಲಿ ಯಾರಾದರೂ ಪೂಜೆ ಮಾಡಿರುವುದು ಸಹ ಇದಕ್ಕೆ ಕಾರಣ ಇರಬಹುದು ಎಂಬ ಅನುಮಾನ ಮೂಡಿದೆ.

ಪೊಟೋ೧೯ಸಿಪಿಟಿ೪: ಚನ್ನಪಟ್ಟಣ ತಾಲೂಕಿನ ಅಬ್ಬೂರುಗುಡ್ಡೆ ಅರಣ್ಯ ಪ್ರದೇಶದಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವ ಅಗ್ನಿ ಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ.