ಆವರಗೊಳ್ಳದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ: ಡಿಸಿ ಭೇಟಿ

| Published : Jan 16 2025, 12:46 AM IST

ಆವರಗೊಳ್ಳದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ: ಡಿಸಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನಗರ ಪಾಲಿಕೆಯ ಅವರಗೊಳ್ಳ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಹಿನ್ನೆಲೆ ಬುಧವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಇತರೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತುರ್ತು ಕ್ರಮಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗರೆ

ಮಹಾನಗರ ಪಾಲಿಕೆಯ ಅವರಗೊಳ್ಳ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಹಿನ್ನೆಲೆ ಬುಧವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಇತರೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತುರ್ತು ಕ್ರಮಗಳಿಗೆ ಸೂಚನೆ ನೀಡಿದರು.

ನೆಲ ಭರ್ತಿ ಜಾಗದಲ್ಲಿ ಸಂಗ್ರಹವಾಗುವ ಪಾರಂಪರಿಕ ತ್ಯಾಜ್ಯ ವಿಲೇಮಾಡಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ತುರ್ತಾಗಿ ಕೆಲಸ ಪ್ರಾರಂಭಿಸುವ ಮೂಲಕ 6 ತಿಂಗಳಲ್ಲಿ ತ್ಯಾಜ್ಯ ಬೇರ್ಪಡಿಸುವ ಕೆಲಸ ಮುಕ್ತಾಯ ಮಾಡಲು ಸೂಚನೆ ನೀಡಿ, ಘನತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸುವುದರಿಂದ ಬೆಂಕಿ ಅವಘಡ ತಕ್ಷಣ ತಡೆಗಟ್ಟಬಹುದು ಎಂದರು.

ಬೆಂಕಿ ಅವಘಡ ತಪ್ಪಿಸಲು, ಕಿಡಿಗೇಡಿಗಳ ಮೇಲೆ ನಿಗಾವಹಿಸಲು ತುರ್ತಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. 24*7 ಕಾವಲುಗಾರರನ್ನು ನೇಮಿಸಬೇಕು. ಬೆಂಕಿ ನಂದಿಸಲು ಸುತ್ತಲೂ ನೀರಿನ ಪೈಪ್‌ಲೈನ್ ಅಳವಡಿಸಿ, ಅಗ್ನಿನಂದಕ ಪರಿಕರ ಅಳವಡಿಸಬೇಕು. ನೆಲಭರ್ತಿ ಜಾಗ ಇನ್ನೂ ಅವಶ್ಯಕತೆ ಇರುವುದರಿಂದ ಖರೀದಿ ಮಾಡಲು ಪ್ರಕ್ರಿಯೆ ಆರಂಭಿಸಬೇಕು. ಅಲ್ಲದೇ, ಆಕಸ್ಮಿಕ ಅಗ್ನಿ ಅವಘಡಗಳನ್ನು ತಡೆಗಟ್ಟಲು ಕ್ರಿಯಾ ಯೋಜನೆ ತಯಾರು ಮಾಡುವಂತೆ ಪಾಲಿಕೆ ಆಯುಕ್ತರು ಮತ್ತು ಅಗ್ನಿಶಾಮಕ ಮತ್ತು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಡಿಸಿ ಸೂಚನೆ ನೀಡಿದರು.

ಈ ವೇಳೆ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

- - - -15ಕೆಡಿವಿಜಿ36:

ದಾವಣಗೆರೆ ಮಹಾನಗರ ಪಾಲಿಕೆಯ ಅವರಗೊಳ್ಳ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಹಿನ್ನೆಲೆ ಡಿಸಿ, ಆಯುಕ್ತರು ಸ್ಥಳ ಪರಿಶೀಲಿಸಿದರು.