ಪಟಾಕಿಯಿಂದಾಗಿ ಪರಿಸರಕ್ಕೂ ಹಾನಿ

| Published : Oct 31 2024, 12:55 AM IST

ಸಾರಾಂಶ

ಪರಿಸರ ಸ್ನೇಹಿಯಾಗಿ ದೀಪಾವಳಿಯ ಹಬ್ಬದ ಆಚರಣೆ ಕುರಿತು ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ಬೀದಿನಾಟಕವನ್ನು ಪ್ರದರ್ಶಿವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಶಾಲೆಯಲ್ಲಿ ಸಂಪ್ರದಾಯ ಬದ್ದವಾಗಿ ಹಬ್ಬವನ್ನು ಆಚರಿಸಿದ ನಂತರ, ವಿದ್ಯಾರ್ಥಿಗಳು ಬೀದಿ ನಾಟಕವನ್ನು ನಗರದ ಬಸವೇಶ್ವರ ವೃತ್ತ ಮತ್ತು ಹಾಸನ ವೃತ್ತದಲ್ಲಿ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಪರಿಸರ ಸ್ನೇಹಿ ಮತ್ತು ಪಟಾಕಿ ರಹಿತವಾಗಿ ಹಬ್ಬದ ಆಚರಣೆ ಮಾಡುವಂತೆ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪಟಾಕಿಯಿಂದಾಗಿ ಹಣವು ಹಾಳು ಅನೇಕರು ಅಂಗವಿಕಲರಾಗಿದ್ದಾರೆ ಪರಿಸರಕ್ಕೂ ಹಾನಿ ಉಂಟಾಗುತ್ತಿದೆ ಎಂದು ಪೋದಾರ್‌ ಇಂಟರ್‌ ನ್ಯಾಷನಲ್ ಸ್ಕೂಲ್, ಪ್ರಾಂಶುಪಾಲರಾದ ಸರೋಜಿನಿ ಬಿ.ಅಂಗೋಲ್ಕರ್‌ ತಿಳಿಸಿದರು.

ನಗರದಲ್ಲಿ ಪರಿಸರ ಸ್ನೇಹಿಯಾಗಿ ದೀಪಾವಳಿಯ ಹಬ್ಬದ ಆಚರಣೆ ಕುರಿತು ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ಬೀದಿನಾಟಕವನ್ನು ಪ್ರದರ್ಶಿವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಶಾಲೆಯಲ್ಲಿ ಸಂಪ್ರದಾಯ ಬದ್ದವಾಗಿ ಹಬ್ಬವನ್ನು ಆಚರಿಸಿದ ನಂತರ, ವಿದ್ಯಾರ್ಥಿಗಳು ಬೀದಿ ನಾಟಕವನ್ನು ನಗರದ ಬಸವೇಶ್ವರ ವೃತ್ತ ಮತ್ತು ಹಾಸನ ವೃತ್ತದಲ್ಲಿ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಪರಿಸರ ಸ್ನೇಹಿ ಮತ್ತು ಪಟಾಕಿ ರಹಿತವಾಗಿ ಹಬ್ಬದ ಆಚರಣೆ ಮಾಡುವಂತೆ ಜಾಗೃತಿ ಮೂಡಿಸಿದರು. ಸಾರ್ವಜನಿಕರಿಗೆ ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಶಾಲೆಯ ವಿದ್ಯಾರ್ಥಿಗಳು ಶುಭಾಶಯ ಪತ್ರ, ದೀಪಗಳನ್ನು ಹಂಚಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಬ್ಬದ ಆಚರಣೆಯಲ್ಲಿ ಪಟಾಕಿ ಸಿಡಿತದಿಂದಾಗಿ ಅನೇಕ ಬಾರಿ ಹಲವರಿಗೆ ಕಣ್ಣಿಗೆ ಅಪಾಯವಾದರೆ, ಕೆಲವರಿಗೆ ಕೈ ಕಾಲು ಕಾಲಿಗೆ ಹಾನಿ ಉಂಟಾಗಿ ಅಂಗವಿಕಲರಾಗಿದ್ದಾರೆ, ಕೆಲವರ ಪ್ರಾಣಕ್ಕೂ ಕುತ್ತು ತಂದಿದೆ, ಇಂತಹ ಪಟಾಕಿಯನ್ನು ಸಿಡಿಸುವುದರಿಂದ ಅಪಾಯವೇ ಹೆಚ್ಚು. ಆದ್ದರಿಂದ ನೀವು ದೀಪವನ್ನು ಹಚ್ಚಿ ಬೆಳಕಿನ ಹಬ್ಬವನ್ನು ಆಚರಿಸುವುದರೊಂದಿಗೆ ನೀವು ಸುರಕ್ಷಿತವಾಗಿರುವಿರಿ. ಅಲ್ಲದೆ ಪರಿಸರಕ್ಕೂ ನಿಮ್ಮ ಕೊಡುಗೆ ಅಪಾರವಾಗಿರುತ್ತದೆ ಎಂದು ಮಕ್ಕಳಿಗೆ ದೀಪಾವಳಿ ಹಬ್ಬದ ಮಹತ್ವ ಮತ್ತು ಪಟಾಕಿ ಸುಡದಂತೆ ಕರೆನೀಡಿದರು.

ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ರಾಘವೇಂದ್ರ ಶಿಕ್ಷಕರಾದ ಶ್ವೇತ, ದೀಪ, ಹೇಮ, ಮಧು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.