ಪಟಾಕಿ ಅಂಗಡಿ, ಗೋದಾಮುಗಳ ಮೇಲೆ ದಾಳಿ

| Published : Oct 11 2023, 12:46 AM IST

ಸಾರಾಂಶ

ದಾಬಸ್‌ಪೇಟೆ: ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ತಹಸೀಲ್ದಾರ್ ಅರುಧಂತಿ ಅವರು ಪೊಲೀಸ್‌ ಅಧಿಕಾರಿಗಳೊಂದಿಗೆ ಪಟಾಕಿ ಅಂಗಡಿ ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರು.ಮೌಲ್ಯದ ಪಟಾಕಿ ವಶಪಡಿಸಿಕೊಂಡು ಗೋದಾಮುಗಳಿಗೆ ಬೀಗಮುದ್ರೆ ಹಾಕಿ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ.
ದಾಬಸ್‌ಪೇಟೆ: ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ತಹಸೀಲ್ದಾರ್ ಅರುಧಂತಿ ಅವರು ಪೊಲೀಸ್‌ ಅಧಿಕಾರಿಗಳೊಂದಿಗೆ ಪಟಾಕಿ ಅಂಗಡಿ ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರು.ಮೌಲ್ಯದ ಪಟಾಕಿ ವಶಪಡಿಸಿಕೊಂಡು ಗೋದಾಮುಗಳಿಗೆ ಬೀಗಮುದ್ರೆ ಹಾಕಿ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ. ನೆಲಮಂಗಲದ 5 ಗೋದಾಮುಗಳಲ್ಲಿ ಲಕ್ಷಾಂತರ ಮೌಲ್ಯದ ಪಟಾಕಿಗಳನ್ನು ಸಂಗ್ರಹಣೆ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಅರುಂಧತಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ, ರಾಜಸ್ವನಿರೀಕ್ಷಕರು, ಬೆಸ್ಕಾಂ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ದಾಳಿ ಮಾಡಿ ಅಂಗಡಿ, ಗೋದಾಮುಗಳನ್ನು ಪರಿಶೀಲನೆ ಮಾಡಿದರು. ಮಾಲೀಕರು ಶಾಕ್ : ಪ್ರತಿ ವರ್ಷದಂತೆ ಕೆಲ ಅಂಗಡಿ ಮಾಲೀಕರು ಲಕ್ಷಾಂತರ ಮೌಲ್ಯದ ಪಟಾಕಿಯನ್ನು ಖರೀದಿ ಮಾಡಿ ಕೆಲ ಗೋದಾಮುಗಳಲ್ಲಿ ಸಂಗ್ರಹಣೆ ಮಾಡಿಕೊಂಡಿದ್ದರು. ವೈಭವ್ ಕ್ರಿಯೇಷನ್, ವೈಭವ್ ಪ್ಯಾನ್ಸಿಸ್ಟೋರ್, ರಾಘವೇಂದ್ರ ಸ್ಟೋರ್, ಸತ್ಯನಾರಾಯಣ ಸ್ಟೋರ್‌ಗಳ ಗೋದಾಮು ಮೇಲೆ ತಾಲೂಕು ಆಡಳಿತಾಧಿಕಾರಿಗಳು ದಿಢೀರ್ ದಾಳಿ ಮಾಡುತ್ತಿದ್ದಂತೆ ಮಾಲೀಕರು ತಬ್ಬಿಬ್ಬಾದರು. ಮಾಹಿತಿ ನೀಡಬಹುದು: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ಮರುಗಳಿಸದಂತೆ ಎಚ್ಚರಿಕೆ ವಹಿಸಿರುವ ಸರ್ಕಾರ ಕಟ್ಟುನಿಟ್ಟಿನ ಆದೇಶ ಮಾಡಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಟಾಕಿ ಸಂಗ್ರಹಣೆ ಮಾಡಿದ್ದರೆ ತಹಸೀಲ್ದಾರ್ ಅಥವಾ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಬಹುದು ಎಂದು ತಹಸೀಲ್ದಾರ್ ಅರುಂಧತಿ ತಿಳಿಸಿದ್ದಾರೆ. ಪೋಟೋ 7 : ನೆಲಮಂಗಲ ತಾಲ್ಲೂಕಿನಲ್ಲಿರುವ ಪಟಾಕಿ ಗೋಡಾನ್‌ಗಳ ಮೇಲೆ ತಹಸೀಲ್ದಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿರುವುದು. ಪೋಟೋ 8 : ಗೋಡಾನ್‌ನಲ್ಲಿ ಪಟಾಕಿ ಸಂಗ್ರಹಿಸಿರುವುದು.