ಕಾಶ್ಮಿರದಲ್ಲಿ ಗುಂಡಿನ ದಾಳಿ: ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ: ಜಿನ್ನಾಗರ ಜಗನ್ನಾಥ್

| Published : Apr 24 2025, 11:47 PM IST

ಕಾಶ್ಮಿರದಲ್ಲಿ ಗುಂಡಿನ ದಾಳಿ: ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ: ಜಿನ್ನಾಗರ ಜಗನ್ನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀನಗರದ ಪಹಲ್ಗಾಮದಲ್ಲಿ ನಡೆದ ಭಯೋತ್ಪಾದನೆ ಘಟನೆಯಲ್ಲಿ ೨೭ ಪ್ರವಾಸಿಗರು ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿರುವುದು ಹೀನಾಯ ಕೃತ್ಯ, ಇದಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ, ಬಿಜೆಪಿ ಸರ್ಕಾರವೇ ಹೊಣೆ ಹೊರಬೇಕೆಂದು ಕೆಪಿಸಿಸಿ ಪರಿಶಿಷ್ಠ ಜಾತಿ ವಿಭಾಗದ ರಾಜ್ಯ ಸಂಚಾಲಕ ಜಿನ್ನಾಗರ ಜಗನ್ನಾಥ್ ತಿಳಿಸಿದರು.

ಹೊಸಕೋಟೆ: ಶ್ರೀನಗರದ ಪಹಲ್ಗಾಮದಲ್ಲಿ ನಡೆದ ಭಯೋತ್ಪಾದನೆ ಘಟನೆಯಲ್ಲಿ ೨೭ ಪ್ರವಾಸಿಗರು ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿರುವುದು ಹೀನಾಯ ಕೃತ್ಯ, ಇದಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ, ಬಿಜೆಪಿ ಸರ್ಕಾರವೇ ಹೊಣೆ ಹೊರಬೇಕೆಂದು ಕೆಪಿಸಿಸಿ ಪರಿಶಿಷ್ಠ ಜಾತಿ ವಿಭಾಗದ ರಾಜ್ಯ ಸಂಚಾಲಕ ಜಿನ್ನಾಗರ ಜಗನ್ನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ದೇಶದಲ್ಲಿ ಭದ್ರತೆ ಇಲ್ಲ, ಒಂದು ಕಡೆ ಚೀನಾ ಗಡಿಯಲ್ಲಿ ಅಕ್ರಮ, ಇನ್ನೊಂದು ಕಡೆ ಪಾಕಿಸ್ತಾನ ದೇಶದೊಳಗೆ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ದೇಶದ ಜನರು ಕಳವಳಗೊಳ್ಳುತ್ತಿದ್ದಾರೆ ಎಂದಿದ್ದಾರೆ.

ಮೋದಿಯವರೆ, ಒಂದು ತಲೆಗೆ ಹತ್ತು ತಲೆ ಅಂತ ೨೦೧೪ರ ಚುನಾವಣಾ ಪೂರ್ವ ಭಾಷಣದಲ್ಲಿ ನೀವೇ ಹೇಳಿದ್ದು, ಆದರೆ ಎಷ್ಟು ತಲೆ ತೆಗೆದಿರಿ..? ಈಗ ಕರ್ನಾಟಕದ ಪ್ರವಾಸಿಗ ಮಂಜುನಾಥ್‌ರಾವ್ ಅದೇ ನಿಮ್ಮ ಆರ್ಟಿಕಲ್ ೩೭೦ ಯಾ ಜಮ್ಮು ಕಾಶ್ಮೀರದಲ್ಲಿ ಹೆಣವಾಗಿ ಮಲಗಿದ್ದಾನೆ. ಇಂತಹ ಭಯೋತ್ಪಾದನಾ ಕೃತ್ಯಗಳಿಗೆ ಮೋದಿ ಸರ್ಕಾರವೇ ಕಾರಣ.

ಮೋದಿ ಅವರೇ ಈಗಲಾದರೂ ಎಚ್ಚೆತ್ತುಕೊಳ್ಳಿ, ನಮ್ಮ ದೇಶವನ್ನು ಸುರಕ್ಷತೆಯಾಗಿ ಇರುವುದಕ್ಕೆ ಸರ್ಕಾರವನ್ನು ನಡೆಸಿ, ದೇಶದ ಭದ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಿ, ನಮ್ಮ ದೇಶದ ಭೂಪ್ರದೇಶ ಕಾಪಾಡಿಕೊಳ್ಳಿ ಎಂದು ಒತ್ತಾಯ ಮಾಡುತ್ತೇವೆ ಎಂದರು.