ಜ್ಞಾನಸುಧಾ ಕಾಲೇಜಿನ 37 ವಿದ್ಯಾರ್ಥಿಗಳಿಗೆ ಮೊದಲ 10 ರ್‍ಯಾಂಕ್‌ ಸಾಧನೆ

| Published : Apr 11 2024, 12:48 AM IST

ಜ್ಞಾನಸುಧಾ ಕಾಲೇಜಿನ 37 ವಿದ್ಯಾರ್ಥಿಗಳಿಗೆ ಮೊದಲ 10 ರ್‍ಯಾಂಕ್‌ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಶದಲ್ಲಿಕಾರ್ಕಳ ಜ್ಞಾನಸುಧಾ ಕಾಲೇಜು ವಿದ್ಯಾರ್ಥಿಗಳು ರಾಜ್ಯಕ್ಕೆ ೧೦ರೊಳಗಿನ ೩೭ ರ‍್ಯಾಂಕ್ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ ಸಮ್ಯಕ್ ಆರ್ ಪ್ರಭು (೫೯೫/೬೦೦) ಹಾಗೂ ವಾಣಿಜ್ಯ ವಿಭಾಗದಲ್ಲಿ ಚೈತ್ರ ಕಾಮತ್(೫೯೪/೬೦೦) ಅಂಕ ಗಳಿಸಿ ರಾಜ್ಯಕ್ಕೆ ೪ನೇ ಸ್ಥಾನ ಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಶದಲ್ಲಿ ಇಲ್ಲಿನ ಜ್ಞಾನಸುಧಾ ಕಾಲೇಜು ವಿದ್ಯಾರ್ಥಿಗಳು ರಾಜ್ಯಕ್ಕೆ ೧೦ರೊಳಗಿನ ೩೭ ರ‍್ಯಾಂಕ್ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ ಸಮ್ಯಕ್ ಆರ್ ಪ್ರಭು (೫೯೫/೬೦೦) ಹಾಗೂ ವಾಣಿಜ್ಯ ವಿಭಾಗದಲ್ಲಿ ಚೈತ್ರ ಕಾಮತ್(೫೯೪/೬೦೦) ಅಂಕ ಗಳಿಸಿ ರಾಜ್ಯಕ್ಕೆ ೪ನೇ ಸ್ಥಾನ ಗಳಿಸಿದ್ದಾರೆ.

ವಿಜ್ಞಾನ ವಿಭಾಗ:

ವಿಜ್ಞಾನ ವಿಭಾಗದಲ್ಲಿ ೬೬೩ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಈ ಮೂಲಕ ೯೬% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿಯೂ, ಉಳಿದ ೪% ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶೇ.೯೯ಕ್ಕಿಂತ ಅಧಿಕ ೪ ವಿದ್ಯಾರ್ಥಿಗಳು, ಶೇ.೯೮ಕ್ಕಿಂತ ಅಧಿಕ ೩೬ ವಿದ್ಯಾರ್ಥಿಗಳು, ಶೇ.೯೭ಕ್ಕಿಂತ ಅಧಿಕ ೧೨೫ ವಿದ್ಯಾರ್ಥಿಗಳು ಶೇ.೯೬ಕ್ಕಿಂತ ಅಧಿಕ ೨೩೪ ವಿದ್ಯಾರ್ಥಿಗಳು, ಶೇ.೯೫ಕ್ಕಿಂತ ಅಧಿಕ ೩೧೭ ವಿದ್ಯಾರ್ಥಿಗಳು, ಶೇ.೯೦ಕ್ಕಿಂತ ಅಧಿಕ ೫೭೯ ವಿದ್ಯಾರ್ಥಿಗಳು ಅಂಕ ಗಳಿಸಿರುತ್ತಾರೆ.

ಸಮ್ಯಕ್ ಆರ್ ಪ್ರಭು ೫೯೫ ಅಂಕ ಗಳಿಸಿ ರಾಜ್ಯಕ್ಕೆ ೪ನೇ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಜೊತೆಗೆ ಖುಷಿ.ಎಸ್.ಹೆಗ್ಡೆ ೫೯೪ (೫ನೇ ರ‍್ಯಾಂಕ್), ಸಂಜನಾ ಪಟಗಾರ್ ೫೯೪ (೫ನೇ ರ‍್ಯಾಂಕ್), ಚಿನ್ಮಯ್.ಎಸ್.ದೇಶಪಾಂಡೆ ೫೯೩ (೬ನೇ ರ‍್ಯಾಂಕ್), ರೋಶ್ನಿ ಎಂ.ಪಿ ೫೯೩ (೬ನೇ ರ‍್ಯಾಂಕ್), ಪ್ರಣವ್ ಕುಮಾರ್ ಭಂಡಿ ೫೯೨ (೭ನೇ ರ‍್ಯಾಂಕ್), ರಕ್ಷಣ್ ಆರ್ ೫೯೨ (೭ನೇ ರ‍್ಯಾಂಕ್), ಅಮೃತ ಶಾಂತರಾಮ್ ಶೆಟ್ಟಿ ೫೯೨ (೭ನೇ ರ‍್ಯಾಂಕ್), ಶ್ರೀಧ ಕಾಮತ್ ೫೯೨ (೭ನೇ ರ‍್ಯಾಂಕ್), ಚಿನ್ಮಯ್ ಎಂ.ಬಿ. ೫೯೧ (೮ನೇ ರ‍್ಯಾಂಕ್), ಕೃಷ್ ಎಸ್. ಕೆ. ೫೯೧ (೮ನೇ ರ‍್ಯಾಂಕ್), ಕೃಷ್ಣ ಗಣಪತಿ ಭಟ್ ೫೯೧ (೮ನೇ ರ‍್ಯಾಂಕ್), ಸಂಪದ ಇಂಚಾಲ್ ೫೯೧ (೮ನೇ ರ‍್ಯಾಂಕ್), ಸಂಜನಾ ಆರ್ ರಾವ್ ೫೯೧ (೮ನೇ ರ‍್ಯಾಂಕ್), ತನ್ಮಯ್ ಶೆಟ್ಟಿ ೫೯೧ (೮ನೇ ರ‍್ಯಾಂಕ್), ತಿಲಕ್ ಚಂದ್ರ ೫೯೧ (೮ನೇ ರ‍್ಯಾಂಕ್), ಬಿಪಿನ್ ಜೈನ್ ೫೯೧(೮ನೇ ರ‍್ಯಾಂಕ್), ನಿಧಿ ಪಿ ಶರ್ಮಾ ೫೯೧ (೮ನೇ ರ‍್ಯಾಂಕ್), ಕೆ.ಅನಿರುದ್ದ್ ಕಾಮತ್ ೫೯೦ (೯ನೇ ರ‍್ಯಾಂಕ್), ವೈಭವ್ ವಾಲಿ ೫೯೦ (೯ನೇ ರ‍್ಯಾಂಕ್), ಭಾಗ್ಯಲಕ್ಮೀ ಶೆಟ್ಟಿ ೫೯೦ (೯ನೇ ರ‍್ಯಾಂಕ್), ಚಂದನ್,.ಎ.ಎA ೫೮೯ (೧೦ನೇ ರ‍್ಯಾಂಕ್), ಚಂದನಾ ಗಂಗಾಧರ್ ನಾಯಕ್ ೫೮೯ (೧೦ನೇ ರ‍್ಯಾಂಕ್), ಸಮೀಕ್ಷಾ ಶಿವ ಶಂಕರ್ ೫೮೯ (೧೦ನೇ ರ‍್ಯಾಂಕ್), ಸಮ್ಮಿತ್ ಯು.ಕೆ ೫೮೯ (೧೦ನೇ ರ‍್ಯಾಂಕ್), ಆಧ್ಯ ವಿ. ಬಲ್ಲು ೫೮೯ (೧೦ನೇ ರ‍್ಯಾಂಕ್), ಅಮೃತ್ ಆರ್ ೫೮೯(೧೦ನೇ ರ‍್ಯಾಂಕ್), ಆರ್ಯ ಎಂ.ಜಿ ೫೮೯ (೧೦ನೇ ರ‍್ಯಾಂಕ್), ಶ್ರೇಯಸ್ ಎಸ್ ೫೮೯(೧೦ನೇ ರ‍್ಯಾಂಕ್) ಆರ್.ಎಚ್.ಶ್ರಾವಣಿ ತಂತ್ರಿ ೫೮೯ (೧೦ನೇ ರ‍್ಯಾಂಕ್), ರಿಯಾ ಆಳ್ವಾ ೫೮೯ (೧೦ನೇ ರ‍್ಯಾಂಕ್) ಪಡೆದಿರುತ್ತಾರೆ.

ವಾಣಿಜ್ಯ ವಿಭಾಗ :

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು ೫೭ ವಿದ್ಯಾರ್ಥಿಳಲ್ಲಿ ೪೯ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶೇ.೯೮ಕ್ಕಿಂತ ಅಧಿಕ ೬ ವಿದ್ಯಾರ್ಥಿಗಳು, ಶೇ.೯೬ಕ್ಕಿಂತ ಅಧಿಕ ೧೯ ವಿದ್ಯಾರ್ಥಿಗಳು, ಶೇ.೯೫ಕ್ಕಿಂತ ಅಧಿಕ ೨೫ ವಿದ್ಯಾರ್ಥಿಗಳು, ಶೇ.೯೦ಗಿಂತ ಅಧಿಕ ಅಂಕ ಗಳಿಸಿದ ೪೦ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ.

ಚೈತ್ರಾ ಕಾಮತ್ ೫೯೪ ಅಂಕ ಗಳಿಸಿ ರಾಜ್ಯಕ್ಕೆ ೪ನೇ ರ‍್ಯಾಂಕ್ ಗಳಿಸಿದ್ದು, ಶ್ರವಣ್ ೫೯೦(೮ನೇ ರ‍್ಯಾಂಕ್), ಪೂಜಾರಿ ಶ್ರೇಯಾ ಪ್ರಶಾಂತ್ ೫೯೦(೮ನೇ ರ‍್ಯಾಂಕ್), ಸುವಿಕ್ಷಾ ಎಸ್ ಶೆಟ್ಟಿ ೫೮೮ (೧೦ನೇ ರ‍್ಯಾಂಕ್), ವೈಷ್ಣವಿ ಶೆಣೈ ೫೮೮ (೧೦ನೇ ರ‍್ಯಾಂಕ್), ಶ್ರಾವಣಿ ೫೮೮(೧೦ನೇ ರ‍್ಯಾಂಕ್) ಗಳಿಸುವುದರ ಜೊತೆಗೆ ಸುಜಲ್ ಡಿ. ಹೆಗ್ಡೆ ೫೮೭, ಸಮಿಯಾ ಎಸ್ ಹೆಗ್ಡೆ ೫೮೬, ಸನ್ನಿಧಿ ಶೆಟ್ಟಿ ೫೮೬, ಕೀರ್ತನಾ ರಾವ್ ೫೮೫, ಪ್ರಣಮ್ ಕರ್ಕೆರಾ ೫೮೪, ದಿಶಾ ಡಿ. ಪೂಜಾರಿ ೫೮೨, ಹಯತ್ ನಾಯಕ್ ೫೮೨ ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ.ಸುಧಾಕರ್‌ ಶೆಟ್ಟಿ ಅಭಿನಂದಿಸಿದ್ದಾರೆ.