ದಸರಾ ಕ್ರೀಡಾಕೂಟ: ಬೆಂಗಳೂರು, ಮೈಸೂರು ವಿಭಾಗ ಮೇಲುಗೈ

| Published : Oct 05 2024, 01:31 AM IST

ಸಾರಾಂಶ

ಎತ್ತರ ಜಿಗಿತದಲ್ಲಿ ಬೆಂಗಳೂರಿನ ಬಿ. ಚೇತನ್‌ ಚಿನ್ನ, ದಕ್ಷಿಣಕನ್ನಡದ ಭವಿತ್‌ಕುಮಾರ್‌ಬೆಳ್ಳಿ, ಉಡುಪಿಯ ಸಿನನ್‌ಕಂಚು

ಕನ್ನಡಪ್ರಭ ವಾರ್ತೆ ಮೈಸೂರು

ನಾಡಹಬ್ಬ ದಸರಾ ಅಂಗವಾಗಿ ನಡೆಯುತ್ತಿರುವ ಕ್ರೀಡಾಕೂಟದ ಮೊದಲ ದಿನವಾದ ಶುಕ್ರವಾರ ಬೆಂಗಳೂರು ಮತ್ತು ಮೈಸೂರು ವಿಭಾಗದ ಕ್ರೀಡಾಪಟುಗಳು ಪ್ರಾಬಲ್ಯ ಸಾಧಿಸಿದರು.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ 100 ಮೀ. ಓಟ ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯ ಗಗನ್‌ಎಲ್‌. ಗೌಡ ಚಿನ್ನ, ಶಿವಮೊಗ್ಗದ ಎಂ. ಗೌತಮ್‌ಬೆಳ್ಳಿ, ಮೈಸೂರಿನ ಎಂ. ಮಂಜು ಕಂಚಿನ ಪದಕಪಡೆದರು. 400 ಮೀ. ಓಟದಲ್ಲಿ ಬೆಂಗಳೂರಿನ ತುಷಾರ್‌ ಭೆಕಣೆಗೆ ಚಿನ್ನ, ದಕ್ಷಿಣಕನ್ನಡದ ಡಿ. ದಯಾನಂದ್‌ಹಣಮಂತ್‌ಬೆಳ್ಳಿ ಮತ್ತು ಬೆಂಗಳೂರು ಗ್ರಾಮಾಂತರದ ಎಂ. ನಿತಿನ್‌ ಗೌಡ ಕಂಚು, 1500 ಮೀ. ಓಟದಲ್ಲಿ ಶಿವಮೊಗ್ಗದ ಎಂ.ಎಸ್‌. ಅಶ್ರಿತ್‌ಚಿನ್ನ, ಬೆಂಗಳೂರಿನ ಜೆ.ಆರ್‌. ಕಲ್ಯಾಣ್‌ಬೆಳ್ಳಿ ಮತ್ತು ರಾಮನಗರದ ಇ. ಸುದೀಪ್‌ ಕಂಚು ಪಡೆದರು.

ಎತ್ತರ ಜಿಗಿತದಲ್ಲಿ ಬೆಂಗಳೂರಿನ ಬಿ. ಚೇತನ್‌ ಚಿನ್ನ, ದಕ್ಷಿಣಕನ್ನಡದ ಭವಿತ್‌ಕುಮಾರ್‌ಬೆಳ್ಳಿ, ಉಡುಪಿಯ ಸಿನನ್‌ಕಂಚು ಪಡೆದರು. ತ್ರಿಬಲ್‌ಜಂಪ್‌ ನಲ್ಲಿ ಬೆಳಗಾವಿಯ ಜಫರ್‌ಖಾನ್‌ಎಂ. ಸರ್ವಾರ್‌ಚಿನ್ನ, ಮಂಡ್ಯದ ಯಶಸ್‌ಆರ್‌. ಗೌಡ ಬೆಳ್ಳಿ, ಕೊಡಗಿನ ಎಸ್‌. ಪುನೀತ್‌ಕಂಚು ಪಡೆದರು. ಡಿಸ್ಕಸ್‌ ಎಸೆತದಲ್ಲಿ ಮೈಸೂರಿನ ಮಹಮ್ಮದ್‌ಎಸ್‌. ಅಹಮದ್‌ಚಿನ್ನ, ಮೋಹಿತ್‌ಎನ್‌. ರಾಜ್‌ಬೆಳ್ಳಿ ಮತ್ತು ವಿಜಯಪುರದ ಪ್ರೀತಮ್‌ರಜಪೂತ್‌ಕಂಚು ಪಡೆದರು. ಜಾವಲಿನ್‌ ಎಸೆತದಲ್ಲಿ ಬೆಗಾವಿಯ ಶಶಾಂಕ್‌ಜಿ. ಪಾಟೀಲ್‌ಚಿನ್ನ, ಬೆಂಗಳೂರಿನ ಶಾರುಕ್‌ತರಿಹಾಳ್‌ ಬೆಳ್ಳಿ ಮತ್ತು ಉಡುಪಿಯ ಸಿದ್ದಪ್ಪ ದಂಡಿನ್‌ಕಂಚುಪಡೆದರು. ಮಹಿಳೆಯರ 400 ಮೀ. ಓಟದಲ್ಲಿ ಧಾರವಾಡದ ಮೇಘಾ ಮುನವಾಳ್ಳಿಮಠ್‌ ಚಿನ್ನ, ಬೆಂಗಳೂರಿನ ಎನ್‌.ಸಿ. ಮಾನಸಾ ಬೆಳ್ಳಿ ಮತ್ತು ಉಡುಪಿಯ ಪ್ರತೀಕ್ಷಾ ಕಂಚನ್ನು ತಮ್ಮದಾಗಿಸಿಕೊಂಡರು.

1500 ಮೀ. ಮಹಿಳೆಯರ ಓಟದಲ್ಲಿ ಬೆಂಗಳೂರು ಗ್ರಾಮಾಂತರದ ಪ್ರಣತಿ ಚಿನ್ನ, ಬೆಳಗಾವಿಯ ಶಿಪ ಹೊಸಮನಿ ಬೆಳ್ಳಿ, ದಕ್ಷಿಣ ಕನ್ನಡದ ಎನ್‌.ಎಸ್‌. ರೂಪಶ್ರೀ ಕಂಚು, ಎತ್ತರ ಜಿಗಿತದಲ್ಲಿ ದಕ್ಷಿಣ ಕನ್ನಡದ ಫ್ಲರ್ವಿಶ ವೆಲಿಶ್‌ ಮೊಂಟೆರೋ ಚಿನ್ನ, ಬೆಂಗಳೂರಿನ ಪಿ. ಹರ್ಷಿತಾ ಬೆಳ್ಳಿ ಮತ್ತು ಧಾರವಾಡದ ಅಕ್ಷತಾ ಎಸ್‌. ದೊಡ್ಡಮನಿ ಕಂಚು, ತ್ರಿಬಲ್‌ಜಂಪ್‌ ಮಹಿಳೆಯರ ವಿಭಾಗದಲ್ಲಿ ಉಡುಪಿಯ ಜಿ. ಪವಿತ್ರಾ ಚಿನ್ನ, ಬೆಂಗಳೂರಿನ ಸಿ. ವರ್ಷಿತಾ ಬೆಳ್ಳಿ ಮತ್ತು ಶಿವಮೊಗ್ಗದ ಅಮೂಲ್ಯ ಕಂಚುಪಡೆದರು.

ಡಿಸ್ಕಸ್‌ ಎಸೆತದಲ್ಲಿ ಮೈಸೂರಿನ ಎಂ.ಎನ್‌. ಸುಷ್ಮಾ ಚಿನ್ನ, ದಕ್ಷಿಣ ಕನ್ನಡದ ಬಿ. ಸುಷ್ಮಾ ಬೆಳ್ಳಿ, ಬೆಂಗಳೂರಿನ ಕೆ.ವಿ. ಲಿಖಿತಾ ಕಂಚು ಸಂಪಾದಿಸಿದರು.

ಜಾವಲಿನ್‌ ಎಸೆತದಲ್ಲಿ ಹಾಸನದ ಶಹೆಜಹಾನಿ ಚಿನ್ನ, ಬೆಳಗಾವಿಯ ದೀಪಾ ಕೊಪನಿ ಬೆಳ್ಳಿ ಮತ್ತು ದಕ್ಷಿಣ ಕನ್ನಡದ ಸಿಂಚನ ಕಂಚಿನ ಪದಕಪಡೆದರು.

ಈಜು ಸ್ಪರ್ಧೆ

ಫ್ರೀ ಸ್ಟೈಲ್‌ ಪುರುಷರ 400 ಮೀ. ಸ್ಪರ್ಧೆಯಲ್ಲಿ ಬೆಂಗಳೂರಿನ ದರ್ಶನ್‌ಗೆ ಚಿನ್ನ, ವಿ. ಧ್ರುವ ಬೆಳ್ಳಿ, ಬೆಳಗಾವಿಯ ಸ್ಮರಣ್‌ಸುಜಿತ್‌ಮಂಗಳೂರ್ಕರ್‌ ಕಂಚು, ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಶಮನ್ವಿ ಎಚ್‌.ಗೌಡ ಚಿನ್ನ, ವಿ. ಪ್ರೀತಾ ಬೆಳ್ಳಿ ಮತ್ತು ಚಿಕ್ಕಬಳ್ಳಾಪುರದ ಲಿಪಿಕಾ ದೇವ್‌ಕಂಚು ಸಂಪಾದಿಸಿದರು. ಬ್ರೆಸ್ಟ್‌ಸ್ಟ್ರೋಕ್‌100 ಮೀ. ಈಜಿನಲ್ಲಿ ದಾವಣಗೆರೆಯ ಎಲ್‌. ಮಣಿಕಂಠ ಚಿನ್ನ, ಬೆಳಗಾವಿಯ ಸ್ಮರಣ್‌ಸುಜಿತ್‌ಮಂಗಳೂರ್ಕರ್‌ಬೆಳ್ಳಿ ಮತ್ತು ಹಾಸನದ ಎಚ್‌.ಕೆ. ರತನ್‌ಗೌಡ ಕಂಚು ಪಡೆದರು. ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ವಿ. ಹಿತಶಿ ಚಿನ್ನ, ಎಂ.ವಿ. ರಿಷಿಕಾ ಬೆಳ್ಳಿ ಮತ್ತು ಬೆಳಗಾವಿಯ ಸಮಿಯಾ ಮೆನ್ಸೆ ಕಂಚು, ಬ್ಯಾಕ್‌ಸ್ಟ್ರೋಕ್‌ 200 ಮೀ. ಪುರುಷರ ಪಂದ್ಯದಲ್ಲಿ ಬೆಳಗಾವಿಯ ಧವಾಲ್‌ಡಿ. ಹನಮಣ್ಣವರ್‌ ಚಿನ್ನ, ದಕ್ಷಿಣಕನ್ನಡದ ವಾಫಿ ಅಬ್ದುಲ್‌ಹಕೀಮ್‌ ಬೆಳ್ಳಿ, ದಾವಣಗೆರೆಯ ಎಲ್‌. ಮಣಿಕಂಠ ಕಂಚು, ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಎನೈಶಾ ಶೆಟ್ಟಿ ಚಿನ್ನ, ವಿ. ಪ್ರೀತಾ ಬೆಳ್ಳಿ, ಬೆಳಗಾವಿಯ ವೈಶಾಲಿ ಸಂಜಯ್‌ಘಟೆಗಸ್ತಿ ಕಂಚು, ಬಟರ್‌ಫ್ಲೈ 100 ಮೀ. ಪುರುಷರ ವಿಭಾಗದಲ್ಲಿ ದಾವಣಗೆರೆಯ ಮಣಿಕಂಠ ಚಿನ್ನ, ಬೆಂಗಳೂರಿನ ದರ್ಶನ್‌ಬೆಳ್ಳಿ, ಬೆಳಗಾವಿಯ ಸ್ಮಯಮ್‌ಅಮಿತ್‌ಕರೇಕರ್‌ಕಂಚು, ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ನೈಶಾ ಶೆಟ್ಟಿ ಚಿನ್ನ, ವಿ. ಹಿತಷಿ ಬೆಳ್ಳಿ ಮತ್ತು ಚಿಕ್ಕಬಳ್ಳಾಪುರದ ಲಿಪಿಕಾ ದೇವ್‌ಕಂಚು, ವೈಯಕ್ತಿಕ ಮಿಡ್ಲೆ ಪುರುಷರ ವಿಭಾಗದಲ್ಲಿ ದಾವಣಗೆರೆಯ ಎಲ್‌. ಮಣಿಕಂಠ ಚಿನ್ನ, ಬೆಂಗಳೂರಿನ ಎನ್‌. ಧೋನ್ನೇಶ್‌ಬೆಳ್ಳಿ, ಬೆಳಗಾವಿಯ ಸ್ಮರಣ್‌ಸುಜಿತ್‌ಮಂಗಳೂರ್ಕರ್‌, ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ವಿ. ಹಿತಷಿ ಚಿನ್ನ, ಚಿಕ್ಕಬಳ್ಳಾಪುರದ ಲಿಪಿಕಾ ದೇವ್‌ ಬೆಳ್ಳಿ ಮತ್ತು ಧಾರವಾಡದ ಸಾಕ್ಷಿ ಸಂಗಮೇಶ್‌ಶಿರಳ್ಳಿ ಕಂಚು ಪಡೆದರು.

ಥ್ರೋ ಬಾಲ್‌ ಪಂದ್ಯಾವಳಿಯಲ್ಲಿ ಮೈಸೂರು ಎರಡು ಪಂದ್ಯಾಗಳಲ್ಲಿ ಜಯಗಳಿಸಿದರೆ, ಬೆಂಗಳೂರು ನಗರ ಐದು ಪಂದ್ಯಗಳಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ಒಂದು ಪಂದ್ಯದಲ್ಲಿ ಜಯಗಳಿಸಿತು.