ಸಾರಾಂಶ
ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಮಾಕೋಡಿನ ಟಿ.ಎಸ್.ಜಿನೇಶ್ ಶೈಜು ತೇಲಾ ಕಾಡನ್ ಅವರು ಬೆಂಗಳೂರಿನ ಬೇಗೂರಿನ ಫಿಟ್ ಅಂಡ್ ಫಿಟ್ ಫಿಟ್ನೆಸ್ ಸೆಂಟರ್ ಭಾನುವಾರ ಆಯೋಜನೆ ಮಾಡಿದ್ದ ಓಪನ್ ಕರ್ನಾಟಕ ಡೆಡ್ ಲಿಫ್ಟ್ ಛಾಂಪಿಯನ್ ಶಿಪ್ ನಲ್ಲಿ 60 ರಿಂದ 70 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಮಾಕೋಡಿನ ಟಿ.ಎಸ್.ಜಿನೇಶ್ ಶೈಜು ತೇಲಾ ಕಾಡನ್ ಅವರು ಬೆಂಗಳೂರಿನ ಬೇಗೂರಿನ ಫಿಟ್ ಅಂಡ್ ಫಿಟ್ ಫಿಟ್ನೆಸ್ ಸೆಂಟರ್ ಭಾನುವಾರ ಆಯೋಜನೆ ಮಾಡಿದ್ದ ಓಪನ್ ಕರ್ನಾಟಕ ಡೆಡ್ ಲಿಫ್ಟ್ ಛಾಂಪಿಯನ್ ಶಿಪ್ ನಲ್ಲಿ 60 ರಿಂದ 70 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಟಿ.ಎಸ್. ಜಿನೇಶ್ ಶೈಜು ತೇಲಾ ಕಾಡನ್ ಕಳೆದ ವರ್ಷವೂ ಡಿಸೆಂಬರ್ 16 ರಂದು ಭದ್ರಾವತಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 66 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿ 455 ಕೆ.ಜಿ. ಭಾರ ಎತ್ತುವುದರೊಂದಿಗೆ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಟಿ.ಎಸ್.ಜಿನೇಶ್ ಸತತವಾಗಿ 2 ವರ್ಷದಿಂದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತಿದ್ದಾರೆ.