ಶ್ರಾವಣ ಶನಿವಾರ ಹಿನ್ನೆಲೆ ದೇವಾಲಯದಲ್ಲಿ ಮುಂಜಾನೆಯಿಂದಲೇ ಅರ್ಚಕ ವೃಂದ ಶ್ರೀರಾಮ, ಲಕ್ಷ್ಮಣ, ಸೀತೆಯ ಮೂರ್ತಿಗಳಿಗೆ ಹಾಲು, ಮೊಸರು, ಎಳನೀರು, ಅರಿಶಿನ, ಕುಂಕುಮ, ಪಂಚಾಂಮೃತ ಅಭಿಷೇಕ ಹಾಗೂ ಪವಿತ್ರ ಕಾವೇರಿ ನದಿಯ ಜಲದಿಂದ ಅಭಿಷೇಕ ಮಾಡಿದ ನಂತರ ವಿಶೇಷ ಹೋಮ ಹವನ ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನಡೆಯಿತು.
ಕನ್ನಡಪ್ರಭ ವಾರ್ತೆ ಚುಂಚನಕಟ್ಟೆ
ಮೊದಲನೇ ಶ್ರಾವಣ ಶನಿವಾರದಂದು ಸಾವಿರಾರು ಸಂಖ್ಯೆಯ ಭಕ್ತರು ಚುಂಚನಕಟ್ಟೆ ಗ್ರಾಮದಲ್ಲಿರುವ ಪಟ್ಟಾಭಿ ಶ್ರೀರಾಮನ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಶ್ರಾವಣ ಶನಿವಾರ ಹಿನ್ನೆಲೆ ದೇವಾಲಯದಲ್ಲಿ ಮುಂಜಾನೆಯಿಂದಲೇ ಅರ್ಚಕ ವೃಂದ ಶ್ರೀರಾಮ, ಲಕ್ಷ್ಮಣ, ಸೀತೆಯ ಮೂರ್ತಿಗಳಿಗೆ ಹಾಲು, ಮೊಸರು, ಎಳನೀರು, ಅರಿಶಿನ, ಕುಂಕುಮ, ಪಂಚಾಂಮೃತ ಅಭಿಷೇಕ ಹಾಗೂ ಪವಿತ್ರ ಕಾವೇರಿ ನದಿಯ ಜಲದಿಂದ ಅಭಿಷೇಕ ಮಾಡಿದ ನಂತರ ವಿಶೇಷ ಹೋಮ ಹವನ ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನಡೆಯಿತು.
ನಂತರ ಹಲವು ಬಗೆಯ ಹೂಗಳು ಹಾಗೂ ತೋ ಮಾಲೆ ಅಲಂಕಾರ ಮಾಡಲಾಗಿತ್ತು. ಪ್ರಧಾನ ಅರ್ಚಕ ನಾರಾಯಣ ಅಯ್ಯಂಗಾರ್ ಹಾಗೂ ವಾಸುದೇವನ್ ಭಕ್ತರ ಸಮ್ಮುಖದಲ್ಲಿ ದೇವರಿಗೆ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ನೀಡಿದರು.ಗ್ರಾಮ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಬೆಳಗ್ಗೆಯಿಂದ ಸಂಜೆವರೆಗೂ ತಂಡೋಪತಂಡವಾಗಿ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಶ್ರೀರಾಮನಾಮ ಪಠಿಸುತ್ತಾ ದೇವರಿಗೆ ಹಣ್ಣು ಕಾಯಿ ನೈವೇದ್ಯ ನೀಡಿ ಭಕ್ತಯಿಂದ ಪ್ರಾರ್ಥಿಸುತ್ತಾ ದೇವರ ದರ್ಶನ ಪಡೆದು ಪುನೀತರಾದರು.
ಸ್ವಚ್ಛತೆ ಇಲ್ಲದ ಆವರಣ:ಹೌದು ಶ್ರಾವಣ ಶನಿವಾರದಿನದಂದು ಧಾರ್ಮಿಕ ಆಚರಣೆಯ ಪ್ರತಿತಿಯಂತೆ ಬಸವನ ಪ್ರತಿಮೆ ನೀರಿಂದ ಸ್ವಚ್ಛತೆ ಹೂವಿಂದ ಅಲಂಕಾರ ಸೇರಿದಂತೆ ದೇವಾಲಯ ಹಾಗೂ ಮುಖ್ಯ ದ್ವಾರದ ಕಾಮನಿಗೆ ತಳಿರು ತೋರಣ ಹಾಗೂ ದೇಗುಲದ ಆವರಣ ಸ್ವಚ್ಛತೆಯಿಂದ ಸಾಮಾನ್ಯವಾಗಿ ನಳನಳಿಸಿ ಬರುವ ಭಕ್ತರ ಸಾರ್ವಜನಿಕರ ಸ್ವಾಗತ ಕೋರುವುದರ ಮೂಲಕ ಶ್ರಾವಣ ಸಂಭ್ರಮ ಮನೆ ಮಾಡುತ್ತಿತ್ತು.
ಆದರೆ, ಅಧಿಕಾರಿಗಳ ನಿರ್ಲಕ್ಷ್ಯವೋ ಇಲ್ಲ ತಾತ್ಸಾರವೋ ಯಾವುದೇ ತಳಿರು ತೋರಣವಾಗಲಿ, ಬಸವನ ಪ್ರತಿಮೆಯನ್ನು ನೀರಿನಿಂದ ಸ್ವಚ್ಛತೆಯಾಗಲಿ, ಮುಖ್ಯ ದ್ವಾರ ಸೇರಿದಂತೆ ಅವರಣದೆಲ್ಲೆಡೆ ಸ್ವಚ್ಛತೆ ಇಲ್ಲದೆ ಎಲ್ಲೆಡೆ ತ್ಯಾಜ್ಯಗಳಿಂದ ಸ್ವಾಗತಿಸುತ್ತಿರುವುದನ್ನು ಕಂಡು ಧಾರ್ಮಿಕ ಆಚರಣೆಯ ಭಾವನೆಗೆ ಧಕ್ಕೆ ಆಗಿರುದನ್ನು ಸ್ಥಳೀಯ ಭಕ್ತರು ದೇಗುಲದ ಆಡಳಿತದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.