ಬ್ರಿಟಿಷರ ವಿರುದ್ಧ ದಂಗೆಯದ್ದ ಮೊದಲ ಮಹಿಳಾ ಹೋರಾಟಗಾರ್ತಿ: ತಹಸೀಲ್ದಾರ್ ಮಹೇಶ್ ಪತ್ರಿ

| Published : Oct 25 2024, 12:56 AM IST

ಬ್ರಿಟಿಷರ ವಿರುದ್ಧ ದಂಗೆಯದ್ದ ಮೊದಲ ಮಹಿಳಾ ಹೋರಾಟಗಾರ್ತಿ: ತಹಸೀಲ್ದಾರ್ ಮಹೇಶ್ ಪತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಿತ್ತೂರು ರಾಣಿ ಚೆನ್ನಮ್ಮನ ಹೆಸರು ಧೈರ್ಯದ ಪ್ರತೀಕವಾಗಿದೆ, ಸಣ್ಣ ಸಾಮ್ರಾಜ್ಯದ ರಾಣಿಯಾಗಿದ್ದರೂ ದೇಶಕ್ಕಾಗಿ ಮಾಡಿದ ಹೋರಾಟದಲ್ಲಿ ಬ್ರಿಟಿಷರು ಹಲವು ಬಾರಿ ಜೈಲಿಗೆ ಕಳಿಸಿದರೂ ಎದೆಗುಂದದೆ ತುಂಬಾ ಧೈರ್ಯದಿಂದ ಬ್ರಿಟಿಷರನ್ನು ಎದುರಿಸಿ, ದೇಶ ಪ್ರೇಮ ಮೆರೆದಿದ್ದಾರೆ, ಇಂತಹ ಅಪ್ಪಟ ದೇಶ ಪ್ರೇಮಿಯ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಕಿತ್ತೂರಿನ ವೀರರಾಣಿ ಚೆನ್ನಮ್ಮನವರು ಬ್ರಿಟಿಷರ ವಿರುದ್ಧ ದಂಗೆಯೆದ್ದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದಾರೆ. ಚೆನ್ನಮ್ಮ ಅವರ ಶೌರ್ಯ, ಪರಾಕ್ರಮದ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವುದು ಅತ್ಯವಶ್ಯಕವಾಗಿದೆ ಎಂದು ತಹಸೀಲ್ದಾರ್‌ ಮಹೇಶ್‌ ಎಸ್.‌ ಪತ್ರಿ ಹೇಳಿದರು.

ನಗರದ ಹೊರವಲಯದಲ್ಲಿರುವ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ಬುಧವಾರ ರಾಣಿ ಚೆನ್ನಮ್ಮರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ನಂತರ ಮಾತನಾಡಿದ ಅವರು, ಕಿತ್ತೂರು ರಾಣಿ ಚೆನ್ನಮ್ಮನ ಹೆಸರು ಧೈರ್ಯದ ಪ್ರತೀಕವಾಗಿದೆ, ಸಣ್ಣ ಸಾಮ್ರಾಜ್ಯದ ರಾಣಿಯಾಗಿದ್ದರೂ ದೇಶಕ್ಕಾಗಿ ಮಾಡಿದ ಹೋರಾಟದಲ್ಲಿ ಬ್ರಿಟಿಷರು ಹಲವು ಬಾರಿ ಜೈಲಿಗೆ ಕಳಿಸಿದರೂ ಎದೆಗುಂದದೆ ತುಂಬಾ ಧೈರ್ಯದಿಂದ ಬ್ರಿಟಿಷರನ್ನು ಎದುರಿಸಿ, ದೇಶ ಪ್ರೇಮ ಮೆರೆದಿದ್ದಾರೆ, ಇಂತಹ ಅಪ್ಪಟ ದೇಶ ಪ್ರೇಮಿಯ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚೆನ್ನಮ್ಮಾಜೀ 1778ರ ಅಕ್ಟೋಬರ್‌ 23ರಂದು ಕರ್ನಾಟಕ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಲಿಂಗಾಯಿತ ಸಮುದಾಯದಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಕೌಟುಂಬಿಕ ಸಂಪ್ರದಾಯದಂತೆ ಕತ್ತಿವರಸೆ, ಬಿಲ್ಲುಗಾರಿಕೆ ಮತ್ತು ಕುದುರೆ ಸವಾರಿಯಲ್ಲಿ ತರಬೇತಿಯನ್ನು ಪಡೆದಿದ್ದರು. ಕಿತ್ತೂರಿನ ರಾಣಿಚೆನ್ನಮ್ಮ ಎಂದು ಕರೆಯಲ್ಪಡುವ ಅವರು, ಬ್ರಿಟಿಷರ ವಿರುದ್ಧ ದಂಗೆಯೆದ್ದ ಮೊದಲ ಮಹಿಳಾ ಹೋರಾಟಗಾರರೆಂದು ಪ್ರಶಂಸಿಸಲ್ಪಟ್ಟಿದ್ದಾರೆ ಎಂದು ತಿಳಿಸಿದರು.

ಮೊದಲ ಯುದ್ಧದಲ್ಲಿ ಸೋತ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ 1824ರ ದಂಗೆಗೆ ಪ್ರಸಿದ್ಧರಾದ ಕಿತ್ತೂರಿನ ಚೆನ್ನಮ್ಮರ ಸಾಧನೆಯು ಅವರನ್ನು ಕರ್ನಾಟಕ ಸಂಸ್ಕೃತಿಯಲ್ಲಿ ಜಾನಪದ ನಾಯಕಿಯಾಗಿ ಮತ್ತು ಸ್ವಾತಂತ್ರ್ಯ ಚಳುವಳಿಯ ಪ್ರಧಾನ ಸಂಕೇತವಾಗಿ ಪರಿವರ್ತಿಸಿತು. ಅಲ್ಲದೆ ಚೆನ್ನಮ್ಮನವರು ನಮ್ಮಲ್ಲಿನ ಒಳಸಂಚಿನಿಂದ ಬ್ರಿಟಿಷರ ಕೈ ವಶವಾದಳು ಎಂದರು.

ಕೆ.ಎಚ್.ಪಿ. ಸಹಾಯಕ ಕಾರ್ಯನಿರ್ವಾಹಕ ಶ್ರೀನಿವಾಸಗೌಡ, ಪುಣ್ಯವತಿ ಜಯಣ್ಣ , ರೂಪಾ ಅನಂತರಾಜು, ರೈತಸಂಘದ ರಾಜಣ್ಣ, ಮಹೇಂದ್ರ, ಎಚ್ ಪಿ, ನಟರಾಜ್, ಶಿವಶಂಕರ ಆರಾಧ್ಯ, ಬಾಲಾಜಿ, ಚಂದ್ರಶೇಖರ್, ಅಬ್ದುಲ್, ರವಿಕುಮಾರ್, ಮಲ್ಲಿಕಾರ್ಜುನ್, ತಾಲೂಕು ಆಡಳಿ ಕಚೇರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.