ಕನ್ನಡಪ್ರಭ ವಾರ್ತೆ ದಾವಣಗೆರೆ

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಯೋಜನೆ, ಭರವಸೆಗಳಲ್ಲ. ಇವು ರಾಜ್ಯದ ಕೋಟ್ಯಾಂತರ ಜನರ, ಬಡವರ ಪಾಲಿನ ಆರ್ಥಿಕ ಶಕ್ತಿಯಾಗಿ ಮಾರ್ಪಟ್ಟ ಪಂಚಾಮೃತ ಗಳಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಬಣ್ಣಿಸಿದರು.

ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕರ ವ್ಯವ

ಹಾರಗಳ, ಇಂಧನ, ಸಾರಿಗೆ ಇಲಾಖೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಮ್ಮಿಕೊಂಡಿದ್ದ ಫಲಾನುಭವಿಗಳ ಸಮಾವೇಶ, ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಬಡವರ ಬದುಕಿಗೆ ಪಂಚ ಗ್ಯಾರಂಟಿಗಳು ಪಂಚಾಮೃತವಾಗಿ ಆಸರೆಯಾಗಿವೆ ಎಂದರು.

ನಮ್ಮ ಜಿಲ್ಲೆಯಲ್ಲಿ 12.42 ಲಕ್ಷ ಜನರಿಗೆ 5 ಕೆಜಿ ಅಕ್ಕಿ ಬದಲು ಹಣ ನೀಡಲು ಒಟ್ಟು 347.54 ಕೋಟಿ ರು.ಗಳನ್ನು ಅನ್ನಭಾಗ್ಯಕ್ಕೆ ವ್ಯಯಿಸಲಾಗಿದೆ. ಗೃಹಲಕ್ಷ್ಮಿಯಡಿ 3,74,581


ಮಹಿಳೆಯರ ಖಾತೆಗೆ 1835 ಕೋಟಿ ರು. ಜಮಾ ಮಾಡಲಾಗಿದೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ಜಿಲ್ಲೆಯಲ್ಲಿ 12.82 ಕೋಟಿ ಸಲ ಉಚಿತ ಪ್ರಯಾಣ ಮಾಡಿದ್ದು, ಇದಕ್ಕಾಗಿ 377 ಕೋಟಿ ರು. ಭರಿಸಲಾಗಿದೆ. ಜಿಲ್ಲೆಯ 519963 ಲಕ್ಷ ಮನೆಗೆ ಉಚಿತ ವಿದ್ಯುತ್ ಸಿಕ್ಕಿದ್ದು, ಸರ್ಕಾರ 200 ಯುನಿಟ್ ಮಿತಿಯೊಳಗಿನ ಗ್ರಾಹಕರಿಗೆ 603 ಕೋಟಿ ರು.ಗಳನ್ನು ಗೃಹಜ್ಯೋತಿಯಡಿ ಭರಿಸಿದೆ. ನಿರುದ್ಯೋಗಿ ಯುವಶಕ್ತಿಗೆ ಆಸರೆಯಾಗಿ 10630 ಫಲಾನುಭವಿಗಳಿಗೆ 33.23 ಕೋಟಿ ರು.ಗಳನ್ನು ಯುವನಿಧಿಯಡಿ ನೀಡಲಾಗಿದೆ ಎಂದರು.

ಸಮಾರಂಭಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಡಾ.ಎಂ.ಸಿ.ಮೋದಿ ವೃತ್ತದವರೆಗೆ ಮೆರವಣಿಗೆಗೆ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಚಾಲನೆ ನೀಡಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್‌, ರಾಜ್ಯ ಬ್ರಾ

ಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ ಜಗದೀಶ, ಬಯಲು ಸೀಮೆ ಅಭಿ‍ವೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಟಿ.ಬಸವರಾಜ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಓ ಗಿತ್ತೆ ಮಾಧವ ವಿಠ್ಠಲರಾವ್‌, ಸಮಿತಿ ಸದಸ್ಯರಾದ ಎಸ್.ಎಸ್.ಗಿರೀಶ, ಡೋಲಿ ಚಂದ್ರು, ಕೈದಾಳ್ ಶಿವಶಂಕರ ಇತರರು ಇದ್ದರು.

ಗ್ಯಾರಂಟಿಯಲ್ಲಿ ದಾವಣಗೆರೆಯೇ ರಾಜ್ಯಕ್ಕೆ ನಂಬರ್ 1

ಗ್ಯಾರಂಟಿ ಅನುಷ್ಟಾನದಲ್ಲಿ ಶೇ.98 ಪ್ರಗತಿ ಸಾಧಿಸುವ ಮೂಲಕ ದಾವಣಗೆರೆ ಜಿಲ್ಲೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಗ್ಯಾರಂಟಿಗಳು ಬದುಕಿರುವ ಎಲ್ಲರಿಗೂ ಶಕ್ತಿ ನೀಡುತ್ತಿವೆ. ಇವು

ಸರ್ವೋದಯ ತತ್ವವಾಗಿವೆ. ಗದಗ ಜಿಲ್ಲೆ ತಿಮ್ಮಾಪುರ ಗ್ರಾಮದ ಮಹಿಳೆಯರು ಗ್ಯಾರಂಟಿ ಹಣದಿಂದ 17 ಲಕ್ಷ ವೆಚ್ಚದಲ್ಲಿ ದೇವಸ್ಥಾನ ಕಟ್ಟಿಸಿದ್ದು ಯೋಜನೆ ಯಶಸ್ಸಿಗೆ ಸಾಕ್ಷಿ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್‌.ಎಂ.ರೇವಣ್ಣ ಹೇಳಿದರು.

ರಾಜ್ಯದಲ್ಲಿ 2023ರಿಂದ ಜಾರಿಗೊಂಡ ಗ್ಯಾರಂಟಿ ಯೋಜನೆಗಳು ಮಹಿಳೆಯರು, ಯುವ ಜನರ ಸ್ವಾವಲಂಬನೆ, ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತಿವೆ. ನಮ್ಮ ರಾಜ್ಯ ಸರ್ಕಾರದ ಗ್ಯಾರಂ

ಟಿ ಯೋಜನೆಗಳನ್ನು ಟೀಕಿಸುವಂತಹ ಟೀಕಾಕಾರರಿಗೆ ಇವೇ ಗ್ಯಾರಂಟಿ ಯೋಜನೆಗಳ ಯಶಸ್ಸೇ ಪ್ರತ್ಯುತ್ತರವಾಗಿದೆ.

ಡಾ.ಪ್ರಭಾ ಮಲ್ಲಿಕಾರ್ಜುನ್‌ ಸಂಸದೆ.