ಅಗಸನಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿ ಅಡಕೆ ಬೆಳೆವಿಮೆ ವ್ಯತ್ಯಯ ಶೀಘ್ರವೇ ಸರಿಪಡಿಸಿ

| Published : Nov 17 2025, 01:02 AM IST

ಅಗಸನಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿ ಅಡಕೆ ಬೆಳೆವಿಮೆ ವ್ಯತ್ಯಯ ಶೀಘ್ರವೇ ಸರಿಪಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ತಾಲೂಕಿನ ಹಳೇ ಬಾತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗಸನಕಟ್ಟೆ ಎಂಬ ಬೆಚಾರಕ್ ಗ್ರಾಮವಿದ್ದು, ಈ ಗ್ರಾಮದ ಹೊಲಗಳಲ್ಲಿ ಬೆಳೆದಿರುವ ಅಡಕೆ ಬೆಳೆಗೆ ಬೆಳೆ ವಿಮೆ ಬಂದಿಲ್ಲ. ಇದರ ನಕ್ಷೆ ಬದಲಾವಣೆಯಾಗಿ, ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸನಕಟ್ಟೆ ಗ್ರಾಮಕ್ಕೆ ಬದಲಾಗಿದೆ. ಇದರಿಂದ ಬೆಳೆವಿಮೆ ಮಂಜೂರಾತಿಯಲ್ಲಿ ವ್ಯತ್ಯಯವಾಗಿದೆ. ರೈತರಿಗೆ ತೀವ್ರ ಅನ್ಯಾಯವಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ ಅವರಿಗೆ ರೈತರು ದೂರು ಸಲ್ಲಿಸಿದ್ದಾರೆ.

- ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರರಿಗೆ ರೈತರ ದೂರು

- - -

ದಾವಣಗೆರೆ: ತಾಲೂಕಿನ ಹಳೇ ಬಾತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗಸನಕಟ್ಟೆ ಎಂಬ ಬೆಚಾರಕ್ ಗ್ರಾಮವಿದ್ದು, ಈ ಗ್ರಾಮದ ಹೊಲಗಳಲ್ಲಿ ಬೆಳೆದಿರುವ ಅಡಕೆ ಬೆಳೆಗೆ ಬೆಳೆ ವಿಮೆ ಬಂದಿಲ್ಲ. ಇದರ ನಕ್ಷೆ ಬದಲಾವಣೆಯಾಗಿ, ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸನಕಟ್ಟೆ ಗ್ರಾಮಕ್ಕೆ ಬದಲಾಗಿದೆ. ಇದರಿಂದ ಬೆಳೆವಿಮೆ ಮಂಜೂರಾತಿಯಲ್ಲಿ ವ್ಯತ್ಯಯವಾಗಿದೆ. ರೈತರಿಗೆ ತೀವ್ರ ಅನ್ಯಾಯವಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ ಅವರಿಗೆ ರೈತರು ದೂರು ಸಲ್ಲಿಸಿದರು.

ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ ದೂರು ಸ್ವೀಕರಿಸಿ, ಹಳೇ ಬಾತಿ ಗ್ರಾಮ ಪಂಚಾಯಿತಿ ಅಗಸನಕಟ್ಟೆ ಗ್ರಾಮಕ್ಕೂ ಐಗೂರು ಗ್ರಾಮ ಪಂಚಾಯಿತಿ ಅಗಸನಕಟ್ಟೆ ಗ್ರಾಮಕ್ಕೂ ಮ್ಯಾಪಿಂಗ್ ಮಾಡುವಾಗ ತಳುಕಾಗಿದೆ. ಇದು ತಂತ್ರಾಂಶದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಾಗಿದೆ. ಈ ಸಮಸ್ಯೆ ಇಲಾಖೆ ಗಮನಕ್ಕೆ ಬಂದಿರಲಿಲ್ಲ. ಮುಖಂಡರೊಂದಿಗೆ ರೈತರು ಇಲಾಖೆ ಗಮನಕ್ಕೆ ತಂದಿದ್ದಾರೆ. ತಕ್ಷಣ ಕಂದಾಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಸಮಸ್ಯೆ ಬಗೆಹರಿಸಲಾಗುವುದು. ಅರ್ಹ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತರ ಒಕ್ಕೂಟ ಅಧ್ಯಕ್ಷ ಕೊಳೇನಹಳ್ಳಿ ಬಿ.ಎಂ. ಸತೀಶ್, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳ್, ದಾಮ್ಕೋಸ್ ಅಧ್ಯಕ್ಷ ಬಾತಿ ಬಿ.ಕೆ. ಶಿವಕುಮಾರ್, ಬಾತಿ ಶಂಕರಮೂರ್ತಿ, ಎಚ್.ಎಸ್. ಶ್ರೀನಿವಾಸ, ಎಸ್.ಎಂ. ತಿಪ್ಪೇಶ್, ಎಚ್.ಎಸ್. ಹನುಮಂತಪ್ಪ, ಹರಿಹರ ಅರುಣಕುಮಾರ ಮುಂತಾದವರು ಉಪಸ್ಥಿತರಿದ್ದರು.

- - -

-14ಕೆಡಿವಿಜಿ31.ಜೆಪಿಜಿ: