ಇಂದಿನಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ವಿಮಾನ ಸೇವೆ

| Published : Nov 21 2023, 12:45 AM IST

ಇಂದಿನಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ವಿಮಾನ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

2023ರ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಬಳಿಕ ಆಗಸ್ಟ್ ತಿಂಗಳಲ್ಲಿ ವಿಮಾನ ಹಾರಾಟ ಆರಂಭಗೊಂಡಿತ್ತು. ಮೊದಲಿಗೆ ಇಂಡಿಗೋ ವಿಮಾನ ಸಂಸ್ಥೆ ಶಿವಮೊಗ್ಗ- ಬೆಂಗಳೂರು ನಡುವೆ ನಿತ್ಯ ಹಾರಾಟ ಆರಂಭಿಸಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ನ.21ರಿಂದ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ವಾರದಲ್ಲಿ ನಾಲ್ಕು ದಿನ ವಿಮಾನ ಹಾರಾಟ ಆರಂಭಗೊಳ್ಳುತ್ತಿದ್ದು, ಸ್ಟಾರ್ ಏರ್ ಸಂಸ್ಥೆಯುವರು ವಿಮಾನ ಹಾರಾಟಕ್ಕೆ ಮುಂದಾಗಿದ್ದಾರೆ.

ಶಿವಮೊಗ್ಗ- ಗೋವಾ ಹಾಗೂ ಗೋವಾ-ಶಿವಮೊಗ್ಗ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯವಿದೆ.ಶಿವಮೊಗ್ಗ-ಹೈದ್ರಾಬಾದ್ ಹಾಗೂ ಹೈದರಾಬಾದ್- ಶಿವಮೊಗ್ಗ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯ ಇರುತ್ತದೆ. ಶಿವಮೊಗ್ಗ-ತಿರುಪತಿ ಹಾಗೂ ತಿರುಪತಿ-ಶಿವಮೊಗ್ಗ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯ ಇರುತ್ತದೆ. ಈ ಸೌಲಭ್ಯವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆದುಕೊಂಡಲ್ಲಿ ಇನ್ನಷ್ಟು ವಿಮಾನಯಾನ ಸಂಸ್ಥೆಗಳು ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೇಶದ ವಿವಿಧ ಭಾಗಗಳಿಗೆ ವಿಮಾನ ಹಾರಾಟದ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಹಕಾರಿ ಆಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

2023ರ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಬಳಿಕ ಆಗಸ್ಟ್ ತಿಂಗಳಲ್ಲಿ ವಿಮಾನ ಹಾರಾಟ ಆರಂಭಗೊಂಡಿತ್ತು. ಮೊದಲಿಗೆ ಇಂಡಿಗೋ ವಿಮಾನ ಸಂಸ್ಥೆ ಶಿವಮೊಗ್ಗ- ಬೆಂಗಳೂರು ನಡುವೆ ನಿತ್ಯ ಹಾರಾಟ ಆರಂಭಿಸಿತ್ತು. ಸಾರ್ವಜನಿಕ ವಲಯದಿಂದ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿತ್ತು.

ಇದಕ್ಕೆ ಮೊದಲು ಎಂದರೆ ವಿಮಾನ ನಿಲ್ದಾಣ ನಿರ್ಮಾಣ ಒಂದು ಹಂತಕ್ಕೆ ಬರುತ್ತಿದ್ದಂತೆ ಕಳೆದ 2022ರ ಫೆ.9ರಂದು ಮತ್ತು ಬಳಿಕ 2023ರ ಜ.3ರಂದು ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಮತ್ತು ಪತ್ರ ಬರೆದ ಸಂಸದ ರಾಘವೇಂದ್ರ ಅವರು ಶಿವಮೊಗ್ಗದಿಂದ ಮುಂಬೈ, ಬೆಂಗಳೂರು, ಮಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಬೆಳಗಾವಿ, ಕೊಚ್ಚಿನ್, ಗೋವಾಕ್ಕೆ ಒಟ್ಟು 11 ಮಾರ್ಗಗಳನ್ನು ಉಡಾನ್ ಯೋಜನೆಯಡಿ ಮಂಜೂರಾತಿ ನೀಡಲು ಮನವಿ ಮಾಡಿಕೊಂಡಿದ್ದರು. ಇದರ ಪರಿಣಾಮ ಕೇಂದ್ರ ವಿಮಾನಯಾನ ಸಚಿವರು ವಿವಿಧ ವಿಮಾನಯಾನ ಸಂಸ್ಥೆಗಳೊಂದಿಗೆ ಸಭೆ ನಡೆಸಿ, ವಿಮಾನ ಹಾರಾಟಕ್ಕೆ ವ್ಯವಸ್ಥೆ ಮಾಡಿದ್ದರು.

- - - ಬಾಕ್ಸ್‌

ಸ್ಟಾರ್ ಏರ್‌ ವಿಮಾನಗಳ ಟೈಮಿಂಗ್ಸ್‌ ವಿವರ

- - -ಶಿವಮೊಗ್ಗ-ಗೋವಾ:- ಶಿವಮೊಗದಿಂದ ಮಧ್ಯಾಹ್ನ 1.55ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 2.40ಕ್ಕೆ ಗೋವಾ ತಲುಪಲಿದೆ

- ಗೋವಾದಿಂದ ಮಧ್ಯಾಹ್ನ 3.10ಕ್ಕೆ ಹೊರಡುವ ವಿಮಾನ ಸಂಜೆ 4.05ಕ್ಕೆ ಶಿವಮೊಗ್ಗ ತಲುಪಲಿದೆ.

- ಪ್ರತಿ ಬುಧವಾರ ಶಿವಮೊಗ್ಗದಿಂದ ಗೋವಾಕ್ಕೆ ಬೆಳಗ್ಗೆ 11 ಗಂಟೆಗೆ ಹೊರಡುವ ವಿಮಾನ ಬೆಳಗ್ಗೆ 11.50ಕ್ಕೆ ಗೋವಾ ತಲುಪಲಿದೆ- ಪ್ರತಿ ಬುಧವಾರ ಗೋವಾದಿಂದ ಶಿವಮೊಗ್ಗಕ್ಕೆ ಮಧ್ಯಾಹ್ನ 12.20ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 1.10ಕ್ಕೆ ಶಿವಮೊಗ್ಗ ತಲುಪಲಿದೆ- - -

ಶಿವಮೊಗ್ಗ-ಹೈದರಾಬಾದ್‌:- ಹೈದರಾಬಾದ್‌ನಿಂದ ಬೆಳಗ್ಗೆ 9.35ಕ್ಕೆ ಹೊರಡುವ ವಿಮಾನ ಬೆಳಗ್ಗೆ 10.35ಕ್ಕೆ ಶಿವಮೊಗ್ಗ ತಲುಪಲಿದೆ.- ಶಿವಮೊಗ್ಗದಿಂದ ಸಂಜೆ 4.30ಕ್ಕೆ ಹೊರಡುವ ವಿಮಾನ ಸಂಜೆ 5.30ಕ್ಕೆ ಹೈದರಾಬಾದ್‌ ತಲುಪಲಿದೆ- - -

ಶಿವಮೊಗ್ಗ- ತಿರುಪತಿ:- ಶಿವಮೊಗ್ಗದಿಂದ ಬೆಳಗ್ಗೆ 11 ಗಂಟೆಗೆ ಹೊರಡುವ ವಿಮಾನ 11.50ಕ್ಕೆ ತಿರುಪತಿಗೆ ತಲುಪಲಿದೆ

- ತಿರುಪತಿಯಿಂದ ಮಧ್ಯಾಹ್ನ 12.15ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 1.40ಕ್ಕೆ ಶಿವಮೊಗ್ಗ ತಲುಪಲಿದೆ

- ಪ್ರತಿ ಬುಧವಾರ ಶಿವಮೊಗ್ಗದಿಂದ ತಿರುಪತಿಗೆ ಮಧ್ಯಾಹ್ನ 1.40ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 2.30ಕ್ಕೆ ತಿರುಪತಿ ತಲುಪಲಿದೆ

- ಪ್ರತಿ ಬುಧವಾರ ತಿರುಪತಿಯಿಂದ ಶಿವಮೊಗ್ಗಕ್ಕೆ ಮಧ್ಯಾಹ್ನ 3 ಗಂಟೆಗೆ ಹೊರಡುವ ವಿಮಾನ ಮಧ್ಯಾಹ್ನ 3.50ಕ್ಕೆ ಶಿವಮೊಗ್ಗ ತಲುಪಲಿದೆ

- - -

- ಬಿ.ವೈ.ರಾಘವೇಂದ್ರ, ಸಂಸದ, ಶಿವಮೊಗ್ಗ ಲೋಕಸಭಾ ಕ್ಷೇತ್ರ