ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲುನಾಲ್ಕು ನಾಡು ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಅಧಿಕ ಮಳೆಯಾಗಿದ್ದು ಸೋಮವಾರ ಬಿಡುವು ನೀಡಿದ ಮಳೆಯಿಂದಾಗಿ ಹೊಳೆತೋಡುಗಳಲ್ಲಿ ಪ್ರವಾಹ ತಗ್ಗಿದೆ.ನಾಪೋಕ್ಲು - ಮೂರ್ನಾಡು ಸಂಪರ್ಕ ರಸ್ತೆಯ ಬೋಳಿಬಾಣೆಯಲ್ಲಿ ಪ್ರವಾಹದ ನೀರಿನಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು ಸೋಮವಾರ ಪ್ರವಾಹ ತಗ್ಗಿದ್ದು ವಾಹನ ಸಂಚಾರ ಪುನರಾರಂಭಗೊಂಡಿದೆ. ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ನಿವಾಸಿ ಬೊಟ್ಟೋಳಂಡ ಪ್ರೇಮ ಪೊನ್ನಪ್ಪ ಅವರ ವಾಸದ ಮನೆಯ ಮೇಲೆ ಮರ ಒಂದು ಬಿದ್ದು ಮನೆಯ ಛಾವಣಿಗೆ ಅಳವಡಿಸಿದ್ದ ಮರ ಮುಟ್ಟುಗಳು ಹಾಗೂ ಹೆಂಚುಗಳು ಹಾನಿಯಾಗಿ ನಷ್ಟ ಸಂಭವಿಸಿದ್ದು ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ.ಇಲ್ಲಿಯ ಹಳೆ ತಾಲೂಕು ನಿವಾಸಿ ಕುಲ್ಲೇಟಿರ ಚಂಗಪ್ಪ ಮತ್ತು ಪೊನ್ನುಪ್ಪ ಎಂಬುವರ ಲೈನ್ ಮನೆ ಮಳೆ ಗಾಳಿಯಿಂದಾಗಿ ಗೋಡೆ ಕುಸಿದು ನಷ್ಟ ಸಂಭವಿಸಿದೆ. ಇಲ್ಲಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆ ಗಾಳಿಯಿಂದಾಗಿ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು ಚೆಸ್ಕಂ ಇಲಾಖಾ ವತಿಯಿಂದ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದರೂ ಸಿಬ್ಬಂದಿಗಳ ಕೊರತೆಯಿಂದ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲದೆ ಸಮಸ್ಯೆ ಮುಂದುವರೆದಿದೆ.