ಫ್ಲೈಓವರ್; ಲ್ಯಾಮಿಂಗ್ಟನ್‌ ರಸ್ತೆಯಲ್ಲಿ ತೀವ್ರ ವಿರೋಧ

| Published : Aug 09 2024, 12:47 AM IST

ಫ್ಲೈಓವರ್; ಲ್ಯಾಮಿಂಗ್ಟನ್‌ ರಸ್ತೆಯಲ್ಲಿ ತೀವ್ರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯ ನಾಲ್ಕು ಕಡೆಗಳಿಂದ ಫ್ಲೈಓವರ್‌ ರಸ್ತೆ ನಿರ್ಮಿಸಲಾಗುತ್ತಿದೆ. ಎಲ್ಲೆಡೆ ದೊಡ್ಡ ದೊಡ್ಡ ಪಿಲ್ಲರ್‌ ಹಾಕಿ ಕೆಲಸ ಮಾಡಲಾಗುತ್ತಿದೆ. ಕೆಲಸವೂ ಭರದಿಂದ ಸಾಗಿದೆ. ಇದೀಗ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಗದಗ ಕಡೆಗೆ ಹೋಗುವ ರಸ್ತೆಯಲ್ಲಿ (ಸಿದ್ದಪ್ಪ ಕಂಬಳಿ ರಸ್ತೆ) ಪ್ರಾರಂಭಿಸುವುದು ಬಾಕಿಯುಳಿದಿದೆ.

ಹುಬ್ಬಳ್ಳಿ:ನಗರದಲ್ಲಿ ವಾಹನ ದಟ್ಟಣೆ ತಡೆಗಟ್ಟುವ ಉದ್ದೇಶದಿಂದ ನಿರ್ಮಿಸುತ್ತಿರುವ ಫ್ಲೈಓವರ್‌ ಕೆಲಸ ಭರದಿಂದ ಸಾಗಿದೆ. ಆದರೆ ಇದೀಗ ಲ್ಯಾಮಿಂಗ್ಟನ್‌ ರಸ್ತೆಯಲ್ಲಿ (ಚೆನ್ನಮ್ಮ ಸರ್ಕಲ್‌ನಿಂದ ಗದಗ ಕಡೆಗೆ ) ನಿರ್ಮಿಸಲು ಉದ್ದೇಶಿಸಿರುವ ಫ್ಲೈಓವರ್‌ಗೆ ಭೂಸ್ವಾಧೀನ ಪ್ರಕ್ರಿಯೆಯೂ ಶುರುವಾಗಿದೆ. ಇನ್ನೊಂದೆಡೆ ವಿರೋಧವೂ ವ್ಯಕ್ತವಾಗುತ್ತಿದೆ. ಈ ನಡುವೆ ಫ್ಲೈಓವರ್ ಭೂಸ್ವಾಧೀನಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆಂದು ಹೇಳಲಾಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಇನ್ನೊಂದು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ ಈ ಭಾಗದ ಕಟ್ಟಡಗಳ ಮಾಲೀಕರು ಸೇರಿದಂತೆ ಪ್ರಮುಖರ ಸಭೆಯೂ ಆ. 10ರಂದು ನಡೆಯಲಿದೆ.ಆಗಿರುವುದೇನು?:

ನಗರದ ನಾಲ್ಕು ಕಡೆಗಳಿಂದ ಫ್ಲೈಓವರ್‌ ರಸ್ತೆ ನಿರ್ಮಿಸಲಾಗುತ್ತಿದೆ. ಎಲ್ಲೆಡೆ ದೊಡ್ಡ ದೊಡ್ಡ ಪಿಲ್ಲರ್‌ ಹಾಕಿ ಕೆಲಸ ಮಾಡಲಾಗುತ್ತಿದೆ. ಕೆಲಸವೂ ಭರದಿಂದ ಸಾಗಿದೆ. ಇದೀಗ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಗದಗ ಕಡೆಗೆ ಹೋಗುವ ರಸ್ತೆಯಲ್ಲಿ (ಸಿದ್ದಪ್ಪ ಕಂಬಳಿ ರಸ್ತೆ) ಪ್ರಾರಂಭಿಸುವುದು ಬಾಕಿಯುಳಿದಿದೆ.ಆದರೆ ಇಲ್ಲಿ ಈದ್ಗಾ ಮೈದಾನದ ಕಾಂಪೌಂಡ್‌ ಗೋಡೆಯ ಸ್ವಲ್ಪ ಭಾಗವನ್ನು ಫ್ಳೈಓವರ್‌ಗಾಗಿ ತೆರವುಗೊಳಿಸಬೇಕಾಗುತ್ತದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಮಹಾನಗರ ಪಾಲಿಕೆಗೆ ಪತ್ರವನ್ನೂ ಬರೆದಿರುವುದುಂಟು. ಈ ವಿಷಯ ಇದೀಗ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.

ಇನ್ನು ಈ ಫ್ಲೈಓವರ್‌ ಬರುವುದರಿಂದ ಈ ಭಾಗದ ಯಳಮಲಿ ಆಸ್ಪತ್ರೆ, ಸ್ವಾತಿ ಹೋಟೆಲ್‌, ಶಿವಕೃಷ್ಣ ಮಂದಿರ, ಕೃಷ್ಣ ಭವನ ಸೇರಿದಂತೆ ಹಲವು ಬಿಲ್ಡಿಂಗ್‌ಗಳ ಅಲ್ಪಸ್ವಲ್ಪ ಭಾಗ ಸ್ವಾಧೀನ ಪಡಿಸಿಕೊಳ್ಳುವುದು ಅನಿವಾರ್ಯ. ಈ ಸಂಬಂಧ ಭೂಸ್ವಾಧೀನಕ್ಕೆ ಈಗಾಗಲೇ ನೋಟೀಸ್ ಕೂಡ ನೀಡಲಾಗಿದೆಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ಇನ್ನೊಂದು ತಿಂಗಳು ಅಥವಾ ಎರಡು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಲಿದೆ. ತದನಂತರ ಕೆಲಸ ಪ್ರಾರಂಭವಾಗಲಿದೆ ಎಂದು ಅಧಿಕಾರಿ ವರ್ಗ ತಿಳಿಸುತ್ತದೆ.

ಇದರ ನಡುವೆಯೇ ಭೂಸ್ವಾಧೀನ ಪ್ರಕ್ರಿಯೆಗೆ ತಡೆಯಾಜ್ಞೆ ತರಲಾಗಿದೆ ಎಂದು ಮೂಲಗಳು ತಿಳಿಸುತ್ತವೆ. ಇದರ ನಡುವೆಯೇ ಆ. ೧೦ರಂದು ಈ ಭಾಗದ ಕಟ್ಟಡಗಳ ಮಾಲೀಕರು ಸಭೆ ನಡೆಸಲಿದ್ದಾರೆ. ಅಂದು 12.30ಕ್ಕೆ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಕಟ್ಟಡಗಳ ಮಾಲೀಕರು ನಿರ್ಧರಿಸಿದ್ದಾರೆ. ಅಂದಿನ ಸಭೆಯಲ್ಲಿ ಏನಾಗುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಿದೆ.ಒಟ್ಟಿನಲ್ಲಿ ಲ್ಯಾಮಿಂಗಟನ್‌ ರಸ್ತೆ (ಸಿದ್ದಪ್ಪ ಕಂಬಳಿ) ಫ್ಲೈಓವರ್‌ ನಿರ್ಮಾಣಕ್ಕೆ ತೀವ್ರ ಆಕ್ಷೇಪ ವಾಗುತ್ತಿರುವುದಂತೂ ಸತ್ಯ. ಈ ವಿಷಯವೇ ಇದೀಗ ನಗರದಲ್ಲಿ ಭಾರೀ ಚರ್ಚೆಗೆ ಗ್ರಾಸ್‌ವನ್ನುಂಟು ಮಾಡಿದೆ.ಈದ್ಗಾ ಮೈದಾನದ ಕಾಂಪೌಂಡ್‌ ಹೋಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಫ್ಲೈಓವರ್‌ ನಿರ್ಮಾಣದ ಮೂಲ ಯೋಜನೆಯಲ್ಲಿ ಆ ರೀತಿ ಇರಲಿಲ್ಲ. ಉದ್ದೇಶ ಪೂರ್ವಕವಾಗಿ ಇದನ್ನು ಮಾಡಲಾಗುತ್ತಿದೆ. ಈ ಬಗ್ಗೆ ಅಂಜುಮನ್‌ ಸಂಸ್ಥೆಯೂ ಚರ್ಚಿಸಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ಅಂಜುಮನ್‌ ಸಂಸ್ಥೆಯ ಮುಖಂಡ ಅಲ್ತಾಫ ಹಳ್ಳೂರ ಹೇಳಿದ್ದಾರೆ.ಲ್ಯಾಮಿಂಗ್ಟನ್‌ ರಸ್ತೆಯಲ್ಲಿ ಫ್ಲೈಓವರ್‌ ಬರುವುದರಿಂದ ಶಿವಕೃಷ್ಣ ಮಂದಿರ ಸೇರಿದಂತೆ ಹಲವು ಕಟ್ಟಡಗಳಿಗೆ ಧಕ್ಕೆಯುಂಟಾಗಲಿದೆ. ಈ ಬಗ್ಗೆ ಚರ್ಚಿಸಲು ಆ. 10ರಂದು ಸಭೆ ಕರೆಯಲಾಗಿದೆ. ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿವಕೃಷ್ಣ ಮಂದಿರ ಅಧ್ಯಕ್ಷ ನಂದನ ಬಳವಳ್ಳಿ ತಿಳಿಸಿದ್ದಾರೆ.

ತಡೆಯಾಜ್ಞೆಗೆ ಬಗ್ಗೆ ಮಾಹಿತಿ ಇಲ್ಲ. ಆದರೆ ಭೂಸ್ವಾಧೀನ ಪ್ರಕ್ರಿಯೆ ಇದೀಗ ಅಂತಿಮ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಅದು ಪೂರ್ಣಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಭಿಯಂತರ ಗಂಗಾಧರ ಚಳಗೇರಿ ಹೇಳಿದರು.