ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆ ಆಲಿಸಿ ಅಧಿವೇಶನದಲ್ಲಿ ಗಮನ

| Published : Nov 15 2024, 12:32 AM IST

ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆ ಆಲಿಸಿ ಅಧಿವೇಶನದಲ್ಲಿ ಗಮನ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಾಯತಿ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪರಿಹಾರ ಒದಗಿಸಲು ನಿಮ್ಮ ಧ್ವನಿಯಾಗಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಂಚಾಯತಿ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪರಿಹಾರ ಒದಗಿಸಲು ನಿಮ್ಮ ಧ್ವನಿಯಾಗಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಭರವಸೆ ನೀಡಿದರು.

ನಗರದಲ್ಲಿ ನಡೆದ ವಿಜಯಪುರ ತಾಲೂಕಿನಲ್ಲಿ ಬರುವ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಆಡಳಿತಾತ್ಮಕ ಅಹವಾಲು ಸ್ವೀಕಾರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಗೌರವಧನ ಕಡಿಮೆಯಿದ್ದು, ಈ ಸಮಸ್ಯೆಯ ಕುರಿತು ಹೋರಾಟ ನಡೆಸಿದ ಪರಿಣಾಮ ಗೌರವಧನವನ್ನು ಸ್ವಲ್ಪ ಹೆಚ್ಚಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಪಿಂಚಣಿ, ಉಚಿತ ಬಸ್‌ಪಾಸ್ ಮತ್ತು ಟೋಲ್‌ಗಳಲ್ಲಿ ಶುಲ್ಕದಿಂದ ವಿನಾಯತಿ ನೀಡಲು ಕೂಡ ಸರ್ಕಾರದ ಗಮನ ಸೆಳೆಯುತ್ತೇನೆ. ಜಲಜೀವನ ಮಿಷನ್ ಯೋಜನೆಯಲ್ಲಿ ಗ್ರಾಪಂ ಪಾಲಿನ ವಂತಿಗೆಯನ್ನು ಸರ್ಕಾರವೇ ಭರ್ತಿ ಮಾಡಬೇಕು ಎಂದು ಹೋರಾಟ ನಡೆಸಿದ್ದು ಫಲ ನೀಡಿದ್ದು, ಸರ್ಕಾರ ಸ್ಪಂದಿಸಿದೆ. ಈ ವಂತಿಗೆ ಹಣವನ್ನು ಗ್ರಾಪಂ ಗಳು ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ ಎಂದು ತಿಳಿಸಿದರು.ಗ್ರಾಪಂ ಗಳಿಗೆ ನಾನಾ ವಸತಿ ಯೋಜನೆಗಳಡಿ ಮನೆ ಮಂಜೂರು ಮಾಡಿಸಲು ಹೋರಾಟ ಮಾಡಿದ ಪರಿಣಾಮ ಈಗ ಮನೆಗಳು ಲಭ್ಯವಾಗಿವೆ. ಈಗ ನಾನಾ ಗ್ರಾಪಂಗಳಲ್ಲಿ ನಾನಾ ಕಾರಣಗಳಿಂದ ಬ್ಲಾಕ್ ಆಗಿರುವ ಮನೆಗಳ ಮಾಹಿತಿ ನೀಡಿದರೇ ಸ್ಥಳೀಯ ಮತ್ತು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಪರಿಹರಿಸುತ್ತೇನೆ. ವಿಧಾನ ಪರಿಷತ ಶಾಸಕರಿಗೆ ಸಿಗುವ ಅನುದಾನ ಕಡಿಮೆಯಿದ್ದು, ಈ ಅನುದಾನವನ್ನು ವಿಜಯಪುರ ಮತ್ತು ಬಾಗಲಕೋಟೆ ಎರಡೂ ಜಿಲ್ಲೆಗಳ ಎಲ್ಲ ೧೫ ವಿಧಾನಸಭೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದರು.ವರ್ಷದಲ್ಲಿ ಒಂದು ಬಾರಿ ವಿಧಾನಸಭೆ ಕ್ಷೇತ್ರವಾರ ಆಡಳಿತಾತ್ಮಕ ಅಹವಾಲು ಸ್ವೀಕಾರ ಸಭೆ ನಡೆಸಿ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ಹಲವು ಸಮಸ್ಯೆಗಳಿಗೆ ಆಯಾ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ಪರಿಹಾರ ಒದಗಿಸುತ್ತಿದ್ದೇನೆ. ಈ ಸಭೆಯ ಜೊತೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನೂ ನಡೆಸಿ ಅವರ ಅಹವಾಲನ್ನೂ ಕೂಡ ಆಲಿಸುತ್ತಿದ್ದೇನೆ. ಪಿಡಿಒಗಳ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸ ನಡೆದಿದೆ. ಒಟ್ಟಾರೆ ನಿಮ್ಮೆಲ್ಲರ ಧ್ವನಿಯಾಗಿ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.ವಿಜಯಪುರ ತಾಪಂ ಇಒ ಬಾಬು ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನೂರ ಗ್ರಾಪಂ ಸದಸ್ಯ ಎಂ.ಎಚ್.ಪಠಾಣ, ಐನಾಪುರ ಗ್ರಾಪಂ ಸದಸ್ಯೆ ಜಯಶ್ರೀ ಜಾಧವ ತಮ್ಮ ಅಭಿಪ್ರಾಯ ಹಂಚಿಕೊಂಡರು. ತಾಪಂ ಸಹಾಯಕ ನಿರ್ದೇಶಕ ಬಾಬು ಉಮದಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಜಾಬಗೊಂಡ ನಿರೂಪಿಸಿದರು. ಪಿಡಿಒ ಎಸ್.ಆರ್.ಕಟ್ಟಿ ವಂದಿಸಿದರು.ವಿಜಯಪುರ- ಬಾಗಲಕೋಟೆ- ಬೆಂಗಳೂರು ಹೊಸದಾಗಿ ವಂದೇ ಭಾರತ ರೈಲು ಮತ್ತು ಮುಂಬಯಿ- ಸೋಲಾಪುರ ವಂದೇ ಭಾರತ ರೈಲು ಸೇವೆ ಪ್ರಾರಂಭಿಸುವುದು ಕಾರ್ಯಸಾಧುವಲ್ಲ ಎಂದು ಕೇಂದ್ರ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಈಗಲಾದರೂ ವಿಜಯಪುರ ಮತ್ತು ಬಾಗಲಕೋಟೆ ಸಂಸದರು ವಂದೇ ಭಾರತ ರೈಲು ಸೇವೆ ಪ್ರಾರಂಭಿಸಿದರೆ ಅವರಿಗೆ ಸಾರ್ವಜನಿಕರ ಪರವಾಗಿ ನಾಗರಿಕ ಸನ್ಮಾನ ಮಾಡುತ್ತೇನೆ.

-ಸುನೀಲಗೌಡ ಪಾಟೀಲ, ವಿಧಾನ ಪರಿಷತ್‌ ಸದಸ್ಯರು.