ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಗೋ ಶಾಲೆಗಳಿಗೆ ಸಮರ್ಪಕ ಮೇವು ಒದಗಿಸಲು ಅಧಿಕಾರಿಗಳು ವಿಫಲರಾಗಿರುವುದನ್ನು ಖಂಡಿಸಿ ಕಿಸಾನ್ ಸಂಘದ ವತಿಯಿಂದ ಹನೂರಿನ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ತಾಲೂಕಿನಲ್ಲಿ ಕಾಟಾಚಾರಕ್ಕೆ ಬೆರಳೆಣಿಕೆಯಷ್ಟು ಮಾತ್ರ ಗೋಶಾಲೆಗಳನ್ನು ತೆರೆಯಲಾಗಿದ್ದು, ಬರಗಾಲದ ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕೂಡ ಗೋಶಾಲೆ ತೆರೆದು ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಪೂರೈಕೆಗೆ ಮುನ್ನೆಚರಿಕೆ ಕ್ರಮವಹಿಸುವಂತೆ ಕಳೆದ ಮೂರು ತಿಂಗಳ ಹಿಂದೆ ಹಲವಾರು ಬಾರಿ ಒತ್ತಾಯ ಮಾಡಿದ್ದರೂ ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದ ತಾಲೂಕಿನ ವಿವಿಧಡೆ ಜಾನುವಾರುಗಳಿಗೆ ಮೇವಿಲ್ಲದೆ ಮರಣ ಹೊಂದುತ್ತಿವೆ. ಈ ಬಗ್ಗೆ ತಹಸೀಲ್ದಾರ್, ಸ್ಥಳೀಯ ಪಶುಸಂಗೋಪನೆ ಅಧಿಕಾರಿಗಳು ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ತೆರೆದಿರುವಂತಹ ಡಿಎಂ ಸಮುದ್ರ ಕೊರಟ್ಟಿ ಹೊಸೂರು ಗೋಶಾಲೆಗಳಿಗೆ ಕಳೆದ ಎರಡರಿಂದ ಮೂರು ದಿನಗಳಿಂದಲೂ ಸಹ ಜಿಲ್ಲಾಡಳಿತ ಮೇವು ಒದಗಿಸಿಲ್ಲ. ಇದರಿಂದ ಎಷ್ಟೋ ಜಾನುವಾರುಗಳು ಮೇವಿಲ್ಲದೆ ಕಂಗಾಲಾಗಿವೆ ಪಶು ಸಂಗೋಪನಾ ಸಚಿವರು, ಉಸ್ತುವಾರಿ ಸಚಿವರು ಚಾಮರಾಜನಗರ ಜಿಲ್ಲೆಯಲ್ಲಿ ಇಂತಹ ಪರಿಸ್ಥಿತಿ ಆದರೆ ರಾಜ್ಯದ ವಿವಿಧ ಜಿಲ್ಲೆಗಳನ್ನು ಯಾವ ರೀತಿ ನಿಭಾಯಿಸುವುದು ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
ಇದೆ ವೇಳೆಯಲ್ಲಿ ತಾಲೂಕು ಅಧ್ಯಕ್ಷ ಹರೀಶ್ ಪ್ರಧಾನ ಕಾರ್ಯದರ್ಶಿ ಬೊಸ್ಕೋ ಮಣಿಗರ್ ಶಿವಲಿಂಗ ಪ್ರಸಾದ್ ಶಿವರಾಜ್ ಮಹೇಶ್ ರಾಜು ನಾಗರಾಜ್ ಸದಾಶಿವ ಇದ್ದರು.;Resize=(128,128))
;Resize=(128,128))