ಜಾನಪದ ಕಲೆಗಳು ಜನರ ಮನಸ್ಸನ್ನು ಗೆಲ್ಲುತ್ತ ಇಂದಿಗೂ ಪ್ರಸ್ತುತವಾಗಿವೆ. ಮೂಲತಃ ಮನರಂಜನೆಯ ಕಲೆಯಾಗಿ ಹುಟ್ಟಿಕೊಂಡ ಜಾನಪದ ಕಲೆಗಳ‍ು ಇಂದು ಜನಮಾನಸದಲ್ಲಿ ಜೀವಂತವಾಗಿವೆ ಎಂದು ಸ್ಥಳೀಯ ಭಾರತೀಯ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಾಗೂ ಖ್ಯಾತ ವೈದ್ಯ ಡಾ. ಎಚ್.ಪಿ. ರಾಜ್‌ಕುಮಾರ್ ಹೇಳಿದ್ದಾರೆ.

- ಡಾ ರಾಜಕುಮಾರ್ ಅಭಿಮತ । ಕೀಲುಕುದುರೆ ಕಲಾವಿದ ಬಸವರಾಜುಗೆ ಅಭಿನಂದನೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜಾನಪದ ಕಲೆಗಳು ಜನರ ಮನಸ್ಸನ್ನು ಗೆಲ್ಲುತ್ತ ಇಂದಿಗೂ ಪ್ರಸ್ತುತವಾಗಿವೆ. ಮೂಲತಃ ಮನರಂಜನೆಯ ಕಲೆಯಾಗಿ ಹುಟ್ಟಿಕೊಂಡ ಜಾನಪದ ಕಲೆಗಳ‍ು ಇಂದು ಜನಮಾನಸದಲ್ಲಿ ಜೀವಂತವಾಗಿವೆ ಎಂದು ಸ್ಥಳೀಯ ಭಾರತೀಯ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಾಗೂ ಖ್ಯಾತ ವೈದ್ಯ ಡಾ. ಎಚ್.ಪಿ. ರಾಜ್‌ಕುಮಾರ್ ಹೇಳಿದರು.

ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಶನಿವಾರ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ತಾಲೂಕಿನ ನರಸಗೊಂಡನಹಳ್ಳಿಯ ಕೀಲುಕುದುರೆ ಕಲಾವಿದ ಬಸವರಾಜು ಅವರಿಗೆ ಏರ್ಪಡಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು. ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿರುವ ಈ ವಂಶಪಾರಂಪರೆಯ ಕೀಲುಕುದುರೆ ಕಲೆ ಹೊನ್ನಾಳಿ ತಾಲೂಕಿನಲ್ಲಿ ಬಸವರಾಜು ಕುಟುಂಬದವರ ಮೂಲಕ ರಾಜ್ಯಾದಂತ್ಯ ಹೆಚ್ಚು ಪ್ರಸಿದ್ಧಿ ಪಡೆದಿದೆ ಎಂದು ಬಸವರಾಜು ಅವರ ಸಾಧನೆಯನ್ನು ಶ್ಲಾಘಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ನರಸಗೊಂಡನಹಳ್ಳಿ ಬಸವರಾಜು ಮಾತನಾಡಿ, ತಮ್ಮ ವೃತ್ತಿ ಜೀವನದೊಂದಿಗೆ ಈ ಕಲೆ ಕೂಡ ರೂಢಿಸಿಕೊಂಡು ಬಂದಿದ್ದೇನೆ. ಈ ಕೀಲುಕುದುರೆ ಕಲೆ ತಮಗೆ ಅಪಾರ ಸಂತೋಷ ನೀಡುತ್ತಿದೆ. ರಾಜ್ಯದ ವಿವಿಧೆಡೆಗಳಲ್ಲಿ ಜಾತ್ರೆಗಳು, ಸಮಾರಂಭಗಳು, ಮಠಗಳಲ್ಲಿ ನಡೆಯುವ ಉತ್ಸವಗಳಲ್ಲಿ ತಪ್ಪದೆ ತಮ್ಮನ್ನು ಆಹ್ವಾನಿಸುತ್ತಾರೆ. ವಂಶಪಾರಂಪರೆಯಾಗಿ ಬೆಳೆದು ಬಂದಿರುವ ಈ ಜಾನಪದ ಕಲೆಯನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ. ಇದಕ್ಕೆ ಸಮಾಜದ, ಜನಮಾನಸದ ಹಾಗೂ ಕಲಾಪ್ರೇಮಿಗಳ ಪ್ರೋತ್ಸಾಹ ತೀರಾ ಅಗತ್ಯವಾಗಿದೆ ಎಂದು ಹೇಳಿದರು.

ಅಭಿನಂದನಾ ಕಾರ್ಯಕ್ರಮ ಆರಂಭದಲ್ಲಿ ಕಲಾವಿದ ಬಸವರಾಜ್ ಹಾಗೂ ಅವರ ಸಹ ಕಲಾವಿದ ಯೋಗೇಶ್, ಅವರು ತಮ್ಮ ವಿಶಿಷ್ಟ ಜಾನಪದ ಕೀಲು ಕುದುರೆ ನೃತ್ಯ ಪ್ರದರ್ಶನದ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರ ಗಮನ ಸೆಳೆದರು.

ಸಮಾರಂಭದಲ್ಲಿ ಕೀಲುಕುದುರೆ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಾರತೀಯ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಕೆ.ಗಣೇಶ್, ಖಜಾಂಚಿ ಸೋಮಶೇಖರಪ್ಪ ಕೆ., ನಿರ್ದೇಶಕರಾದ ಕುಂಕೂದ ಹಾಲೇಶ, ಡಾ. ಶಕುಂತಲಾ ರಾಜ್‌ಕುಮಾರ್, ಜಿ.ದೇವೀರಮ್ಮ, ಶಿಕ್ಷಕರಾದ ತಿಮ್ಮೇಶ್, ಪುನೀತ್, ಗಿರೀಶ್, ಪ್ರಿಯಾ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

- - -

-31ಎಚ್.ಎಲ್.ಐ1:

ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಶನಿವಾರ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ನರಸಗೊಂಡನಹಳ್ಳಿ ಬಸವರಾಜು ಅವರಿಗೆ ಅಭಿನಂದನೆ, ಸನ್ಮಾನ ಸಮಾರಂಭದಲ್ಲಿ ಸಂಸ್ಥೆ ಕಾರ್ಯದರ್ಶಿ ಡಾ. ಎಚ್.ಪಿ. ರಾಜ್‌ಕುಮಾರ್ ಮಾತನಾಡಿದರು. ಸಹ ಕಲಾವಿದ ಯೋಗೀಶ್, ಶಾಲೆ ಅಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.