ಗ್ರಾಮೀಣ ಪದೇಶಗಳಲ್ಲಿ ಜಾನಪದ ಭಜನೆ ಜೀವಂತ: ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ

| Published : Jan 26 2025, 01:34 AM IST

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಕಲೆ ಭಜನೆಯನ್ನು ಇಂದಿಗೂ ಕೂಡ ಪೋಷಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಸಾಲಬಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಮಲ್ಲಿಕಾರ್ಜುನ ತಿಳಿಸಿದರು.

ನ್ಯಾಮತಿ ಕಸಪಾದಲ್ಲಿ ತಿಂಗಳ ಮಾಸಿಕ ಸಭೆ । ಕನ್ನಡ ಭಜನಾ ಗೀತೆಗಳ ಗಾಯನ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಕಲೆ ಭಜನೆಯನ್ನು ಇಂದಿಗೂ ಕೂಡ ಪೋಷಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಸಾಲಬಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಮಲ್ಲಿಕಾರ್ಜುನ ತಿಳಿಸಿದರು.

ನ್ಯಾಮತಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ನಡೆದ ತಿಂಗಳ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದಿನವರು ಭಜನೆ ಮಾಡುವುದರಿಂದ ಆಗುವ ಲಾಭವನ್ನು ಕಂಡುಕೊಂಡಿದ್ದರು. ಈಗಿನ ಮೊಬೈಲ್ ಯುಗದಲ್ಲಿ ಭಜನೆ ಎಂಬುದು ಮರೆಯಾಗುತ್ತಿದೆ. ನಗರ ಪ್ರದೇಶದ ಮಕ್ಕಳಿಗೆ ಸಾಮೂಹಿಕ ಭಜನೆ ಅರಿವು ಇಲ್ಲ. ಭಜನೆಯಿಂದ ಆರೋಗ್ಯ ವೃದ್ದಿಯ ಜತೆಗೆ ಪರಸ್ಪರ ಸಹಕಾರ ಮನೋಭಾವ ಬೆಳೆಯುತ್ತದೆ ಎಂದರು.

ಕನ್ನಡ ಮಾತೃಭಾಷೆಯನ್ನು ಉಳಿಸಬೇಕು ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು ಪ್ರತಿಯೊಬ್ಬರು ಕನ್ನಡ ಭಾಷೆಯನ್ನ ಹೆಚ್ಚು ಬಳಸಬೇಕು. ಈ ನಿಟ್ಟಿನಲ್ಲಿ ಕಸಾಪ ಕೈಗೊಂಡಿರುವ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಸಾಹಿತ್ಯ ಕೃಷಿಗೆ ಧನಾತ್ಮಕ ಚಿಂತನೆ ಕಂಡು ಬರುತ್ತಿದೆ ಎಂದರು.

ಪುಷ್ಪಗಿರಿ ಮಹಾ ಸಂಸ್ಥಾನದಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸ್ವಸಹಾಯ ಸಂಘಗಳ ರಚನೆ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಬೆಳಸಲಾಗುತ್ತಿದೆ. ಆಸಕ್ತ ಮಹಿಳೆಯರು ಸಂಘಗಳ ರಚನೆಗೆ ಆಸಕ್ತಿ ತೋರಿದರೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ನಿವೃತ್ತ ಶಿಕ್ಷಕ ಮಂಜಪ್ಪ ಮತ್ತು ಸಮನ್ವಯಾಧಿಕಾರಿ ವೀರಣ್ಣಗೌಡ ಮಾಹಿತಿ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ನೇತೃತ್ವ ವಹಿಸಿದ್ದರು. ಯರಗನಾಳ್ ಗ್ರಾಮದ ವೀರಭದ್ರೇಶ್ವರ ಪುಷ್ಪಗಿರಿ ಮಹಿಳಾ ಭಜನಾ ತಂಡದವರು ಕನ್ನಡ ಭಜನಾ ಗೀತೆಗಳನ್ನು ಹಾಡಿದರು.

ಅಂಬಿಕಾ, ಸುಮಲತಾ, ಉಮಾದೇವಿ, ರೇಖಾ, ಪುಷ್ಪಾ. ಸಂಡೂರು ಮಹೇಶ್ವರಪ್ಪ, ಬೆಳಗುತ್ತಿ ರೇವಣಸಿದ್ದಪ್ಪ, ಪಾಲಾಕ್ಷಪ್ಪ, ಕುಮಾರಿ ಮೈತ್ರಿ ಸಾಹಿತ್ಯ ಕಾರ್ಯಕ್ರಮ ನಡೆಸಿದರು.

ನಿಕಟಪೂರ್ವ ಅಧ್ಯಕ್ಷ ಗಡೆಕಟ್ಟೆ ನಿಜಲಿಂಗಪ್ಪ, ಸೈಯದ್ ಅಪ್ಸರ್ ಪಾಷಾ, ಶಿಕ್ಷಕರಾದ ತಿಪ್ಪೇಸ್ವಾಮಿ ಆಚೆಮನೆ, ಉಮೇಶ, ಜಿ.ಮಮತಾ, ಎಸ್.ಜಿ.ಬಸವರಾಜಪ್ಪ, ರಾಮೇಶ್ವರ ನಾಗರಾಜ, ಎಂ.ಎಸ್.ಜಗದೀಶ, ಕದಳಿ ಸಂಘದ ಅಧ್ಯಕ್ಷೆ ಅಂಬಿಕಾ ಬಿದರಗಡ್ಡೆ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಕೆ.ಬೋಜರಾಜ, ಎಚ್.ಶಿವಾನಂದಪ್ಪ, ಉಷಾ ಮಾತನಾಡಿದರು.