ಜನರಿಂದ ಜನರಿಗೆ ಜಾನಪದ ಸಾಹಿತ್ಯ ಹರಡಿ ಬೆಳೆದಿದೆ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Feb 05 2024, 01:46 AM IST

ಜನರಿಂದ ಜನರಿಗೆ ಜಾನಪದ ಸಾಹಿತ್ಯ ಹರಡಿ ಬೆಳೆದಿದೆ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಕವಳ್ಳಿ ಸರ್ಕಾರಿ ಬಾಲಕಿಯರ ಶಾಲಾ ಅವರಣದಲ್ಲಿ ಏರ್ಪಡಿಸಿದ್ದ ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಜಿ.ಎಚ್.ಶ್ರೀನಿವಾಸ್ ಜನರಿಂದ ಜನರಿಗೆ ಜಾನಪದ ಸಾಹಿತ್ಯ ಹರಡಿ ಬೆಳೆದಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ಜನರಿಂದ ಜನರಿಗೆ ಜಾನಪದ ಸಾಹಿತ್ಯ ಹರಡಿ ಬೆಳೆದಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಭಾನುವಾರ ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ತು, ತಾಲೂಕು ಘಟಕ ತರೀಕೆರೆ, ಹೋಬಳಿ ಘಟಕ ಲಕ್ಕವಳ್ಳಿ ಯಿಂದ ಸಮೀಪದ ಲಕ್ಕವಳ್ಳಿ ಸರ್ಕಾರಿ ಬಾಲಕಿಯರ ಶಾಲಾ ಅವರಣದಲ್ಲಿ ಏರ್ಪಡಿಸಿದ್ದ ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಮದುವೆ ಮುಂಜಿ ಇತ್ಯಾದಿ ಅನೇಕ ಕಾರ್ಯಕ್ರಮಗಳಲ್ಲಿ ಹಾಡುವ ಜಾನಪದ ಹಾಡುಗಳು ವೈಶಿಷ್ಟ್ಯಪೂರ್ಣವಾಗಿದೆ, ಇಂತಹ ಸಮ್ಮೇಳನ, ಕಾರ್ಯಕ್ರಮಗಳು ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುತ್ತದೆ. ಅಖಿಲ ಕರ್ನಾಟಕ ಪ್ರಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ತರೀಕೆರೆಯಲ್ಲಿ ನಡೆದಿದೆ. ತರೀಕೆರೆ ಕ್ಷೇತ್ರ ಜಾನಪದ ಸಾಹಿತ್ಯಕ್ಕೆ

ಹೆಚ್ಚು ಒತ್ತು ಕೊಟ್ಟಿದೆ. ಲಕ್ಕವಳ್ಳಿ ಜನತೆ ಜಾನಪದ ಸಾಹಿತ್ಯ ಉಳಿಸಿ ಬೆಳೆಸಿದ್ದಾರೆ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನಡೆದಿದೆ, ಸಮ್ಮೇಳನದಲ್ಲಿ ಹೆಚ್ಚು ಜನರು ಸೇರಿರುವುದು ಸಂತೋಷ ತಂದಿದೆ. ಹೆಚ್ಚು ಜನರು ಸೇರಿದ್ದ ಸಮ್ಮೇಳನ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು.

ಶಿಗ್ಹಾಂವಿ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿ.ಪೂ.ಕು.ಸ.ಪ್ರೊ.ಚಂದ್ರಶೇಖರ್ ಜಾನಪದ ವಸ್ತುಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ ಇಡೀ ದೇಶದ ನೆಮ್ಮದಿಗೆ ಜಾನಪದ ಅಗತ್ಯವಾಗಿದೆ, ಜಾನಪದ ಕಲೆ ಮಾತ್ರ ಅಲ್ಲ ಅದು ಜ್ಞಾನವಾಗಿದೆ, ಜಾನಪದ ಬಹಳ ಮುಖ್ಯವಾದುದು ಎಂದು ಅವರು ಹೇಳಿದರು.

ಶಂಕರಘಟ್ಟ ಕುವೆಂಪು ವಿ.ವಿ.ನಿಲಯ ಜಾನಪದ ತಜ್ಞರಾದ ಪ್ರೊ.ಬಸವರಾಜ ನೆಲ್ಲಿಸರ ಅವರು ಮಾತನಾಡಿ ತರೀಕೆರೆಯಲ್ಲಿ 1967ರಲ್ಲಿ ನೆಡೆದ ಅಖಿಲ ಕರ್ನಾಟಕ ಪ್ರಪ್ರಥಮ ಜಾನಪದ ಸಾಹಿತ್ಯ

ಸಮ್ಮೇಳನದಲ್ಲಿ ಬಿಡುಗಡೆಯಾದ ಹೊನ್ನ ಬಿತ್ತೇವು ಹೊಲಕೆಲ್ಲ ಎಂಬ ಅಕರ ಗ್ರಂಥವು ಪುನರ್ ಮುದ್ರಣವಾಗಬೇಕು, ಜಾನಪದವನ್ನು ಉಳಿಸಿ ಬೆಳೆಸಬೇಕು ಎಂದು ಅವರು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರು ಬಿ.ಜಿ.ಸುರೇಶ್ ಅವರು ಮಾತನಾಡಿ ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ಕಲಾ ಪೋಷಕರಾಗಿದ್ದಾರೆ, ಜಾನಪದ ಸಾಹಿತ್ಯ ಭಾರತೀಯ

ಸಂಸ್ಕೃತಿಯ ಬೇರಾಗಿದೆ, ಜಾನಪದ ಸಾಹಿತ್ಯ ಆಲದ ಮರದ ರೀತಿ ಬೆಳೆಯಬೇಕು, 200ಕ್ಕೂ ಹೆಚ್ಚು ಜಾನಪದ ಕಲೆಗಳು ಇದೆ, ಮೂಲ ಸಂಸ್ಕೃತಿಯನ್ನು

ಬೆಳೆಸಬೇಕು, ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಇಡೀ ಜಿಲ್ಲೆಯಲ್ಲಿ ಎಲ್ಲ ಕಡೆ ಜಾನಪದ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ, ಎಲ್ಲರ ಸಹಕಾರದಿಂದ ಲಕ್ಕವಳ್ಳಿಯಲ್ಲಿ

ತಾಲೂಕು ದ್ವಿತೀಯ ಜಾನಪದ ಸಮ್ಮೇಳನ ಹಬ್ಬದ ರೀತಿಯಲ್ಲಿ ನೆಡೆದಿದೆ ಎಂದು ಅವರು ಹೇಳಿದರು.

ಸಾಂತವೇರಿ ಸಾಂಸ್ಕೃತಿಕ ಚಿಂತಕರಾದ ವೇಲಾಯುಧನ್ ಅವರು ಆಶಯ ನುಡಿ ಮಾತನಾಡಿ ಮುಖ್ಯವಾಗಿ ಕಲೆ ಬೆಳೆಯಬೇಕು, ಎಲ್ಲರೂ ಕಲಾವಿದರಾಗಬೇಕು ಎಂದು

ಅವರು ಹೇಳಿದರು.

ಸಮ್ಮೇಳನಾಧ್ಯಕ್ಷರು ಲಕ್ಕವಳ್ಳಿ ಮಲ್ಲಿಕಾರ್ಜುನರಾವ್ ಜಾದವ್ ಅವರು ಮಾತನಾಡಿ, ಹಿರಿಯರೊಡಗೂಡಿ ದೇವರನಾಮ ಭಜನೆ, ರಂಗಗೀತೆ ಇತ್ಯಾದಿಗಳನ್ನು ಅಭ್ಯಾಸ ಮಾಡಿ ಹಾಡುತ್ತಿದ್ದೇನೆ, ಹುಟ್ಟಿದ ಊರಿನಲ್ಲಿ ಜಾನಪದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತೋಷ ತಂದಿದೆ, ಜಾನಪದ ಸಾಹಿತ್ಯವನ್ನು ಉಳಿಸಿಕೊಂಡು ಹೋಗಬೇಕು ಎಂದು ಅವರು

ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಹೆಚ್.ವಿಶ್ಪನಾಥ್ ಅವರು ಮಾತನಾಡಿ ಸಮ್ಮೇಳನವನ್ನು ಸಂಘಟಿಸುವುದು ಬಹಳ ಕಷ್ಟದ ಕಾರ್ಯವಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷರು ಆರ್.ನಾಗೇಶ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಎಲ್.ಎ.ಅನ್ಬು ಅವರು ಸಮ್ಮೇಳನದ ಅಧ್ಯಕ್ಷರನ್ನು ಕುರಿತು ಅಭಿನಂದನಾ ನುಡಿ ಮಾತನಾಡಿದರು.

ತಾ.ಪಂ.ಮಾಜಿ ಸದಸ್ಯ ಸೀತಾರಾಂ, ಮುಖಂಡರಾದ ಎಲ್.ಟಿ.ಹೇಮಣ್ಣ, ನಂದಕುಮಾರ್, ಹೆಚ್.ಎನ್.ಮಂಜುನಾಥ್ ಲಾಡ್, ಫಣಿರಾಜ್ ಜೈನ್, ತಿಪ್ಪೇಶಪ್ಪ, ರಮೇಶ್, ತಾ.ಕಸಾಪ ಅಧ್ಯಕ್ಷರು ನವೀನ್ ಪೆನ್ನಯ್ಯ, ಕನ್ನಡಶ್ರೀ ಬಿ.ಎಸ್.ಭಗವಾನ್, ಜಗದೀಶ್, ಕರ್ನಾಟಕ ಜಾನಪದ ಪರಿಷತ್ತು ಲಕ್ಕವಳ್ಳಿ ಘಟಕದ ಪದಾದಿಕಾರಿಗಳು ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕೆಸರುಕೊಪ್ಪ ನಿವತ್ತ ಶಿಕ್ಷಕರು ಹೊರಕೇರಪ್ಪ ಅವರು ರಾಷ್ಟ್ರದ್ವಜಾರೋಹಣ, ಕ.ಜಾ.ಪರಿಷತ್ತು ಲಕ್ಕವಳ್ಳಿ ಘಟಕ ಕೆ.ಪಾಂಡುರಂಗ ಅವರು ನಾಡದ್ವಜಾರೋಹಣ, ಕ.ಜಾ.ಪ.ಗೌರವಾಧ್ಯಕ್ಷರು

ಎಲ್.ಎಂ. ಸೀನೋಜಿರಾವ್ ಸೂರ್ಯವಂಶಿ ಅವರ ಜಾನಪದ ಧ್ವಜಾರೋಹಣವನ್ನು ನೆರವೇರಿಸಿದರು. ಗ್ರಾಮಜ್ಯೋತಿ ನಿವೃತ್ತ ಶಿಕ್ಷಕರಾದ ಬಾಲಕೃಷ್ಣ ಪುರಾಣಿಕ್ ಅವರು ಸಮ್ಮೇಳನಾದ್ಯಕ್ಷರ ಮೆರವಣಿಗೆ ಉದ್ಗಾಟನೆಯನ್ನು ನೆರವೇರಿಸಿದರು.

ಚಿಕ್ಕಪ್ಪ ಸ್ವಾಗತಿಸಿದರು. ಶ್ರೀ ಶಾರದ ಭಜನಾ ಮಂಡಳಿ ಸದಸ್ಯೆನಿಯರು ಪ್ರಾರ್ಥಿಸಿದರು. ರಮೇಶ್ ನಿರೂಪಿಸಿದರು.

------------

ಫೋಟೋ ಇದೆ

4ಕೆಟಿಆರ್.ಕೆ.2ಃ ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ತು, ತಾಲೂಕು ಘಟಕ ತರೀಕೆರೆ, ಹೋಬಳಿ ಘಟಕ ಲಕ್ಕವಳ್ಳಿ ವತಿಯಿಂದ ಸಮೀಪದ ಲಕ್ಕವಳ್ಳಿಯಲ್ಲಿ ಏರ್ಪಾಡಾಗಿದ್ದ ತರೀಕೆರೆ ತಾಲೂಕು ದ್ವಿತೀಯ ಜಾನಪದ ಸಮ್ಮೇಳನ ಸಮಾರಂಭದ ಉದ್ಗಾಟನೆಯನ್ನು ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ನೆರವೇರಿಸಿದರು. ಸಮ್ಮೇಳನಾಧ್ಯಕ್ಷರಾದ ಮಲ್ಲಿಕಾರ್ಜುನರಾವ್

ಜಾದವ್,ಶಿಗ್ಹಾಂವಿ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿ.ಪೂ.ಕು.ಸ.ಪ್ರೊ.ಚಂದ್ರಶೇಖರ್, ಕ.ಜಾ.ಪ.ಜಿಲ್ಲಾಧ್ಯಕ್ಷರು ಸುರೇಶ್, ಕ.ಜಾ.ಪ.ತಾಲೂಕು ಅಧ್ಯಕ್ಷರು ಆರ್.ನಾಗೇಶ್,

ಜಿ.ಪಂ.ಮಾಜಿ ಅಧ್ಯಕ್ಷರು ಹೆಚ್.ವಿಶ್ವನಾಥ್ ಮತ್ತಿತರರು ಇದ್ದಾರೆ. ------------------------