ಜಾನಪದ ಕಲೆ, ಸಂಸ್ಕೃತಿ ಕಾಪಾಡಲು ಜಾನಪದ ಪರಿಷತ್‌ ಸಕ್ರಿಯ: ಲಕ್ಕಮ್ಮ ಸಿದ್ದಪ್ಪ

| Published : Jan 08 2024, 01:45 AM IST

ಜಾನಪದ ಕಲೆ, ಸಂಸ್ಕೃತಿ ಕಾಪಾಡಲು ಜಾನಪದ ಪರಿಷತ್‌ ಸಕ್ರಿಯ: ಲಕ್ಕಮ್ಮ ಸಿದ್ದಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪಾಶ್ಚಾತ್ಯ ಸಂಸ್ಕೃತಿಯ ದಾಳಿಗೆ ಸಿಲುಕಿ ನಲುಗುತ್ತಿರುವ ಜಾನಪದ ಕಲೆ ಸಂಸ್ಕೃತಿಯನ್ನು ಕಾಪಾಡಲು ಕರ್ನಾಟಕ ಜಾನಪದ ಪರಿಷತ್ತು ಕಡೂರು ತಾಲೂಕು ಮತ್ತು ಜಿಲ್ಲಾ ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ವಿಚಾರ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರು ಹಾಗು ಶಾಸಕ ಕೆ ಎಸ್ ಆನಂದ್‌ ಅವರ ತಾಯಿ ಲಕ್ಕಮ್ಮ ಸಿದ್ದಪ್ಪ ಹೇಳಿದರು.

- ತಾಲೂಕು ಮಟ್ಟದ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡೆುಗಡೆ

ಕನ್ನಡಪ್ರಭ ವಾರ್ತೆ, ಕಡೂರು

ಪಾಶ್ಚಾತ್ಯ ಸಂಸ್ಕೃತಿಯ ದಾಳಿಗೆ ಸಿಲುಕಿ ನಲುಗುತ್ತಿರುವ ಜಾನಪದ ಕಲೆ ಸಂಸ್ಕೃತಿಯನ್ನು ಕಾಪಾಡಲು ಕರ್ನಾಟಕ ಜಾನಪದ ಪರಿಷತ್ತು ಕಡೂರು ತಾಲೂಕು ಮತ್ತು ಜಿಲ್ಲಾ ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ವಿಚಾರ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರು ಹಾಗು ಶಾಸಕ ಕೆ ಎಸ್ ಆನಂದ್‌ ಅವರ ತಾಯಿ ಲಕ್ಕಮ್ಮ ಸಿದ್ದಪ್ಪ ಹೇಳಿದರು.

ಜನವರಿ 16ರಂದು ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಭಾನುವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಯಗಟಿಯಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೆ ಜಿಲ್ಲಾದ್ಯಂತ ಎಲ್ಲಾ ಕಲಾವಿದರು ಕಲಾಪೋಷಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದು, ಈ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು, ಹಿರಿಯ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸಲಾಗುವುದು, ಇಂದಿನ ಯುವ ಜನತೆ ಜಾನಪದ ಕಲೆ ಸಂಸ್ಕೃತಿ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಲ್ಲಿ ಸುಸಂಸ್ಕೃತ ವ್ಯಕ್ತಿಗಳಾಗಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯಗಟಿಯ ಶ್ರೀ ವೀರಾಂಜನೇಯ ದೇವಾಲಯದ ಮುಂಭಾಗದಲ್ಲಿ ಸಮ್ಮೇಳನಾಧ್ಯಕ್ಷ ಕುಂಕಾನಾಡಿನ ಈ ಓಂಕಾರ ಮೂರ್ತಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ ಬಿ ಸುರೇಶ್ ಮಾತನಾಡಿ ಜಾನಪದವೆಂದರೆ ಬರಿ ಹಾಡಲ್ಲ 200ಕ್ಕೂ ಹೆಚ್ಚು ಕಲೆ ಒಳಗೊಂಡ ಒಂದು ದೊಡ್ಡ ಕಲಾ ಗ್ರಂಥ ಭಂಡಾರ. ಅಲ್ಲದೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಸಾಹಿತ್ಯ ಸಂಸ್ಕೃತಿ ಇದರಲ್ಲಿದೆ. ಇದನ್ನು ಯುವ ಜನತೆ ಹೆಚ್ಚು ಪ್ರೋತ್ಸಾಹಿಸಿದ್ದಲ್ಲಿ ಸತ್ಯ, ಅಹಿಂಸೆ, ಮಾದರಿ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ.ಮುಂದಿನ ದಿನಗಳಲ್ಲಿ ಹೋಬಳಿ ಮತ್ತು ಗ್ರಾಪಂ ಮಟ್ಟದಲ್ಲಿ ಜಾನಪದ ಪರಿಷತ್ ಸಮ್ಮೇಳನ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕಜಾಪದ ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವರ ಆಚಾರ್ ಮಾತನಾಡಿ, ಸಮ್ಮೇಳನ ದಿನ ಸರ್ವಾಧ್ಯಕ್ಷರನ್ನು ಯಗಟಿಯ ಪ್ರಮುಖ ಬೀದಿಗಳಲ್ಲಿ ಜಿಲ್ಲೆಯ ವಿವಿಧ ಕಲಾತಂಡಗಳು ಮತ್ತು ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಗುವುದು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಜಾನಪದ ಕಲಾತಂಡಗಳಾದ ಚಿಟ್ಟಿಮೇಳ ಸೋಮನ ಕುಣಿತ ಗರುಡಿ ಗೊಂಬೆ ಅಸಾದಿ ಕುಣಿತ, ನಂದಿ ಧ್ವಜ ಕುಣಿತ, ಹಳ್ಳಿ ವಾದ್ಯ ಸುಗ್ಗಿ ಕುಣಿತ ಕಂಸಾಳೆ ಮುಂತಾದ ಕಲಾತಂಡಗಳು ಭಾಗವಹಿಸಲಿದ್ದು, ಜನಪದ ನಾಟಕಗಳು,ನೃತ್ಯಗಳು, ಕೋಲಾಟ ಜಾನಪದ ಗೀತೆ ಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯಲಿವೆ. ಜಿಲ್ಲೆಯಾದ್ಯಂತ ಎಲ್ಲ ಜನಪದ ಕಲಾಪೋಷಕರು, ಕಲಾವಿದರು, ಹೆಚ್ಚಿನ ಸಂಖ್ಯೆಯಲ್ಲಿ, ಆಗಮಿಸಿ, ಸಮ್ಮೇಳನವನ್ನುಯಶಸ್ವಿಯಾಗಿ ನಡೆಸಿಕೊಡಬೇಕೆಂದು ಕೋರಿದರು.

ಕರ್ನಾಟಕ ಜಾನಪದ ಪರಿಷತ್ತು ಪ್ರಧಾನ ಕಾರ್ಯದರ್ಶಿ ಕುಂಕನಾಡು ನಾಗರಾಜು, ಯಗಟಿ ಗ್ರಾಪಂ ಮಾಜಿ ಅಧ್ಯಕ್ಷ ಗೋವಿಂದಪ್ಪ, ಸಮ್ಮೇಳನದ ಅಧ್ಯಕ್ಷ ಈ ಓಂಕಾರ ಮೂರ್ತಿ, ಉಪಾಧ್ಯಕ್ಷ ತಿಪ್ಪೇಶ, ಚಿಕ್ಕನಲ್ಲೂರು ಜಯಣ್ಣ, ಹೋಬಳಿ ಅಧ್ಯಕ್ಷರಾದ ಪರಮೇಶಣ್ಣ, ನಂದೀಶ್ ಬಾಬು, ಕೀರ್ತಿ ಕುಮಾರ್, ಮಲಿಯಪ್ಪ ಮುಂತಾದವರು ಇದ್ದರು. 7ಕೆಕೆಡಿಯು2.

ಯಗಟಿ ಗ್ರಾಮದಲ್ಲಿ ನಡೆಯಲಿರುವ ಕರ್ನಾಟಕ ಜಾನಪದ ಪರಿಷತ್ತಿನ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯೆ ಲಕ್ಕಮ್ಮ ಸಿದ್ದಪ್ಪ ಬಿಡುಗಡೆ ಮಾಡಿದರು.