ಸಾರಾಂಶ
ಕಡೂರು-ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರು, ಮಕ್ಕಳಿಗೆ ನಡೆದ ‘ಜನಪದ ಗೀತ ಮಂದಾರ’ ಶಿಬಿರ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಅಕ್ಷರ ಕಲಿಯದ ಓದಲು ಬಾರದ ಗ್ರಾಮೀಣ ಅನಕ್ಷರಸ್ಥರ ಬಾಯಿಂದ ಬಾಯಿಗೆ ಹರಡಿದ ಜನಪದ ಗೀತೆಗಳು ಅಥವಾ ಕಟ್ಟಿ ಹಾಡುವ ಹಾಡುಗಳಿಂದ ಜಾನಪದ ಜಗತ್ತು ನಿರ್ಮಾಣವಾಗಿದೆ ಎಂದು ಜನಪದಶ್ರೀ ಡಾ.ಅಪ್ಪಗೆರೆ ತಿಮ್ಮರಾಜು ಹೇಳಿದರು.ಮಂಗಳವಾರ ಪಟ್ಟಣದ ಟಿ.ಎಸ್.ಎಸ್.ಸೆಂಚುರಿಯನ್ ಹಾಲ್‍ನಲ್ಲಿ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಚಿಕ್ಕಮಗಳೂರು, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಡೂರು-ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರು ಮತ್ತು ಮಕ್ಕಳಿಗಾಗಿ ಆಯೋಜಿಸಿದ್ದ ‘ಜನಪದ ಗೀತ ಮಂದಾರ’ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅಕ್ಷರ ಕಲಿಕೆ ಮಾಡದ ಜನರು ತಾವು ಮಾಡುವ ಹಬ್ಬ, ಜಾತ್ರೆಗಳು, ಸುಗ್ಗಿಹಬ್ಬಗಳಲ್ಲಿ ಜನಪದ ಗೀತೆಗಳ ಹಾಡುಗಳನ್ನು ತಲ ತಲಾಂತರದಿಂದ ಹಾಡುತ್ತಾ ಉಳಿಸಿ ಬೆಳೆಸಿಕೊಂಡು ಬಂದಿರುವುದೇ ನೈಜ ಜನಪದವಾಗಿದೆ ಎಂದರು.
ಜಗಜ್ಯೋತಿ ಬಸವೇಶ್ವರರು ಹಾಗೂ ಸರ್ವಕಾಲೀನ ಶರಣರು ತ್ರಿಪದಿ ಸೂಕ್ತ ವಚನಗಳ ಮೂಲಕ ಸಮಾಜಕ್ಕೆಸಂದೇಶ ನೀಡಿದ್ದಾರೆ. ಅಲ್ಲಿಂದ ಇಲ್ಲಿಯವರೆವಿಗೂ ಜನಪದ ಮುಂದುವರಿದುಕೊಂಡು ಬಂದಿದೆ. ಇಂತಹ ಜನಪದ ಗೀತೆಗಳಲ್ಲಿನ ಸಾರ ನಮ್ಮ ಸಂಸ್ಕೃತಿ, ಸಂಪ್ರದಾಯ, ಉಡುಗೆ ತೊಡುಗೆಗಳ ಬಗ್ಗೆ ಮುಂದಿನ ಪೀಳಿಗೆಗೂ ತಿಳಿಸಿ ಹೇಳುವಂತಹ ಹಾಡುಗಳು ಮೂಡಿ ಬಂದಿವೆ ಎಂದರೆ ತಪ್ಪಾಗಲಾರದು.ಚಿಕ್ಕಮಗಳೂರು ಜಿಲ್ಲೆ ಜನಪದಕ್ಕೆ ಅಪಾರ ಕೊಡುಗೆ ನೀಡಿದೆ.1967 ರಲ್ಲಿ ಪ್ರಥಮ ಜನಪದ ಸಮ್ಮೆಳನ ಮಾಡುವ ಮೂಲಕ ಗಮನ ಸೆಳೆದಿತ್ತು. ಇದಕ್ಕೆ ಸ್ಫೂರ್ತಿಯಾಗಿ ಕೆ.ಆರ್.ಲಿಂಗಪ್ಪ ಅವರಂತಹವರು ಜನಪದ ಸಾಹಿತ್ಯವನ್ನು ಬೆಳೆಸಿದರು. ಮೈಸೂರು ಅರಸರು ಜನಪದ ಗ್ರಂಥ ಮಾಡಲು ಹಣ ಸಹ ನೀಡಿರುವುದು ಇತಿಹಾಸ. ಆದ್ದರಿಂದ ಜಿಲ್ಲೆ ಜನಪದದ ಮೂಲ ವಾಗಿ ಗಮನ ಸೆಳೆಯುತ್ತದೆ ಎಂದು ಸ್ಮರಿಸಿದರು.2 ದಿನಗಳ ಕಾಲ ಆಯೋಜಿಸಿರುವ ಜನಪದ ಗೀತ ಮಂದಾರ ಶಿಬಿರದಲ್ಲಿ ಶಿಕ್ಷಕರು-ಶಿಕ್ಷಕಿಯರು ಭಾಗವಹಿಸಿದ್ದು ತಾವು ಕಲಿತು ಮಕ್ಕಳಿಗೆ ಕಲಿಸುವುದರಿಂದ ಜನಪದವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ ಎಂದರು.ಗಾಯಕ ಮಲ್ಲಿಗೆ ಸುಧೀರ್ ಮಾತನಾಡಿ, ಡಾ.ಅಪ್ಪಗೆರೆ ತಿಮ್ಮರಾಜು ಜನಪದ ಗೀತೆಯನ್ನು ಜನರಿಂದ ಜನರಿಗಾಗಿ ಕಲಿಸುತ್ತ ಹಾಡುತ್ತ ಉಳಿಸಿ ಬೆಳೆಸುವಲ್ಲಿ ಬಹುಮುಖ್ಯವಾಗಿ ಕಾಣಿಸಿಕೊಳ್ಳುತ್ತಾರೆ. ಇಂತಹ ಗುರುಗಳಿಂದ ಶಿಕ್ಷಕರಿಗೆ ಜನಪದ ಕಲಿಯಲು ಸಹಕಾರಿಯಾಗಿದೆ. ಇವರಿಂದ ಕಲಿಯುತ್ತಿರುವ ನೀವುಗಳೆ ಪುಣ್ಯವಂತರು. ಯಾವುದೇ ಶುಲ್ಕಗಳಿಲ್ಲದೆ ಉಚಿತ ವಾಗಿ ಈ ಶಿಬಿರ ಆಯೋಜಿಸಲಾಗಿದೆ ಎಂದರು. ಬೀರೂರು ಶೈಕ್ಷಣಿಕ ವಲಯದ ಶಿಕ್ಷಣಾಧಿಕಾರಿ ರುದ್ರಪ್ಪ ಮಾತನಾಡಿ, ಮೂಲ ಜನಪದ ಗೀತೆಗಳನ್ನು ಕಲಿಸುವ ಜೊತೆಗೆ ಉಳಿಸಿ ಬೆಳೆಸುವುದು ಮುಖ್ಯವಾಗಿದೆ. ಶಿಕ್ಷಕರು ಕಲಿಯುವ ಮೂಲಕ ಮಕ್ಕಳಿಗೆ ಉತ್ತಮ ಗೀತೆಗಳನ್ನು ಕಲಿಸುವುದರಿಂದ ಜನಪದ ಶಾಶ್ವತವಾಗಿರಿಸಲು ಸಾಧ್ಯ ಇದೆ ಎಂದರು. ಹೊಸಪರ್ವ ಪತ್ರಿಕೆ ಸಂಪಾದಕ ಟಿ.ಎಸ್. ಪ್ರಶಾಂತ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಾಗರಾಜು, ಶಿಕ್ಷಕರಾದ ಮುರಳಿ, ಪಾಂಡು, ಬೀರೂರು ಗಾಯಕಿ ಮಂಜುಳಾ ಮಹೇಶ್, ಶಿಕ್ಷಕಿ ಶೋಭಾ, ಯಮುನಾ ಹಾಗೂ ಅನೇಕ ಶಾಲೆಗಳಿಂದ ಬಂದಿದ್ದ ದೈಹಿಕ ಶಿಕ್ಷಕರು ಮಕ್ಕಳು ಮತ್ತಿತರರು ಇದ್ದರು.11ಕೆಕೆಡಿಯು2.
ಕಡೂರು ಟಿಎಸ್‍ಎಸ್ ಸೆಂಚುರಿಯನ್ ಹಾಲ್‍ನಲ್ಲಿ ಗಾಯಕ ಮಲ್ಲಿಗೆ ಸುಧೀರ್ ತಂಡ ಆಯೋಜಿಸಿದ್ದ ಜನಪದ ಗೀತ ಮಂದಾರ ಕಾರ್ಯಕ್ರಮವನ್ನು ಡಾ.ಅಪ್ಪಗೆರೆ ತಿಮ್ಮರಾಜು ಉದ್ಘಾಟಿಸಿದರು. ಬಿಇಒ ರುದ್ರಪ್ಪ, ಪ್ರಶಾಂತ್, ಮಂಜುಳಾ, ಯಮುನಾ ಇದ್ದರು.