ಸಾರಾಂಶ
ಮುದಿಗೆರೆ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಜಾನಪದ ಸಮ್ಮೇಳನ ಉದ್ಘಾಟನೆಯಲ್ಲಿ ಜೆ.ಎಚ್.ಶ್ರೀನಿವಾಸ್
ಕನ್ನಡಪ್ರಭ ವಾರ್ತೆ, ಅಜ್ಜಂಪುರಪ್ರಪಂಚದ ಎಲ್ಲ ಸಂಸ್ಕೃತಿ, ಸಾಹಿತ್ಯ ಮತ್ತು ನಾಗರಿಕತೆಗಳ ತಾಯಿ ಬೇರು ಜಾನಪದವೇ ಆಗಿದೆ ಎಂದು ತರೀಕೆರೆ ಕ್ಷೇತ್ರದ ಶಾಸಕ ಜೆ.ಎಚ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ, ಅಜ್ಜಂಪುರ ತಾಲೂಕು ಕಸಬಾ ಹೋಬಳಿ ಘಟಕದಿಂದ ಭಾನುವಾರ ಮುದಿಗೆರೆ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಉತ್ತಮ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣ ಮಾಡಲು ಜಾನಪದ ಸಂಸ್ಕೃತಿಯಿಂದ ಮಾತ್ರ ಸಾಧ್ಯ. ಕುಟುಂಬದ ಹಿರಿಯ ರಾದ ನಾವುಗಳು ಬರಲಿರುವ ಮುಂದಿನ ಪೀಳಿಗೆಗೆ ಜಾನಪದ ಕಲೆ, ಸಾಹಿತ್ಯ, ಸಂಗೀತ, ನೃತ್ಯ,ಮೊದಲಾದ ಪ್ರಾಕಾರಗಳನ್ನು ಕೊಡುಗೆ ನೀಡಲು ಸಂರಕ್ಷಿಸುವ ಅದನ್ನು ಮೂಲಕ ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗಿದೆ. ಮಕ್ಕಳಿಗೆ ತಮ್ಮ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳಲು ತಿಳುವಳಿಕೆ ನೀಡಬೇಕಾಗಿದೆ ಎಂದು ತಿಳಿಸಿದರು.ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ .ಬಿ.ಸುರೇಶ್ ಮಾತನಾಡಿ, ಜಾನಪದ ಸಂಸ್ಕೃತಿಯ ತಳಹದಿಯ ಮೇಲೆ ಭಾರತೀಯ ಸಂಸ್ಕೃತಿ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಆದರೆ ಇಂದು ಕೆಲವು ಪಾಶ್ಚಾತ್ಯ ಸಂಸ್ಕೃತಿಯ ಪ್ರಾಕಾರಗಳಿಂದ ಜಾನಪದ ಕಲೆ ಸಂಸ್ಕೃತಿಗೆ ಧಕ್ಕೆಯಾಗಿದೆ. ಅದನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಾನಪದ ಸಮ್ಮೇಳನಗಳು, ಕಾರ್ಯಗಾರಗಳು, ಶಿಬಿರಗಳು, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಮ್ಮ ಕರ್ನಾಟಕ ಜಾನಪದ ಪರಿಷತ್ತು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದರು.
ತಹಸೀಲ್ದಾರ್ ಶಿವಶಂಕರಪ್ಪ ಕಟ್ಟೋಳಿ ಮಾತನಾಡಿ, ಜಾನಪದ ಸಂಸ್ಕೃತಿಯಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಾಧ್ಯ. ಇಂದಿನ ಮಕ್ಕಳಿಗೆ ಮೌಲ್ಯದಾರಿತ ಗುಣ ಕಲಿಸಬೇಕಾದರೆ. ಜಾನಪದ ಸಂಸ್ಕೃತಿಯನ್ನು ಎಲ್ಲರೂ ಒಗ್ಗೂಡಿ ಉಳಿಸಬೇಕಾದ ಅನಿವಾರ್ಯತೆ ಇದೆ ಎಂದರು.ಪ್ರಧಾನ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಹೊಸೂರು ಪುಟ್ಟರಾಜು ಮಾತನಾಡಿ, ಜಾನಪದ ಸಂಸ್ಕೃತಿಗೆ ಸಮಾಜ ವನ್ನು ಒಗ್ಗೂಡಿಸುವ, ಐಕ್ಯತೆ ಸಾಧಿಸುವ, ಧಾರ್ಮಿಕ ಸಹಿಷ್ಣುತೆ ಪರಿಪಾಲಿಸುವ, ಅಹಿಂಸೆ ಮತ್ತು ಶಾಂತಿ ನೆಲೆಗೊಳಿಸುವ ಶಕ್ತಿ ಇದೆ ಎಂದು ತಿಳಿಸಿದರು.
ರಂಗ ಸಂಘಟಕ ಎ.ಸಿ ಚಂದ್ರಪ್ಪ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಜಾನಪದ ಸಂಸ್ಕೃತಿ, ಕಲೆ, ಇತಿಹಾಸದ ಮಹತ್ವ ವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಒತ್ತಿ ಹೇಳಬೇಕಾಗಿದೆ ಎಂದರು. ಮಾಳೇನಳ್ಳಿ ಬಸಪ್ಪ ಚಿಕ್ಕಮಗಳೂರು ಜಿಲ್ಲೆಯ ಜಾನಪದ ಕಲೆಗಳನ್ನು ಕುರಿತು ಮಾತನಾಡಿದರು.ಸಮ್ಮೇಳನದಲ್ಲಿ ಸಾಹಿತಿ ಸುನಿತಾ, ಸಾಹಿತಿ ಮುದುಗೆರೆ ಲೋಹಿತ್ ಕುಮಾರ್, ಕ ಜಾಪ ಜಿಲ್ಲಾ ಉಪಾಧ್ಯಕ್ಷ ಗೊಂಡೇದಳ್ಳಿ ತಿಪ್ಪೇಶ್, ಸಂಚಾಲಕ ಚಿಕ್ಕನಲ್ಲೂರು ಜಯಣ್ಣ, ಬಸವಪುರ ಅಣ್ಣಯ್ಯ, ಸಹ ಕಾರ್ಯದರ್ಶಿಗಳಾದ ದೇವರಾಜ್, ಹಾಲಯ್ಯಮತ್ತು ಗ್ರಾಪಂ ಸದಸ್ಯರಾದ ರೇಣುಕಾ ತಿಮ್ಮೇಶ್, ಕವಿತಾ ಕುಮಾರಪ್ಪ, ನವೀನ್. ಆರ್, ಗ್ರಾಮದ ಮುಖಂಡರಾದ, ಮಂಜಪ್ಪ, ಕುಮಾರಪ್ಪ, ಹನುಮಂತಪ್ಪ, ರುದ್ರಪ್ಪ, ಶಂಕ್ರಪ್ಪ ಇತರೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಾನಪದ ಗೋಷ್ಠಿಯ ಅಧ್ಯಕ್ಷತೆ ವೀರಗಾಸೆ ಹಿರಿಯ ಕಲಾವಿದ ಕಾರೇಹಳ್ಳಿ ಬಸಪ್ಪ ವಹಿಸಿದ್ದರು. ಸಾಹಿತಿ ಚಿಕ್ಕನಲ್ಲೂರು ರಾಜಪ್ಪ ಮಾತನಾಡಿ, ನಮ್ಮ ಜಿಲ್ಲೆಯ ಹಿರಿಯ ಜಾನಪದ ಸಾಹಿತಿಗಳಾದ ಡಾ ಗೊ.ರು.ಚ ಜಾನಪದ ಕೋಗಿಲೆ.ಕೆ.ಆರ್ ಲಿಂಗಪ್ಪನವರು ರಾಜ್ಯದ ಜಾನಪದ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಅಜ್ಜಂಪುರ ತಾಲೂಕು ರಾಜ್ಯದ ಜಾನಪದ ಕಲೆಯ ಹೆಬ್ಬಾಗಿಲಾಗಿದೆ ಎಂದು ಬಣ್ಣಿಸಿದರು.ಬೆಳಿಗ್ಗೆ ಸಮ್ಮೇಳನದ ಧ್ವಜಾರೋಹಣ ಕಾರ್ಯಕ್ರಮವನ್ನು ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಮತ್ತು ಡಾ.ಮಾಳೇನಳ್ಳಿ ಬಸಪ್ಪ ನೆರವೇರಿಸಿದರು. ಸಮ್ಮೇಳನದ ಮೆರವಣಿಗೆಗೆ ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಚಾಲನೆ ನೀಡಿದರು. ಕಡೂರು ತಾಲೂಕು ಕ.ಜಾ.ಪ. ಅಧ್ಯಕ್ಷ ಜಗದೀಶ್ವರ ಆಚಾರ್ ಜಾನಪದ ಗೀತೆಗಳು ಹಾಡಿ ರಂಜಿಸಿದರು.-- ಬಾಕ್ಸ್--
ಕಲಾ ಸೇವೆಗೆ ಇನ್ನಷ್ಟು ಸ್ಪೂರ್ತಿ ಸಿಕ್ಕಿದೆಜಾನಪದ ಸಮ್ಮೇಳನದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ ನನ್ನ ಜಾನಪದ ಕಲೆಯ 40 ವರ್ಷಗಳ ಸುಧೀರ್ಘ ಸೇವೆಗೆ ಕೊಟ್ಟ ಗೌರವ ಇದಾಗಿದೆ. ನನ್ನ ಕಲಾ ಸೇವೆಗೆ ಇನ್ನಷ್ಟು ಸ್ಪೂರ್ತಿ ಸಿಕ್ಕಿದೆ. ನಮ್ಮ ಪರಂಪರೆ, ಕಲೆಯನ್ನು ಇಂದಿನ ಪೀಳಿಗೆ ಉಳಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು
ಪೋಟೋಗಳು. 8 ಎಜೆಪಿ1,1ಎ,1ಬಿ.