ಅಕ್ಕಮಹಾದೇವಿ ತತ್ವಸಿದ್ಧಾಂತ ಪಾಲಿಸಿ: ಡಾ. ಮೀನಾಕ್ಷಿ ಬಾಳಿ

| Published : Feb 14 2024, 02:16 AM IST

ಸಾರಾಂಶ

ಅಕ್ಕ ತನ್ನದೇ ಆಸ್ಮಿತೆಯಿಂದ ಇಡೀ ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿದ್ದಳು ಅದರ ಜೊತೆಗೆ ಜೀವಪರ ಜನಪರ ಚಿಂತನೆಗಳುಳ್ಳ ವೃತ್ತಿತ್ವವನ್ನು ಹೊಂದಿರುವನ್ನು ತನಗೆ ನಿಜವಾದ ಗಂಡ ಎಂದು ಕೌಶಿಕನನ್ನು ದಿಕ್ಕರಿಸಿ ಮುನ್ನಡೆದ ದಿಟ್ಟ ಮಹಿಳೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಕ್ಕ ಮಹಾದೇವಿ ಪ್ರಭುತ್ವವನ್ನು ಸಾಮಾಜಿಕ ಅವ್ಯವಸ್ಥೆಯನ್ನು ಧಿಕ್ಕರಿಸಿದಂತಹ ಮಹಾ ಮಹಿಳೆ. ಆ ನಿಟ್ಟಿನಲ್ಲಿ ಅಕ್ಕ ಮಹಾದೇವಿ ತತ್ವ ಸಿದ್ಧಾಂತ ದಿಟ್ಟತನ. ಇಂದಿನ ಮಹಿಳೆಯರು ಮೈಗೂಡಿಸಿಕೊಳ್ಳಬೇಕೆಂದು ಅಕ್ಕ ಪ್ರಶಸ್ತಿ ಪುರಸ್ಕೃತರಾದ ಮೀನಾಕ್ಷಿ ಬಾಳಿ ಹೇಳಿದ್ದಾರೆ.

ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಸರಣಿ ಉಪನ್ಯಾಸ ಮಾಲೆಯ ಉದ್ಘಾಟನೆ ಮಾಡಿ ಮಾತನಾಡಿದರು.

ಅಕ್ಕ ತನ್ನದೇ ಆಸ್ಮಿತೆಯಿಂದ ಇಡೀ ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿದ್ದಳು ಅದರ ಜೊತೆಗೆ ಜೀವಪರ ಜನಪರ ಚಿಂತನೆಗಳುಳ್ಳ ವೃತ್ತಿತ್ವವನ್ನು ಹೊಂದಿರುವನ್ನು ತನಗೆ ನಿಜವಾದ ಗಂಡ ಎಂದು ಕೌಶಿಕನನ್ನು ದಿಕ್ಕರಿಸಿ ಮುನ್ನಡೆದ ದಿಟ್ಟ ಮಹಿಳೆ ಎಂದರು.

ಸಿದ್ಧಲಿಂಗಯ್ಯನವರ ಸಾಹಿತ್ಯ ಮತ್ತು ವ್ಯಕ್ತಿತ್ವ ಕುರಿತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಮಾತನಾಡಿದರು.

ಭಾರತೀಯ ಸಮಾಜ ಛಿದ್ರಗೊಳ್ಳುತ್ತಿರುವ ಈ ಸಂದಿಗ್ದ ಪರಸ್ಥಿತಿಯಲ್ಲಿ ನಾವಿದ್ದೇವೆ. ವೈದಿಕ ವ್ಯವಸ್ಥೆ ದುಡಿಯುವ ವರ್ಗವನ್ನು ನಿರಂತರವಾಗಿ ಶೋಷಣೆಗೈಯ್ಯುತ್ತಿದೆ. ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಸವರಾಜ ಜಾನೆ, ಪ್ರೊ. ಎಚ್.ಟಿ. ಪೋತೆ ಮಾತನಾಡಿ, ವಿದ್ಯಾರ್ಥಿಗಳ ಕುರಿತು ಸಾಧನೆ ಮಾಡಬೇಕಾದರೆ ಸತತ ಅಧ್ಯಯನ ಮಾಡಬೇಕು ತಪ್ಪಸ್ಸು ಮಾಡಬೇಕು ಅಂದಾಗ ಏನಾದರೂ ಸಾಧಿಸಲಿಕೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು ಹಾಗೆಯೇ ಸಿದ್ದಲಿಂಗಯ್ಯನವರ ಹೋರಾಟದ ಬದಕಿನ ಕುರಿತು ಮಾತನಾಡಿದರು.