ಮಹರ್ಷಿ ವಾಲ್ಮೀಕಿಯವರ ಮಾರ್ಗದರ್ಶನ ಅನುಸರಿಸಿ

| Published : Oct 18 2024, 12:06 AM IST

ಸಾರಾಂಶ

ಸಂಸ್ಕೃತದಲ್ಲಿ ರಾಮಾಯಣ ರಚಿಸಿರುವ ಮಹರ್ಷಿ ವಾಲ್ಮೀಕಿ ಅವರ ಮಾರ್ಗದರ್ಶನ ಅನುಸರಿಸಿ ನಡೆಯಬೇಕು ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಅವರು ತಿಳಿಸಿದರು. ಹಾಸನಾಂಬ ಕಲಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ರಾಮಾಯಣ ಕುರಿತು ತಿಳಿಸುವುರ ಮೂಲಕ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ತಿಳಿಹೇಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸಂಸ್ಕೃತದಲ್ಲಿ ರಾಮಾಯಣ ರಚಿಸಿರುವ ಮಹರ್ಷಿ ವಾಲ್ಮೀಕಿ ಅವರ ಮಾರ್ಗದರ್ಶನ ಅನುಸರಿಸಿ ನಡೆಯಬೇಕು ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಹಾಸನಾಂಬ ಕಲಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ರಾಮಾಯಣ ಕುರಿತು ತಿಳಿಸುವುರ ಮೂಲಕ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ತಿಳಿಹೇಳಬೇಕು ಎಂದರು.

ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ಮಾತನಾಡಿ, ಭರತ ಖಂಡದಲ್ಲಿ ೪ ಯುಗಗಳನ್ನು ಕಾಣುತ್ತೇವೆ, ಸತ್ಯಯುಗ, ತೇತ್ರ ಯುಗ, ದ್ವಾಪರಯುಗ, ಕಲಿಯುಗ. ಈ ನಾಡಿನಲ್ಲಿ ವಾಲ್ಮೀಕಿ ರಾಮಾಯಣವನ್ನು ಹತ್ತಿರದಿಂದ ನೋಡಿದಂತಹವರು. ಸೀತೆಯ ವನವಾಸದಲ್ಲಿ ವಾಲ್ಮೀಕಿ ಅವರ ಆಶ್ರಯದಲ್ಲಿ ಲವಕುಶರ ಜನನ ಆಗುತ್ತದೆ ಎಂದು ವಿವರಿಸಿದರು. ಆಗಿನ ಕಾಲದಲ್ಲಿ ನಡೆದಂತಹ ಸನ್ನಿವೇಶಗಳನ್ನು ಬಹಳ ಅಚ್ಚುಕಟ್ಟಾಗಿ ೨೪೦೦೦ ಶ್ಲೋಕಗಳ ಮೂಲಕ ಜನಸಾಮಾನ್ಯರಿಗೆ ಕೊಟ್ಟಂತಹ ರಾಮಾಯಣ ಎಂದಿಗೂ ಪ್ರಸ್ತುತ. ಪ್ರಜೆಗಳು ರಾಮ ರಾಜ್ಯದಲ್ಲಿ ಸುಭೀಕ್ಷವಾಗಿ ಇರಬೇಕು ಎಂದು ಬೃಹತ್ ಕಾವ್ಯವನ್ನು ರಚಿಸಿದ್ದಾರೆ. ಭರತ ಖಂಡದಲ್ಲಿ ರಾಮಾಯಣ ಮಹಾಭಾರತ ಬೃಹತ್ ಕಾವ್ಯಗಳನ್ನು ಕಾಣಬಹುದು ಎಂದ ಅವರು ರಾಮನ ಆದರ್ಶ, ಸೀತೆಯ ಬದ್ಧತೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಗರಸಭೆಯ ಅಧ್ಯಕ್ಷರಾದ ಚಂದ್ರೇಗೌಡ ಎಂ ಅವರು ಮಾತನಾಡಿ, ಡಕಾಯಿಯುತನಾಗಿದ್ದ ರತ್ನಾಕರ, ನಾರದ ಮುನಿಯ ಮಾತಿನಿಂದ ಪರಿವರ್ತನೆಗೊಂಡು ರಾಮಾಯಣವನ್ನು ರಚಿಸಿದವರು. ರಾಮ ಎನ್ನುವ ಎರಡು ಅಕ್ಷರದಿಂದ ಸಂಪೂರ್ಣವಾದ ರಾಮಾಯಣ ರಚಿಸಿದ್ದಾರೆ. ೨೪೦೦೦ ಪದ್ಯಗಳ ಒಳಗೊಂಡ ರಾಮಾಯಣ ದರ್ಶನಂ ಅನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ.

ಸತ್ಯ, ನೀತಿ, ಪ್ರೇಮ ಹಿರಿಯರಿಗೆ ಗೌರವ ಸಂಕೇತವಾಗಿ ರಾಮಾಯಣವನ್ನು ವೈಭವೀಕರಿಸಿ ಇಡೀ ಮನುಕುಲ ಜಗತ್ತು ಇರುವವರೆಗೂ ಶಾಶ್ವತವಾಗಿ ಉಳಿಯುವ ರೀತಿಯಲ್ಲಿ ರಾಮಾಯಣ ರಚಿಸಿರುವ ವಾಲ್ಮೀಕಿ ಅವರಿಗೆ ನಮನ ಸಲ್ಲಿಸಿದವರು.

ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಅಪ್ಪಾಜಿಗೌಡ ಟಿ.ಎಚ್ ಅವರು ಮಾತನಾಡಿ, ವಾಲ್ಮೀಕಿಯರ ಜೀವನಚರಿತ್ರೆ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್‌ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮೊಹಮ್ಮದ್ ಸುಜೀತ ಎಮ್. ಎಸ್,ಅಪರ ಜಿಲ್ಲಾಧಿಕಾರಿಗಳಾದ ಕೆ. ಟಿ ಶಾಂತಲಾ, ಸ್ವಾತಂತ್ರ್ಯ ಹೋರಾಟಗಾರರಾದ ಶಿವಣ್ಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ದೂದ್‌ಫೀರ್ ಮತ್ತಿತರರು ಉಪಸ್ಥಿತರಿದ್ದರು.