ರಸ್ತೆ ಸುರಕ್ಷತೆ ನಿಯಮಗಳನ್ನು ಪ್ರತಿಯೊಬ್ಬರು ಸಹ ಚಾಚು ತಪ್ಪದೇ ಪಾಲಿಸುವುದು ನಮ್ಮ ಕರ್ತವ್ಯ ಎಂದು ಸಿ ಎಸ್ ಪುರ ಪೊಲೀಸ್ ಠಾಣೆಯ ಪಿಎಸ್ಐ ಧರ್ಮಾಂಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ರಸ್ತೆ ಸುರಕ್ಷತೆ ನಿಯಮಗಳನ್ನು ಪ್ರತಿಯೊಬ್ಬರು ಸಹ ಚಾಚು ತಪ್ಪದೇ ಪಾಲಿಸುವುದು ನಮ್ಮ ಕರ್ತವ್ಯ ಎಂದು ಸಿ ಎಸ್ ಪುರ ಪೊಲೀಸ್ ಠಾಣೆಯ ಪಿಎಸ್ಐ ಧರ್ಮಾಂಜಿ ತಿಳಿಸಿದರು. ತಾಲೂಕಿನ ಸಿ ಎಸ್ ಪುರ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ ರಸ್ತೆಯ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತ ನಿಯಂತ್ರಣ ಮಾಡಲು ಸಾಧ್ಯವಿದೆ. ರಸ್ತೆಗಳಲ್ಲಿ ಅಳವಡಿಸಬಹುದಾದ ರಸ್ತೆ ಹಂಪ್ಸ್ ಅಳವಡಿಸಲು ಸಾಕಷ್ಟು ನಿಯಮಗಳು ಇರುವುದರಿಂದ ಏಕಾಏಕಿ ಹಾಕಲು ಸಾಧ್ಯವಿರುವುದಿಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳ ರಸ್ತೆ ಸುರಕ್ಷತೆ ಸಮಿತಿಯವರ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು. ಆದಷ್ಟು ನಾಗರಿಕರು ವಾಹನ ಚಾಲನೆ ವೇಳೆಯಲ್ಲಿ ಅಗತ್ಯ ದಾಖಲೆಗಳು. ಹೆಲ್ಮೆಟ್ ಹಾಕುವುದು ಕಾರು ಚಾಲನೆ ವೇಳೆಯಲ್ಲಿ ಕಡ್ಡಾಯವಾಗಿ ಸಿಟ್ ಬೆಲ್ಟ್ ಹಾಕುವುದು ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ದೇಗುಲ ನಿಷೇಧ ಅಸ್ಪೃಶ್ಯತೆ ಆಚರಣೆ ಬಹಿಷ್ಕಾರದಂತ ಆಚರಣೆ ಕಂಡು ಬಂದರೆ ಶಿಸ್ತು ಕ್ರಮ ವಹಿಸಲಾಗುವುದು. ಮುಜರಾಯಿ ದೇವಾಲಯದಲ್ಲಿ ಪರಿಶಿಷ್ಟ ಸಮುದಾಯದವರನ್ನು ಸಮಿತಿ ಯಲ್ಲಿ ಅವಕಾಶ ಕಲ್ಪಿಸದೇ ತಾರತಮ್ಯ ಮಾಡುತ್ತಿರುವ ಬಗ್ಗೆ ಮುಖಂಡರು ಸಭೆಯ ಗಮನಕ್ಕೆ ತಂದಿದ್ದು ಇದರ ಸಂಬಂಧ ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು. ರುದ್ರ ಭೂಮಿ ಅಗತ್ಯವಿರುವ ಕಡೆ ಸಮಸ್ಯೆಯಾಗಿದ್ದರೆ ಅದನ್ನು ಗುರುತಿಸಿ ಅಳತೆ ಮಾಡಿಸಿ ಸಮುದಾಯದ ಉಪಯೋಗ ಬರುವಂತೆ ಮಾಡಲು ಇಲಾಖೆ ಬದ್ಧವಾಗಿದೆ ಎಂದರು.ಈ ವೇಳೆಯಲ್ಲಿ ದಲಿತ ಮುಖಂಡರಾದ ಮಂಚಿಹಳ್ಳಿ ಶಿವಸ್ವಾಮಿ, ರಾಮು ಆಟೋ, ಅಂಕಳಕೊಪ್ಪ ರುದ್ರೇಶ್, ಸಿ ಎಸ್ ಪುರ ಮಹದೇವ, ಭದ್ರೇಶ ರಮೇಶ್, ನಾರನಹಳ್ಳಿ ಶಿವು, ಕಲ್ಲೂರು ಚಿದಾನಂದ, ವೆಂಕಟೇಶಯ್ಯ, ವೇಣು ಇತರರು ಹಾಜರಿದ್ದರು.