ಸಾರಾಂಶ
ಕನಕಪುರ: ಗಾಂಧೀಜಿ ಸತ್ಯ, ಅಹಿಂಸೆ, ಸತ್ಯಾಗ್ರಹ, ಉಪವಾಸ ಎಂಬ ಅಸ್ತ್ರಗಳ ಮೂಲಕ ದೈತ್ಯ ಶಕ್ತಿಯಂತ್ತಿದ್ದ ಬ್ರಿಟಿಷರನ್ನು ಮಣಿಸಿ ಭಾರತವನ್ನು ಸ್ವಾತಂತ್ರಗೊಳಿಸಿದ್ದಾರೆ ಎಂದು ಉಪನ್ಯಾಸಕ ಜಿ.ಕೆ. ಸತ್ಯನಾರಾಯಣ ತಿಳಿಸಿದರು.
ಕನಕಪುರ: ಗಾಂಧೀಜಿ ಸತ್ಯ, ಅಹಿಂಸೆ, ಸತ್ಯಾಗ್ರಹ, ಉಪವಾಸ ಎಂಬ ಅಸ್ತ್ರಗಳ ಮೂಲಕ ದೈತ್ಯ ಶಕ್ತಿಯಂತ್ತಿದ್ದ ಬ್ರಿಟಿಷರನ್ನು ಮಣಿಸಿ ಭಾರತವನ್ನು ಸ್ವಾತಂತ್ರಗೊಳಿಸಿದ್ದಾರೆ ಎಂದು ಉಪನ್ಯಾಸಕ ಜಿ.ಕೆ. ಸತ್ಯನಾರಾಯಣ ತಿಳಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ನಡೆದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂಗ್ಲೆಂಡ್‌ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ವಕೀಲ ವೃತ್ತಿಗಾಗಿ ದಕ್ಷಿಣ ಆಫ್ರಿಕಕ್ಕೆ ತೆರಳಿ ಅಲ್ಲಿ ಜನಾಂಗೀಯ ವರ್ಣಭೇದದ ನೀತಿ ವಿರುದ್ಧ ಹೋರಾಡಿ ಯಶಸ್ವಿಯಾದ ಗಾಂಧೀಜಿ ಭಾರತಕ್ಕೆ ಮರಳಿದ ನಂತರ ಗೋಖಲೆ ಅವರ ಮಾರ್ಗದರ್ಶನದಲ್ಲಿ ಅದೇ ಅಸ್ತ್ರಗಳನ್ನು ಬಳಸಿಕೊಂಡು ಕಿರು ತೊರೆಯಂತಿದ್ದ ಭಾರತದ ರಾಷ್ಟ್ರೀಯ ಹೋರಾಟವನ್ನು ಪ್ರಾರಂಭಿಸಿ ಬ್ರಿಟಿಷರನ್ನು ಮಣಿಸಿದರು ಎಂದರು.
ಲಾಲ್ ಬಹುದ್ದೂರ್ ಶಾಸ್ತ್ರಿ ದೇಶದ ಎರಡನೇ ಪ್ರಧಾನಿಯಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿದ್ದರು. ದೈತ್ಯ ವಾಮನನಂತೆ ಆಡಳಿತ ನಡೆಸಿದ ಗಾಂಧಿ ತತ್ವದ, ಸರಳ ಸಜ್ಜನಿಕೆಯ ಆದರ್ಶಕ್ಕೆ ಉದಾಹರಣೆಯಾಗಿದ್ದಾರೆ ಎಂದರು.ಪ್ರಾಂಶುಪಾಲ ಶಿವಕುಮಾರ್, ಉಪನ್ಯಾಸಕರಾದ ರಾಮಚಂದ್ರ, ಮಮತಾ, ಪದ್ಮನಾಭ್ ಶ್ರೀನಿವಾಸ್, ತಂಗರಾಣಿ, ನಂದಿನಿ, ಆಶ್ವಿನಿ, ಲಕ್ಷ್ಮೀ, ನಾರಾಯಣಸ್ವಾಮಿ,ವಿನಯ್, ಶಿಲ್ಪಾ ಉಪಸ್ಥಿತರಿದ್ದರು.