ಕನ್ನಡಪ್ರಭ ವಾರ್ತೆ ಗೋಕಾಕ ಸುರಕ್ಷತೆಗಿರುವ ಕಾನೂನುಗಳನ್ನು ಪಾಲನೆ ಮಾಡಿ ಅಪಘಾತಗಳನ್ನು ತಪ್ಪಿಸುವಂತೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ನ್ಯಾ.ಉಮೇಶ ಅತ್ನೂರೆ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಸುರಕ್ಷತೆಗಿರುವ ಕಾನೂನುಗಳನ್ನು ಪಾಲನೆ ಮಾಡಿ ಅಪಘಾತಗಳನ್ನು ತಪ್ಪಿಸುವಂತೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ನ್ಯಾ.ಉಮೇಶ ಅತ್ನೂರೆ ಹೇಳಿದರು.

ನಗರದ ಸಮುದಾಯ ಭವನದಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಪ್ರಾದೇಶಿಕ ಸಾರಿಗೆ ಇಲಾಖೆ, ತಾಲೂಕಾಡಳಿತ ಮತ್ತು ಪೊಲೀಸ್‌ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು. ನಿರ್ದಿಷ್ಟವಾದ ವಾಹನ ಚಾಲನಾ ಪ್ರಮಾಣಪತ್ರ ಹಾಗೂ ವಿಮೆಯನ್ನು ಹೊಂದಿ ಸಾರಿಗೆ ನಿಯಮಗಳನ್ನು ಪಾಲಿಸಿ ತಮ್ಮ ಜೀವವನ್ನು ರಕ್ಷಿಸುವದರೊಂದಿಗೆ ಇತರರ ಜೀವಗಳನ್ನು ರಕ್ಷಿಸಿ. ಅಪಘಾತದ ಸಂದರ್ಭದಲ್ಲಿ ಅಪಘಾತಕ್ಕೊಳಗಾದವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಪಾಲಕರು ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ಕೊಡಬೇಡಿ. ಎಡಗಡೆಯಿಂದ ಓವರ್ ಟೇಕ್ ಮಾಡಬೇಡಿ. ವಾಹನ ಚಾಲನಾ ಪತ್ರ ಇಲ್ಲದವರಿಗೆ ವಾಹನಗಳನ್ನು ಕೊಡಬೇಡಿ. ದ್ವಿಚಕ್ರ ವಾಹನ ಹೆಲ್ಮೆಟ್‌ ಧರಿಸಿ ಸುರಕ್ಷಿತ ಚಾಲನೆ ಮಾಡುವಂತೆ ಕರೆ ನೀಡಿದರು.ತಹಸೀಲ್ದಾರ್‌ ಡಾ.ಮೋಹನ ಭಸ್ಮೆ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರ ಕುಲಕರ್ಣಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಜಿ.ಪಾಟೀಲ, ಖಜಾಂಚಿ ಎ.ಸಿ.ಖಂಡ್ರಟ್ಟಿ, ಹಿರಿಯ ಮೋಟಾರು ವಾಹನ ನಿರೀಕ್ಷಕ ಎಚ್.ಆರ್.ಮರಲಿಂಗಣ್ಣವರ, ಸಿಪಿಐ ಸುರೇಶ ಬಾಬು, ಪಿಎಸ್‌ಐ ಕೆ.ಬಿ.ವಾಲಿಕಾರ ಇತರರು ಇದ್ದರು.