ಸಾರಾಂಶ
ಜಮಖಂಡಿ: ವೇಮನರು ತಮ್ಮ ವಚನಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರು. ಇಂತಹ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡುವ ಮೂಲಕ ನಾವು ಉತ್ತಮ ಸಮಾಜವನ್ನು ಕಟ್ಟಬೇಕಾಗಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ತಾಲೂಕಾಡಳಿತದಿಂದ ನಗರದ ಆಡಳಿತಸೌಧದ ಸಭಾಭವನದಲ್ಲಿ ನಡೆದ ವೇಮನರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಯಂತಿಗಳು ಒಂದೇ ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ಸಮುದಾಯದವರು ಎಲ್ಲ ಮಹನೀಯರ ಜಯಂತಿಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ವೇಮನರು ತಮ್ಮ ವಚನಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರು. ಇಂತಹ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡುವ ಮೂಲಕ ನಾವು ಉತ್ತಮ ಸಮಾಜವನ್ನು ಕಟ್ಟಬೇಕಾಗಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ತಾಲೂಕಾಡಳಿತದಿಂದ ನಗರದ ಆಡಳಿತಸೌಧದ ಸಭಾಭವನದಲ್ಲಿ ನಡೆದ ವೇಮನರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಯಂತಿಗಳು ಒಂದೇ ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ಸಮುದಾಯದವರು ಎಲ್ಲ ಮಹನೀಯರ ಜಯಂತಿಯಲ್ಲಿ ಪಾಲ್ಗೊಳ್ಳಬೇಕು ಎಂದರು.
ತಹಸೀಲ್ದಾರ್ ಸದಾಶಿವ ಮಕ್ಕೋಜಿ ಮಾತನಾಡಿ, ವೇಮನರು ಸಾಮಾನ್ಯ ಆಡು ಭಾಷೆಯಲ್ಲಿ ತ್ರಿಪದಿ ಪದ್ಯಗಳನ್ನು ರಚಿಸಿ ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾಯೋಗಿ ಎಂದರು.ನಾಡೋಜ ಡಾ. ಎಚ್.ಜಿ. ದಡ್ಡಿ ಮಾತನಾಡಿದರು. ಡಾ. ಕೃಷ್ಣಾ ಬಣ್ಣದ, ಡಾ. ಆರ್.ಎನ್. ಸೋನವಾಲ್ಕರ, ಡಾ. ವಿಜಯಲಕ್ಷ್ಮೀ ತುಂಗಳ, ಡಾ. ಸುಧೀರ ಬೆನಕಟ್ಟಿ, ಡಾ.ಎಸ್.ಬಿ. ನಾಯ್ಕ, ಡಾ.ಮಹೇಶ ಪಾಟೀಲ, ರಾಜೇಂದ್ರ ನಾಯ್ಕ, ಉಮೇಶ ಸಿದರಡ್ಡಿ, ಕಲ್ಲಪ್ಪ ಗಿರಡ್ಡಿ, ಆರ್.ಜಿ. ಪೂಜಾರಿ, ಪಿ.ಎಸ್. ಚೌರಡ್ಡಿ, ಕುಮಾರಗೌಡ ಪಾಟೀಲ, ಶರತಚಂದ್ರ ಪಾಟೀಲ, ಮಹಾದೇವಗೌಡ ಪಾಟೀಲ, ಬಸವರಾಜ ಸಾಹುಕಾರ, ಕೃಷ್ಣಾ ಮರೇನಿ, ಸುಧಾ ಉದಪುಡಿ, ಸುಜಾತಾ ಚೌರಡ್ಡಿ, ಶಿರಸ್ತೇದಾರ ಬಸವರಾಜ ಸಿಂಧೂರ, ಹೊಸಕೇರಿ, ಭಗವಾನ ಗುಳನ್ನವರ ಇತರರು ಇದ್ದರು.