ರಸ್ತೆ ಅಪಘಾತದಲ್ಲಿ ಶೇ. 90ರಷ್ಟು ಸಾವು ಹೆಲ್ಮೆಟ್ ಧರಿಸದೇ ಇರುವುದರಿಂದ ಆಗುತ್ತವೆ. ರೋಡ್ ಸುರಕ್ಷೆ ಜೀವ ರಕ್ಷಕ ಎಂಬ ಧ್ಯೇಯ ವಾಕ್ಯವಿದೆ. ಆದ್ದರಿಂದ ಸಾರ್ವಜನಿಕರು ರಸ್ತೆ ನಿಯಮ ಪಾಲಿಸಬೇಕು.
ಹರಪನಹಳ್ಳಿ: ಸಾರ್ವಜನಿಕರು ಸಂಚಾರ ನಿಯಮ ಅಳವಡಿಸಿಕೊಳ್ಳಬೇಕೆಂದು ಡಿವೈಎಸ್ಪಿ ಸಂತೋಷ ಚವ್ಹಾಣ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ರಸ್ತೆ ಸುರಕ್ಷಾ ಮಾಸಾಚರಣೆ ಕಾರ್ಯಕ್ರಮದ ಬೈಕ್ ರ್‍ಯಾಲಿಗೆ ಹಸಿರು ನಿಶಾನೆ ತೋರಿಸಿ ಶನಿವಾರ ಮಾತನಾಡಿದರು.ರಸ್ತೆ ಅಪಘಾತದಲ್ಲಿ ಶೇ. 90ರಷ್ಟು ಸಾವು ಹೆಲ್ಮೆಟ್ ಧರಿಸದೇ ಇರುವುದರಿಂದ ಆಗುತ್ತವೆ. ರೋಡ್ ಸುರಕ್ಷೆ ಜೀವ ರಕ್ಷಕ ಎಂಬ ಧ್ಯೇಯ ವಾಕ್ಯವಿದೆ. ಆದ್ದರಿಂದ ಸಾರ್ವಜನಿಕರು ರಸ್ತೆ ನಿಯಮ ಪಾಲಿಸಬೇಕು ಎಂದರು.
ಮೊದಲು ನಾವು ಹೆಲ್ಮೆಟ್ ಧರಿಸಿ ರಸ್ತೆ ಮೇಲೆ ಹೋದರೆ ಜನರು ನಮ್ಮ ಮಾತು ಕೇಳುತ್ತಾರೆ. ನಮಗೆ ನೈತಿಕತೆ ಬರುತ್ತದೆ ಎಂದು ತಮ್ಮ ಪೊಲೀಸ್ ಸಿಬ್ಬಂದಿಗೆ ತಿಳಿಸಿದ ಅವರು, ಹೆಲ್ಮೆಟ್ ಧರಿಸುವುದು ಪ್ಯಾಷನ್ ಅಲ್ವ ಎಂದು ಸ್ಪಷ್ಟಪಡಿಸಿದರು.2025ರಲ್ಲಿ ಹರಪನಹಳ್ಳಿ ಉಪವಿಭಾಗದಲ್ಲಿ ರಸ್ತೆ ಅಪಘಾತದಲ್ಲಿ 68 ಸಾವು, 102 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ ಅವರ, ಹೀಗಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ತಮ್ಮ ಸಿಬ್ಬಂದಿಗೆ ಸೂಚಿಸಿದರು.
ಸಿಪಿಐ ಮಹಂತೇಶ ಸಜ್ಜನ್ ಮಾತನಾಡಿ, ಮೊದಲು ನಮ್ಮ ಸಿಬ್ಬಂದಿ ಹೆಲ್ಮೆಟ್ ಹಾಕಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.ನಗರದ ಕುರುಬರಗೇರಿ, ಹಡಗಲಿ ರಸ್ತೆ, ವಾಲ್ಮೀಕಿ ನಗರ, ತೆಗ್ಗಿನಮಠ, ಹೊಸಪೇಟೆ ರಸ್ತೆಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೈಕ್ ರ್‍ಯಾಲಿ ನಡೆಸಲಾಯಿತು.
ತಾಲೂಕಿನ ವಿವಿಧ ಪೊಲೀಸ್ ಠಾಣೆಗಳ ಪಿಎಸ್‌ಐಗಳಾದ ಶಂಭುಲಿಂಗಹಿರೇಮಠ, ವಿಜಯ ಕೃಷ್ಣ, ಕಿರಣಕುಮಾರ, ನಾಗರತ್ನ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಮೀನಾಕ್ಷಿ ಹಾಗೂ ಎಎಸ್‌ಐ, ಸಿಬ್ಬಂದಿ ಪಾಲ್ಗೊಂಡಿದ್ದರು.ಹರಪನಹಳ್ಳಿಯಲ್ಲಿ ರಸ್ತೆ ಸುರಕ್ಷಾ ಮಾಸಾಚರಣೆ ಕಾರ್ಯಕ್ರಮದ ಬೈಕ್ ರ್‍ಯಾಲಿಗೆ ಡಿವೈಎಸ್ಪಿ ಸಂತೋಷ ಚವ್ಹಾಣ ಚಾಲನೆ ನೀಡಿದರು.