ವಿವೇಕಾನಂದರ ಆದರ್ಶ ಎಲ್ಲರೂ ಪಾಲಿಸಿ: ಕಿರಣಕುಮಾರ

| Published : Jan 14 2024, 01:36 AM IST

ಸಾರಾಂಶ

ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಮೈದಾನದಲ್ಲಿ ನಡೆದ ಯುವ ಸಮ್ಮೇಳನವನ್ನು ಆಶ್ರಮದ ಭೂದಾನಿ ರಾಜಶೇಖರರಡ್ಡಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರುಸ್ವಾಮಿ ವಿವೇಕಾನಂದರ ತತ್ವ ಆದರ್ಶ ಹಾಗೂ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಕಿರಣಕುಮಾರ ವಿವೇಕವಂಶಿ ಹೇಳಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಮೈದಾನದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ರಾಮಕೃಷ್ಣ ವಿವೇಕಾನಂದ ಆಶ್ರಮ ಮತ್ತು ನ್ಯಾಷನಲ್ ಪದವಿ ಮಹಾವಿದ್ಯಾಯ ಮತ್ತು ವಿಸಿಬಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ಯುವ ಸಮ್ಮೇಳನದಲ್ಲಿ ಅವರು ಉಪನ್ಯಾಸ ನೀಡಿದರು.

ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್, ಸಮಾಜ ಸೇವಕರಾದ ಡಾ.ಚನ್ನನಗೌಡ ಪಾಟೀಲ್, ರಾಜಶೇಖರರೆಡ್ಡಿ ಮಾತನಾಡಿದರು.

ವಿಸಿಬಿ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಅಶೋಕ ಬೆನ್ನೂರು, ಉಪಾಧ್ಯಕ್ಷ ಚಂದ್ರಶೇಖರ, ನ್ಯಾಷನಲ್ ಕಾಲೇಜು ಪ್ರಾಚಾರ್ಯ ರಾಮಲಿಂಗಯ್ಯ, ಕಾರ್ಯದರ್ಶಿ ರವಿಕುಮಾರ ಮಸ್ಕಿ, ಕಳಕಪ್ಪ ಗಡಾದ, ಸುಜಿತ್ ಓಸ್ತವಾಲ್ ಇದ್ದರು. ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ನ್ಯಾಷನಲ್ ಕಾಲೇಜಿನಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರವ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಚಾಲನೆ ನೀಡಿದರು. ಡಾ.ಚನ್ನನಗೌಡ ಪಾಟೀಲ್, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್, ಪ್ರಾಚಾರ್ಯ ರಾಮಲಿಂಗಯ್ಯ, ರವಿಕುಮಾರ ಮಸ್ಕಿ ಇದ್ದರು.ವಿವೇಕಾನಂದರ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಿ: ಅನುರಾಧಾಸಿರವಾರ: ಸ್ವಾಮಿ ವಿವೇಕಾನಂದರ ಧ್ಯೇಯ, ಆಶಯ, ಆದರ್ಶಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ಗೈಡ್ ಕ್ಯಾಪ್ಟನ್ ಯು.ಅನುರಾಧಾ ಸಲಹೆ ನೀಡಿದರು.

ಪಟ್ಟಣದ ಶಾಂತಿನಿಕೇತನ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಡೆದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಸಂತ’. ಇಂದಿನ ಯುವ ಜನಾಂಗಕ್ಕೆ ಸ್ವಾಮೀಜಿಯವರ ಆಶಯಗಳಾದ ರಾಷ್ಟ್ರದ ಸಮಗ್ರತೆ, ಏಕತೆ, ರಾಷ್ಟ್ರೀಯ ಭಾವೈಕ್ಯದ ಮಹತ್ವವನ್ನು ಅರಿತು ನಡೆಯಬೇಕು ಎಂದರು.

ಜಯಂತಿ ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಜಾಥಾ ನಡೆಯಿತು. ಮುಖ್ಯ ಶಿಕ್ಷಕ ಸಿ.ಬಾಬು, ಕುಸುಮಾ ಪವಾರ್ ಸೇರಿದಂತೆ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.