ನಮ್ಮ ಹಿಂಬಾಲಕರು ಮತ್ತು ಮುಖಂಡರೇ ಬೆನ್ನಿಗೆ ಚೂರಿ ಹಾಕಿದ್ದಾರೆಂದು ದೊಡ್ಡ ದೊಡ್ಡ ಚುನಾವಣೆಗಳಲ್ಲೂ ಜಾತಿ ಎಂಬ ಅಂಶದ ಆಧಾರದ ಮೇಲೆ ಮತ ಚಲಾವಣೆ ಮಾಡಿಲ್ಲ.

ಚಿಂತಾಮಣಿ: ಕೈವಾರ ಕ್ಷೇತ್ರದ ಚಿಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ನನ್ನ ಸೋಲಿಗೆ ಹಿಂಬಾಲಕರು ಮತ್ತು ಮುಖಂಡರೇ ಕಾರಣ. ಸೋತಿರುವುದಕ್ಕೆ ನನಗೆ ನೋವಿಲ್ಲ.ನಮ್ಮ ನಾಯಕ ಡಾ.ಎಂ.ಸಿ.ಸುಧಾಕರ್ ಸಾಮಾಜಿಕ ನ್ಯಾಯದ ತೀರ್ಮಾನದಿಂದ ನನಗೆ ಚಿಮುಲ್‌ನಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದ್ದರು, ಆದರೆ ನನ್ನ ಮೇಲೆ ಅಥವಾ ನಮ್ಮ ನಾಯಕ ಸಚಿವ ಡಾ.ಎಂ.ಸಿ.ಸುಧಾಕರ್‌ರ ಮೇಲಿನ ವೈಯುಕ್ತಿಕ ಕಾರಣಗಳಿಂದ ನನ್ನನ್ನು ಸೋಲಿಸಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ಚಿನ್ನಪ್ಪ ಹೇಳಿದರು.

ನಗರದ ತಾಲೂಕು ಪಂಚಾಯತಿಯ ಗ್ಯಾರಂಟಿ ಸಮಿತಿಯ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಹಿಂಬಾಲಕರು ಮತ್ತು ಮುಖಂಡರೇ ಬೆನ್ನಿಗೆ ಚೂರಿ ಹಾಕಿದ್ದಾರೆಂದು ದೊಡ್ಡ ದೊಡ್ಡ ಚುನಾವಣೆಗಳಲ್ಲೂ ಜಾತಿ ಎಂಬ ಅಂಶದ ಆಧಾರದ ಮೇಲೆ ಮತ ಚಲಾವಣೆ ಮಾಡಿಲ್ಲ. ಬದಲಾಗಿ ವೈಯುಕ್ತಿಕ ಜಿದ್ದಿನಿಂದಾಗಿ ನನ್ನ ವಿರುದ್ಧ ಪಿತೂರಿಯನ್ನು ಮಾಡಿ ನನಗೆ ಸೋಲುಂಟು ಮಾಡಿದ್ದಾರೆಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನಾ ಅಧ್ಯಕ್ಷ ಮುನಿನಾರಾಯಣಪ್ಪ, ಬುಕ್ಕನಹಳ್ಳಿ ಶಿವಣ್ಣ ಮತ್ತಿತರರು ಇದ್ದರು.